ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾಕಾನ್ ವೇದಿಕೆಯಲ್ಲಿ 'ಟಾಕ್ಸಿಕ್' ಚಿತ್ರದ 9 ನಿಮಿಷಗಳ ಪ್ರಿವ್ಯೂ ಪ್ರದರ್ಶನ; ಹಾಲಿವುಡ್ ಮಟ್ಟದಲ್ಲಿ ಯಶ್ ಸಿನಿಮಾ ಹವಾ!

ಲಾಸ್ ವೇಗಾಸ್‌ನಲ್ಲಿ ನಡೆದ 'ಸಿನಿಮಾಕಾನ್ 2026' ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ 9 ನಿಮಿಷಗಳ ವಿಶೇಷ ಪ್ರಿವ್ಯೂ ಪ್ರದರ್ಶಿಸಲಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು 1940 ರಿಂದ 1970 ರ ಕಾಲಘಟ್ಟದ ಕಥೆಯನ್ನು ಹೊಂದಿದ್ದು, ಜೂನ್ 4 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಆಕ್ಷನ್ ಮತ್ತು ಮಾಸ್ ಅಪೀಲ್ ಅಂತರಾಷ್ಟ್ರೀಯ ಮಟ್ಟದ ವೀಕ್ಷಕರನ್ನು ಬೆರಗುಗೊಳಿಸಿದೆ.

'ಟಾಕ್ಸಿಕ್' ಚಿತ್ರದ 9 ನಿಮಿಷಗಳ ಪ್ರಿವ್ಯೂ ಪ್ರದರ್ಶನ;  ನೋಡಿದವರು ಏನಂದ್ರು?

-

Avinash GR
Avinash GR Apr 17, 2026 3:23 PM

ʻರಾಕಿಂಗ್‌ ಸ್ಟಾರ್‌ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಪ್ರಚಾರವು ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ನಡೆದ 'ಸಿನಿಮಾಕಾನ್ 2026' (CinemaCon 2026) ಕಾರ್ಯಕ್ರಮದಲ್ಲಿ ಚಿತ್ರತಂಡ 9 ನಿಮಿಷಗಳ ಸುದೀರ್ಘ ಪ್ರಿವ್ಯೂ ಅನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ರಿಲೀಸ್‌ ಆದ ಟಾಕ್ಸಿಕ್‌ ಟೀಸರ್‌ಗಿಂತ ಈ 9 ನಿಮಿಷಗಳ ಪ್ರಿವ್ಯೂ ಹೆಚ್ಚು ವಿವರವಾಗಿದ್ದು, ಸಿನಿಮಾದ ಒಳನೋಟವನ್ನು ಇನ್ನಷ್ಟು ಸಿವಿಸ್ತಾರವಾಗಿ ತಿಳಿಸಿದೆಯಂತೆ.

ಇದು ಸಾರ್ವಜನಿಕವಾಗಿ ರಿಲೀಸ್‌ ಆಗಿಲ್ಲ

ಅಂದಹಾಗೆ, ಟಾಕ್ಸಿಕ್‌ ಸಿನಿಮಾದ ಪ್ರಿವ್ಯೂ ಸಾರ್ವಜನಿಕವಾಗಿ ನಡೆದಿಲ್ಲ. ಇದು ಕೇವಲ 'ಸಿನಿಮಾಕಾನ್ 2026' ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಿಗೆ ತೋರಿಸಲಾಗಿದೆ. ಚಿತ್ರದ ಹಿನ್ನೆಲೆ, ಪಾತ್ರಗಳು ಮತ್ತು ಆಕ್ಷನ್ ದೃಶ್ಯಗಳು ಈ 9 ನಿಮಿಷಗಳ ಪ್ರಿವ್ಯೂನಲ್ಲಿ ಇದ್ದವು ಎನ್ನಲಾಗಿದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ವಿಶ್ವಾದ್ಯಂತ ರಿಲೀಸ್‌ ಮಾಡಲು ಈ ಪ್ರಿವ್ಯೂ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

Yash Toxic movie : ‘ಟಾಕ್ಸಿಕ್’ ಜೊತೆ ಕ್ಲ್ಯಾಶ್ ತಪ್ಪಿಸಲು ರಿಲೀಸ್ ದಿನಾಂಕ ಚೇಂಜ್‌; ಯಾವುದು ಆ ಬಾಲಿವುಡ್ ಸ್ಟಾರ್ ಸಿನಿಮಾ ?

ಈ ಪ್ರಿವ್ಯೂ ನೋಡಿದವರು ಏನಂದ್ರು?

ಕಾರ್ಯಕ್ರಮದಲ್ಲಿ ಭಾಗವಹಿಸಿ ಟಾಕ್ಸಿಕ್ ಪ್ರಿವ್ಯೂ ನೋಡಿದವರು ಈ ಬಗ್ಗೆ ಮಾತನಾಡಿದ್ದು, "ಸಿನಿಮಾಕಾನ್‌ನಲ್ಲಿ ನಾವು ಟಾಕ್ಸಿಕ್ ಚಿತ್ರದ 9 ನಿಮಿಷಗಳ ಪ್ರಿವ್ಯೂ ನೋಡಿದ್ದೇವೆ. ಇದು ಈವರೆಗೆ ತೋರಿಸಿರುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಹೊಂದಿದೆ. ಚಿತ್ರದ ಜಗತ್ತು ಮತ್ತು ಅದರ ಕಥಾವಸ್ತುವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಸಿನಿಮಾದ ಮಾಸ್ ಅಪೀಲ್ ಹಾಗೂ ಪಾತ್ರಗಳ ಆಳವಾದ ಸಂಯೋಜನೆ ಅಲ್ಲಿದ್ದವರನ್ನು ಸೆಳೆಯಿತು. ಅಲ್ಲಿ ನೆರೆದಿದ್ದವರಿಗೆ ಈಗ ಚಿತ್ರದ ಬಗ್ಗೆ ನಿಜವಾದ ಸಂಚಲನ ಮೂಡಿದೆ" ಎಂದು ತಿಳಿಸಿದ್ದಾರೆ.

H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್

"ಪ್ರದರ್ಶನದ ನಂತರ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಈ ಸಿನಿಮಾ 1940 ರಿಂದ 1970 ರ ಕಾಲಘಟ್ಟದಲ್ಲಿ ನಡೆಯುತ್ತದೆ. ಇದರ ಕಥಾಹಂದರವು 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' (fairy tale for grown-ups) ಎಂಬ ಶೈಲಿಯಲ್ಲಿದ್ದು, ಇದು ವೀಕ್ಷಕರ ಮನಸ್ಸಿನಲ್ಲಿ ಉಳಿಯುವಂತಿದೆ. ಇದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ" ಎಂದು ಹೇಳಿದ್ದಾರೆ.

ಯಶ್ ನಟಿಸಿ, ಸಹ ನಿರ್ಮಾಣ ಮಾಡಿರುವ 'ಟಾಕ್ಸಿಕ್' ಸಿನಿಮಾವು ಘೋಷಣೆಯಾದ ದಿನದಿಂದಲೂ ಸದ್ದು ಮಾಡುತ್ತಲೇ ಇದೆ. ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆಯ ಈ ಚಿತ್ರವು ಜೂನ್ 4 ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.