ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranveer Singh: ನೀವಿನ್ನೂ ʻಧುರಂಧರ್‌ 1ʼ ಸಿನಿಮಾ ನೋಡಿಲ್ವಾ? ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡ ಪ್ರೇಕ್ಷಕರಿಗೆ ಮತ್ತೊಂದು ಚಾನ್ಸ್‌ ಕೊಟ್ಟ ಚಿತ್ರತಂಡ

Dhurandhar 1 Re-Release: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗಿರುವ ಬೆನ್ನಲ್ಲೇ, ಚಿತ್ರತಂಡವು ಭಾಗ-1 ಅನ್ನು ಮಾರ್ಚ್ 13ರಂದು ವಿಶ್ವಾದ್ಯಂತ ರೀ-ರಿಲೀಸ್ ಮಾಡಿದೆ. ಈ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.

1 ಸಾವಿರ ಸ್ಕ್ರೀನ್‌ಗಳಲ್ಲಿ ‘ಧುರಂಧರ್: ಪಾರ್ಟ್ 1’ ರೀ-ರಿಲೀಸ್;‌ ಹೊಸ ದಾಖಲೆ

-

Avinash GR
Avinash GR Mar 13, 2026 10:44 AM

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌: ದಿ ರಿವೆಂಜ್ʼ‌ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇಡೀ ದೇಶವೇ ಈ ಸಿನಿಮಾಕ್ಕಾಗಿ ಕಾದು ಕುಳಿತಿದೆ. ಈಗಾಗಲೇ ದೇಶಾದ್ಯಂತ 8300 ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಟಿಕೆಟ್‌ ಬುಕ್‌ ಆಗುತ್ತದೆ. ಇದರ ನಡುವೆ ಈ ಚಿತ್ರದ ಪಾರ್ಟ್‌ 1 ಅನ್ನು ನೋಡದೇ ಇರುವವರಿಗೆ ಚಿತ್ರತಂಡ ಒಂದು ಅವಕಾಶ ನೀಡಿದೆ.

ಪುನಃ ರಿಲೀಸ್ ಆದ ಧುರಂಧರ್‌ 1

ʻಧುರಂಧರ್‌ 1ʼ ಚಿತ್ರವು ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿ, ಅಲ್ಲಿಯೂ ಟ್ರೆಂಡ್ ಆಗಿದೆ. ಆದರೂ ಈ ಚಿತ್ರವನ್ನು ಕೆಲವರು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡಿದ್ದಾರೆ. ಹಾಗೇ ಮಿಸ್‌ ಮಾಡಿಕೊಂಡಿವರಿಗೆಂದೇ ಚಿತ್ರತಂಡ ಒಂದು ಅವಕಾಶ ನೀಡಿದೆ.

ʻಧುರಂಧರ್‌: ದಿ ರಿವೆಂಜ್ʼ‌ ನೋಡುವುದಕ್ಕೂ ಮುನ್ನ ಅದರ ಪಾರ್ಟ್‌ 1 ಅನ್ನು ಥಿಯೇಟರ್‌ನಲ್ಲಿ ನೋಡಿ ಎಂದು ಮಾರ್ಚ್‌ 13ರಂದು ʻಧುರಂಧರ್‌: ಪಾರ್ಟಟ್ 1ʼ‌ ಚಿತ್ರವನ್ನು ರೀ-ರಿಲೀಸ್‌ ಮಾಡಲಾಗಿದೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ವಿಶ್ವಾದ್ಯಂತ 1000 ಸ್ಕ್ರೀನ್‌ಗಳಲ್ಲಿ ರೀ-ರಿಲೀಸ್‌ ಮಾಡಲಾಗಿದೆ. ಇದು ಕೂಡ ಹೊಸ ದಾಖಲೆ ಆಗಿದೆ.

ʻನೋ toxicity, ಓನ್ಲೀ ಧುರಂಧರ್‌ʼ; ಯಶ್‌ ಸಿನಿಮಾವನ್ನೇ ಟ್ರೋಲ್‌ ಮಾಡಿದ್ರಾ ನಟಿ ಸಾರಾ ಅರ್ಜುನ್?‌ ಅಸಲಿ ವಿಚಾರ ಇಲ್ಲಿದೆ!

ನೆಟ್‌ಫ್ಲಿಕ್ಸ್‌ನಲ್ಲೂ ಹೊಸ ದಾಖಲೆ

ಸದ್ಯ ಧುರಂಧರ್‌ ಪಾರ್ಟ್‌ 1 ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದರಲ್ಲಿಯೂ ಕೂಡ ಹೊಸ ದಾಖಲೆಯೊಂದನ್ನು ಈ ಸಿನಿಮಾ ಬರೆದಿದೆ. ಹೌದು, ಈ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾವು ಡಿಜಿಟಲ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಆರನೇ ವಾರಾಂತ್ಯದ ಅಂತ್ಯಕ್ಕೆ ಈ ಚಿತ್ರವು ಬರೊಬ್ಬರಿ 23 ಮಿಲಿಯನ್ (2.3 ಕೋಟಿ) ವೀಕ್ಷಣೆಗಳನ್ನು ಪಡೆಯುವ ಮೂಲಕ ಸದ್ದು ಮಾಡುತ್ತಿದೆ.

2024ರ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಬಳಿಕ ಒಟಿಟಿಗೆ ಬಂದ ಭಾರತೀಯ ಸಿನಿಮಾಗಳ ಪೈಕಿ ಅತಿ ಹೆಚ್ಚು ವೀಕ್ಷಣೆಗೊಳಪಟ್ಟ ಚಿತ್ರ ಎಂಬ ಹೆಗ್ಗಳಿಕೆಗೆ ಧುರಂಧರ್‌ 1 ಪಾತ್ರವಾಗಿದೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

ಮಾರ್ಚ್‌ 19ರಂದು ಧುರಂಧರ್‌ 2 ರಿಲೀಸ್

ಧುರಂಧರ್‌ ಸರಣಿಯ ಎರಡನೇ ಭಾಗ ಮಾರ್ಚ್ 19 ರಂದು ಯುಗಾದಿ, ಗುಡಿ ಪಾಡ್ವಾ ಮತ್ತು ಈದ್ ಹಬ್ಬಗಳ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಕೇವಲ ಹಿಂದಿಯಲ್ಲಿ ಮಾತ್ರ ಲಭ್ಯವಿತ್ತು. ಆದರೆ, ಸೀಕ್ವೆಲ್ ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ವಿಶೇಷ.

ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಕಳೆದ ಡಿಸೆಂಬರ್ 5 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ವಿಶ್ವಾದ್ಯಂತ 1,300 ಕೋಟಿ ಗಳಿಸಿದ್ದ ಈ ಚಿತ್ರವು ಭಾರತದ ಮಾರುಕಟ್ಟೆಯಲ್ಲೇ ಭರ್ತಿ ಒಂದು ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿದ್ದು ಹೊಸ ದಾಖಲೆ ಆಗಿತ್ತು.