ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Dharmendra: ಮೊದಲ ಪತ್ನಿ ಪ್ರಕಾಶ್ ಕೌರ್ ಜತೆ ನಟ ಧರ್ಮೇಂದ್ರ ವಾಸ; ಮಗ ಬಾಬ್ಬಿ ಡಿಯೋಲ್ ಸ್ಪಷ್ಟನೆ

ಬಾಲಿವುಡ್‌ ನಟ ಧರ್ಮೇಂದ್ರ ಅವರ ದಾಂಪತ್ಯ ವಿಚಾರವು ಬಹಳಷ್ಟು ಸುದ್ದಿಯಲ್ಲಿದ್ದು ಅವರು 1954ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು‌. ಆ ಬಳಿಕ ಮತ್ತೆ ಹೇಮಾ ಮಾಲಿನಿ ಅವರನ್ನು ಪ್ರೀತಿಸಿ ಮದುವೆಯಾದರು. ಹೇಮಾ ಮಾಲಿನಿ ತಾವು ಧರ್ಮೇಂದ್ರ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದನ್ನು ಈ ಹಿಂದೆ ಒಪ್ಪಿಕೊಂಡಿದ್ದರು. ಧರ್ಮೇಂದ್ರ ಅವರ ಮಗ ಬಾಬ್ಬಿ ಡಿಯೋಲ್ ಇದೀಗ ತಂದೆ ಯಾರ ಜತೆ ವಾಸ ಮಾಡ್ತಾ ಇದ್ದಾರೆ ಎನ್ನುವುದನ್ನು ಸ್ಪಷ್ಟನೆ ನೀಡಿದ್ದಾರೆ.

ನಟ ಧರ್ಮೇಂದ್ರ ಯಾರ ಜತೆ ವಾಸ ಮಾಡ್ತಾ ಇದ್ದಾರೆ ಗೊತ್ತ?

Dharmendra -

Profile Pushpa Kumari Oct 12, 2025 9:30 PM

ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Dharmendra) ಅವರ ವೈಯಕ್ತಿಕ ಜೀವನ ಆಗಾಗ ಸುದ್ದಿಯಲ್ಲಿರುತ್ತದೆ‌‌. 1960ರಲ್ಲಿ ಅರ್ಜುನ್ ಹಿಂಗೋರಾಣಿ ಅವರ ʼದಿಲ್ ಭಿ ತೇರಾ ಹಮ್ ಭಿ ತೇರೆʼ ಸಿನಿಮಾ ಮೂಲಕ ಧರ್ಮೇಂದ್ರ ಚಿತ್ರರಂಗಕ್ಕೆ ಕಾಲಿಟ್ಟರು. ಇನ್ನು ಧರ್ಮೇಂದ್ರ ಅವರ ದಾಂಪತ್ಯ ವಿಚಾರವು ಬಹಳಷ್ಟು ಸುದ್ದಿಯಲ್ಲಿದ್ದು, ಅವರು 1954ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು‌. ಆ ಬಳಿಕ ಮತ್ತೆ ಹೇಮಾ ಮಾಲಿನಿ ಅವರನ್ನು ಪ್ರೀತಿಸಿ ಮದುವೆಯಾದರು. ಆದರೂ ಹೇಮಾ ಮಾಲಿನಿ ತಾವು ಧರ್ಮೇಂದ್ರ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದನ್ನು ಈ ಹಿಂದೆ ಒಪ್ಪಿಕೊಂಡಿದ್ದರು. ಈಗ ಮಗ ಬಾಬ್ಬಿ ಡಿಯೋಲ್ ಧರ್ಮೇಂದ್ರ ಯಾರ ಜತೆ ವಾಸ ಮಾಡ್ತಾ ಇದ್ದಾರೆ ಎನ್ನುವುದನ್ನು ಸ್ಪಷ್ಟನೆ ನೀಡಿದ್ದಾರೆ.

ಧರ್ಮೇಂದ್ರ ಯಾರ ಜತೆ ವಾಸ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳಲ್ಲಿ ಇದ್ದ ದೀರ್ಘ ಕಾಲದ ಕುತೂಹಲಕ್ಕೆ ಬಾಬ್ಬಿ ಡಿಯೋಲ್ ತೆರೆ ಎಳೆದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ʼʼನನ್ನ ತಾಯಿ (ಕಾಶ್ ಕೌರ್) ಸಹ ಪಪ್ಪ ಜತೆ ಅಲ್ಲಿಯೇ ಇದ್ದಾರೆ. ಅವರಿಬ್ಬರೂ ಸದ್ಯಕ್ಕೆ ಖಂಡಾಲಾದಲ್ಲಿರುವ ಫಾರ್ಮ್‌ಹೌಸ್‌ನಲ್ಲಿದ್ದಾರೆ. ಪಪ್ಪ ಮತ್ತು ಮಮ್ಮಿ ಒಟ್ಟಿಗೆ ಇದ್ದಾರೆ" ಎಂದು ಹೇಳಿದ್ದಾರೆ. ಈ ಮೂಲಕ, ಧರ್ಮೇಂದ್ರ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನು ಓದಿ: Green Movie: ʼಗ್ರೀನ್ʼ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್

ಸಂದರ್ಶನದಲ್ಲಿ, ಬಾಬ್ಬಿ ಡಿಯೋಲ್ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ತಮ್ಮ ತಾಯಿ ಪ್ರಕಾಶ್ ಕೌರ್ ಅವರನ್ನು ಹೆಚ್ಚಾಗಿ ಶ್ಲಾಘಿಸಿದರು. ನಾನು ನೋಡಿದ ಅತ್ಯಂತ ಬಲಿಷ್ಠ ಮಹಿಳೆ ಎಂದು ಹೇಳಿದರು. ಸಣ್ಣ ಹಳ್ಳಿಯಿಂದ ಬಂದು ಒಬ್ಬ ಸೂಪರ್‌ ಸ್ಟಾರ್‌ನ ಪತ್ನಿಯಾಗಿ ನಗರ ಜೀವನಕ್ಕೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. "ನನ್ನ ತಂದೆ ದೊಡ್ಡ ಸ್ಟಾರ್ ಆಗಲು ನನ್ನ ತಾಯಿಯ ಬೆಂಬಲವೇ ಕಾರಣ" ಎಂದು ಹೇಳಿದ್ದಾರೆ.

ಧರ್ಮೇಂದ್ರ-ಪ್ರಕಾಶ್ ಕೌರ್ ದಂಪತಿಯ ಮಕ್ಕಳು ಬಾಲಿವುಡ್‌ ಸ್ಟಾರ್‌ಗಳಾದ ಸನ್ನಿ ಡಿಯೋಲ್ ಮತ್ತು ಬಾಬ್ಬಿ ಡಿಯೋಲ್. ಹೇಮಾ ಮಾಲಿನಿ ಮತ್ತು ಧರ್ಮೇಂದ್ರ 1970ರಲ್ಲಿ ರಿಲೀಸ್‌ ಆದ ʼತುಮ್ ಹಸೀನ್ ಮೈ ಜವಾನ್ʼ ಚಿತ್ರದ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಬಳಿಕ ಪ್ರೀತಿಸಿ 1980ರಲ್ಲಿ ವಿವಾಹವಾದರು. ಇವರಿಗೆ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಎನ್ನುವ ಹೆಣ್ಣು ಮಕ್ಕಳಿದ್ದಾರೆ. ಇದೀಗ ಧರ್ಮೇಂದ್ರ ಅವರ ಎರಡನೇ ಪತ್ನಿ, ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.