ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chaithra Achar: ಚೈತ್ರಾ ಆಚಾರ್‌ಗೆ ಪೊಲೀಸ್‌ ಉದ್ಯೋಗಿ ಅಸಭ್ಯ ಮೆಸೇಜ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ನಟಿ

Chaithra Achar: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ಸೆಲೆಬ್ರಿಟಿಗಳು, ರೀಲ್ಸ್ ಸ್ಟಾರ್‌ ನಟರು ಹಾಗೂ ನಟಿಯರಿಗೆ ಅಸಭ್ಯವಾಗಿ ಕಾಮೆಂಟ್ ಮಾಡುವುದು ಕಾಮನ್‌ ಆಗಿ ಬಿಟ್ಟಿದೆ. ಆದರೆ, ಈ ಬಾರಿ ಇಂತಹದ್ದೇ ಕೃತ್ಯ ಎಸಗಿದ ಕಿಡಿಗೇಡಿಯೊಬ್ಬನಿಗೆ ಚೈತ್ರಾ ಆಚಾರ್ ಅವರು ಸರಿಯಾದ ಪಾಠ ಕಲಿಸಿದ್ದಾರೆ.

ಚೈತ್ರಾ ಆಚಾರ್‌ಗೆ ಪೊಲೀಸ್‌ ಉದ್ಯೋಗಿ ಅಸಭ್ಯ ಮೆಸೇಜ್!

ಚೈತ್ರಾ ಆಚಾರ್​ -

Yashaswi Devadiga
Yashaswi Devadiga May 15, 2026 8:25 PM

ಚೈತ್ರಾ ಆಚಾರ್​ (chaithra achar) ಕನ್ನಡ ಚಿತ್ರರಂಗದ ನಾಯಕಿ ಮತ್ತು ಗಾಯಕಿ (Singer). ವಿಭಿನ್ನ ಪಾತ್ರಗಳಿಗೆ ಸಂಬಂಧಪಟ್ಟಂತೆ ಆಗಾಗ ಫೋಟೋಶೂಟ್‌ಗಳನ್ನ (Photoshoot) ಮಾಡಿಸುತ್ತಿರುತ್ತಾರೆ. ಸ್ಯಾಂಡಲ್‌ವುಡ್ ನಟಿ ಚೈತ್ರಾ ಜೆ. ಆಚಾರ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಸಭ್ಯ ಸಂದೇಶ ಕಳುಹಿಸಿದ ನೆಟ್ಟಿಗನಿಗೆ ಕಾನೂನು ಕ್ರಮಕ್ಕೆ ಮುಂದಾದಾಗ, ಆತ ಕ್ಷಮೆಯಾಚಿಸಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ಸೆಲೆಬ್ರಿಟಿಗಳು, ರೀಲ್ಸ್ ಸ್ಟಾರ್‌ ನಟರು ಹಾಗೂ ನಟಿಯರಿಗೆ ಅಸಭ್ಯವಾಗಿ ಕಾಮೆಂಟ್ ಮಾಡುವುದು ಕಾಮನ್‌ ಆಗಿ ಬಿಟ್ಟಿದೆ. ಆದರೆ, ಈ ಬಾರಿ ಇಂತಹದ್ದೇ ಕೃತ್ಯ ಎಸಗಿದ ಕಿಡಿಗೇಡಿಯೊಬ್ಬನಿಗೆ ಚೈತ್ರಾ ಆಚಾರ್ ಅವರು ಸರಿಯಾದ ಪಾಠ ಕಲಿಸಿದ್ದಾರೆ.

ಇದನ್ನೂ ಓದಿ: Akshay Kumar: ಅಕ್ಷಯ್‌ ಕುಮಾರ್‌ ನಟನೆಯ 'ವೆಲ್ಕಮ್ ಟು ದಿ ಜಂಗಲ್' ಟೀಸರ್‌ ಔಟ್‌!

ಸಂದೇಶ ಏನಿತ್ತು?

ಮಹೇಶ್ ಹೊಸಮನಿಯ ಸಂದೇಶ ನೋಡಿ ಕೆರಳಿ ಕೆಂಡವಾದ ಚೈತ್ರಾ ಕೂಡಲೇ ತಮಗೆ ಬಂದ ಮೆಸೇಜ್‌ನ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

''ಈ ವ್ಯಕ್ತಿ ಪೊಲೀಸ್ ಕೆಲಸ ಮಾಡದೇ ನೈತಿಕ ಪೊಲೀಸ್‌ಗಿರಿ ಮಾಡ್ತಿದ್ದಾನೆ. ದಯವಿಟ್ಟು ಸೂಕ್ತ ಕ್ರಮ ಕೈಗೊಳ್ಳಿ'' ''ಗೌರವಾನ್ವಿತ ಬೆಂಗಳೂರು ಸಿಟಿ ಪೊಲೀಸ್‌ ಅವರೇ, ಹೊಸಮನಿ ಈ ವ್ಯಕ್ತಿ ನಿಮ್ಮ ಡಿಪಾರ್ಟ್‌ಮೆಂಟ್‌ ಅನ್ಸುತ್ತೆ. ಅವನು ಕೇಳಿದ ಅಸಭ್ಯ ಪ್ರಶ್ನೆಗೆ ದಯವಿಟ್ಟು ನೀವು ಉತ್ತರ ಕೊಡಬಹುದೇ?'' ಎಂದು ಪ್ರಶ್ನೆ ಮಾಡಿದ್ದಾರೆ.

ಮೆಸೇಜ್‌ ಹಾಕಿದ್ದಕ್ಕೆ ತಪ್ಪಾಯ್ತು

ಚೈತ್ರಾ ಅವರು ಈ ರೀತಿ ಶೇರ್‌ ಮಾಡಿದ ಕೂಡಲೇ ಆತ ಕ್ಷಮೆ ಯಾಚಿಸಿದ್ದಾನೆ. 'ಸಾರಿ ಮೇಡಂ, ಇತರ ಮೆಸೇಜ್‌ ಹಾಕಿದ್ದಕ್ಕೆ ತಪ್ಪಾಯ್ತು. ನಾನು ನಿಮ್ಮ ಮೇಲಿನ ಕಾಳಜಿಗೆ ಈ ರೀತಿ ಮೇಸಜ್‌ ಹಾಕಿದೆ. ಅದರಲ್ಲಿರುವ ಅಕ್ಷರಗಳು ತಪ್ಪಾಗಿರಬಹುದು, ಆದರೆ ನಾನು ನಿಮ್ಮ ಮೇಲಿನ ಕನ್ಸರ್ನ್‌ಗೆ ಹಾಕಿರೋದು. ಪ್ಲೀಸ್‌ ಪೋಸ್ಟ್‌ ತೆಗೆಯಿರಿ ಮೇಡಂ.

chaithra achar

ಇದು ನನ್ನ ಕೆರಿಯರ್‌ಗೆ ಸಮಸ್ಯೆಯಾಗುತ್ತದೆ. ಸಾರಿ ಮೇಡಂ. ನಾವು ನಿಮ್ಮ ಸಿನಿಮಾ ನೋಡ್ಕೊಂಡೆ ಬಂದಿರೋದು, ನಾನು ನಿಮ್ಮ ಅಭಿಮಾನಿ. ನಾವು ನಿಮಗೆ ಇತರ ಫೋಟೋ ಹಾಕಿದರೆ ತಪ್ಪಾಗಬಹುದು, ಆದರೆ ನಿಮ್ಮ ಕಾಳಜಿಗೋಸ್ಕರ ಮೇಡಂ. ದಯವಿಟ್ಟು ಸ್ಟೋರಿ ತೆಗೆಯಿರಿ ಮೇಡಂ. ಇದು ನನ್ನ ಕೆರಿಯರ್‌ಗೆ ಸಮಸ್ಯೆಯಾಗುತ್ತದೆ'' ಎಂದು ಮೆಸೆಜ್‌ ಕಳುಹಿಸಿದ್ದಾನೆ.

ಇದನ್ನೂ ಓದಿ: Dhurandhar: ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್‌!

ಆದರೆ ಈ ಕ್ಷಮೆಯನ್ನು ತಿರಸ್ಕರಿಸಿದ ಚೈತ್ರಾ ಆಚಾರ್, ಮತ್ತೆ ಮಹೇಶ್ ಹೊಸಮನಿ ಕಳಿಸಿದ್ದ ಮೆಸೇಜ್‌ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಓರ್ವ ವ್ಯಕ್ತಿ ನನ್ನ ವೃತ್ತಿ ಅಥವಾ ಕೆಲಸದ ಬಗ್ಗೆ ಸಾರ್ವಜನಿಕವಾಗಿ ಅವಹೇಳನ ಮಾಡುವಾಗ ನಾವೇನೂ ಮಾಡಬಾರದಾ? ಅದೇ ವಿಚಾರ ಅವರ ಬುಡಕ್ಕೆ ಬಂದಾಗ ನಿಯಮಗಳು ಬದಲಾಗುತ್ತವೆಯೇ?' ಎಂದು ಚೈತ್ರಾ ಪ್ರಶ್ನೆ ಮಾಡಿದ್ದಾರೆ.