ಅದ್ಧೂರಿಯಾಗಿ ನೆರವೇರಿದ ಚಿಕ್ಕಣ್ಣ- ಪಾವನ ವಿವಾಹ; ತಾಳಿ ಕಟ್ಟುವ ವೇಳೆ ವಧು ಭಾವುಕ
Chikkanna and Pavana's wedding: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಹಾಗೂ ಪಾವನಾ ಅವರೊಂದಿಗೆ ಇಂದು ವಿವಾಹವಾಗಿದ್ದಾರೆ. ಮೈಸೂರಿನ ಪ್ರಸಿದ್ಧ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಮದುವೆ ನಡೆದಿದೆ. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ನಟ ಚಿಕ್ಕಣ್ಣ ವಿವಾಹ -
ಮೈಸೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಹಾಗೂ ಪಾವನಾ ಅವರೊಂದಿಗೆ ಇಂದು ವಿವಾಹವಾಗಿದ್ದಾರೆ. ಮೈಸೂರಿನ ಪ್ರಸಿದ್ಧ (Actor Chikkanna Wedding) ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಮದುವೆ ನಡೆದಿದೆ. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಗುರುವಾರ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ಪಾವನಾ ಅವರ ನಿವಾಸದಲ್ಲಿ ಅರಿಶಿಣ ಶಾಸ್ತ್ರ ನೆರವೇರಿತ್ತು. ನಿನ್ನೆ ಚಿಕ್ಕಣ್ಣ ಮತ್ತು ಪಾವನಾ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಶುಭಕೋರಿದ್ದಾರೆ. ನಟರಾದ ಮಂಡ್ಯ ರಮೇಶ್, ಡಾಲಿ ಧನಂಜಯ, ನಿರ್ದೇಶಕ ಎ.ಪಿ. ಅರ್ಜುನ್ ರೈಲ್ವೆ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾದ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ನವ ಜೋಡಿಗೆ ಶುಭ ಹಾರೈಸಿದರು. ಮೈಸೂರಿನ ಖಾಸಗಿ ಕಲ್ಯಾಣ ಮಂಟಪ ಪ್ರಸಿದ್ಧ ಸ್ಪೆಕ್ಟ್ರಮ್ ಹಾಲ್ ಎನ್ನುವ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಚಿಕ್ಕಣ್ಣ ಮದುವೆ ನೆರವೇರಿದೆ. ತಾಳಿ ಕಟ್ಟುವ ವೇಳೆಯಲ್ಲಿ ವಧು ಪಾವನ ಭಾವುಕರಾಗಿದ್ದಾರೆ.
ವಿಡಿಯೋ ನೋಡಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ಪಾವನ ಕೆ.ಸಿ ಗೌಡ ಅವರು ಇಂಜಿನಿಯರ್ ಓದಿದ್ದಾರೆ. ಇನ್ನು ಚಿಕ್ಕಣ್ಣ ತಮ್ಮ ಹಾಸ್ಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ನಾಯಕನಾಗಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವೈಯಕ್ತಿಕ ಬದುಕಿನಲ್ಲೂ ಹೊಸ ಹೆಜ್ಜೆ ಇಡುತ್ತಿರುವ ಚಿಕ್ಕಣ್ಣಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಚಿಕ್ಕಣ್ಣ ಯಶ್ ನಟನೆಯ 'ಕಿರಾತಕ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಅಪಾರ ಜನಪ್ರಿಯತೆ ಪಡೆದರು. ಬಳಿಕ ಐರಾವತ ,ರನ್ನ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಯಶಸ್ಸುಗಳಿಸಿದ್ದಾರೆ. ತಮ್ಮ ಹಾಸ್ಯ ಪ್ರತಿಭೆಯ ಮೂಲಕ ರಂಜಿಸಿದರು. ಸದ್ಯ ಹೀರೋ ಆಗಿ ನಟಿಸುತ್ತಿದ್ದಾರೆ. 'ಉಪಾಧ್ಯಕ್ಷ' ಮತ್ತು ಲಕ್ಷ್ಮೀಪುತ್ರ ಸಿನಿಮಾದ ಮೂಲಕ ನಾಯಕ ನಟನಾಗಿ ಅಭಿನಯಿಸಿದ್ದಾರೆ.