Congratulations Brother: ನವೆಂಬರ್ 21ಕ್ಕೆ ಬಿಡುಗಡೆಯಾಗಲಿದೆ "Congratulations ಬ್ರದರ್; ಪ್ರತಿ ಜಿಲ್ಲೆಯಲ್ಲೂ ಪ್ರಚಾರ ಶುರು
ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ "Congratulations ಬ್ರದರ್". ಈಗ ಈ ಜನಪ್ರಿಯ ಡೈಲಾಗ್ ಸಿನಿಮಾ ಶೀರ್ಷಿಕೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಹರೀಶ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಈ ಚಿತ್ರ ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
                                -
 Vishakha Bhat
                            
                                Oct 26, 2025 1:40 PM
                                
                                Vishakha Bhat
                            
                                Oct 26, 2025 1:40 PM
                            ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ "Congratulations ಬ್ರದರ್". ಈಗ ಈ ಜನಪ್ರಿಯ ಡೈಲಾಗ್ ಸಿನಿಮಾ ಶೀರ್ಷಿಕೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನದ, ಹೆಸರಾಂತ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಹಾಗೂ ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಹಾಗೂ ಸಂಜನ್ ದಾಸ್ ನಾಯಕಿಯರಾಗಿ ನಟಿಸಿರುವ "congratulations ಬ್ರದರ್" ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
ಹರೀಶ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಈ ಚಿತ್ರ ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಬೀದರ್ ನಿಂದ ಚಾಮರಾಜನಗರದವರೆಗೂ ಚಿತ್ರತಂಡ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಿಗೂ ಭೇಟಿ ನೀಡಿ ಜನರಿಗೆ ಚಿತ್ರದ ಬಗ್ಗೆ ಮಾಹಿತಿ ನೀಡಲಿದೆ. ಅದಕ್ಕಾಗಿ ನೂತನ ಪ್ರಚಾರದ ವಾಹನವೊಂದು ಸಿದ್ಧವಾಗಿದೆ. ಈ ವಿನೂತನ ಪ್ರಚಾರಕ್ಕೆ ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದು ಅವರು ವೀರೇಶ ಚಿತ್ರಮಂದಿರದ ಬಳಿ ಚಾಲನೆ ನೀಡಿದರು. ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಮೊದಲಿನಿಂದಲೂ ಸಂತು ಅವರು ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಇನ್ನೂ ಇಂದಿನ ಸಮಾರಂಭದಲ್ಲಿ ಚಿತ್ರದ ಎಲ್ಲಾ ಕಲಾವಿದರು ಭಾಗವಹಿಸಿರುವುದು ನೋಡಿ ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಸಾ.ರಾ.ಗೋವಿಂದು ಅವರು ಹಾರೈಸಿದರು. ನಮ್ಮ ಚಿತ್ರ ಬಿಡುಗಡೆಯ ಹಂತ ತಲುಪಿದೆ. ನವೆಂಬರ್ 21 ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಅದರ ಪೂರ್ವಭಾವಿಯಾಗಿ ಕಲಾವಿದರು ಕರ್ನಾಟಕದಾದ್ಯಂತ ಪ್ರವಾಸ ಮಾಡಲಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರನ್ನು, ವಿಶೇಷವಾಗಿ ಯುವ ಸಮುದಾಯವನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ.
ಈ ಸುದ್ದಿಯನ್ನೂ ಓದಿ: Killer Movie: ದಶಕದ ಬಳಿಕ ಸಿನಿಮಾ ನಿರ್ದೇಶನಕ್ಕೆ ಮುಂದಾದ ತಮಿಳು ನಟ ಎಸ್.ಜೆ.ಸೂರ್ಯ; ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ
ಈ ವಿನೂತನ ಪ್ರಚಾರ ಕಾರ್ಯಕ್ಕೆ ಇಂದು ಹಿರಿಯರಾದ ಸಾ.ರಾ.ಗೋವಿಂದು ಅವರು ಚಾಲನೆ ನೀಡಿದ್ದಾರೆ. ಮುನೀಂದ್ರ ಅವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಚಿತ್ರದ ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ತಿಳಿಸಿದರು. ನಿರ್ಮಾಪಕ ಪ್ರಶಾಂತ್ ಕಲ್ಲೂರ್, ಸಹ ನಿರ್ಮಾಪಕ ಹರೀಶ್ ರೆಡ್ಡಿ, ನಾಯಕ ರಕ್ಷಿತ್ ನಾಗ್, ನಾಯಕಿಯರಾದ ಸಂಜನದಾಸ್, ಅನೂಷ, ಕಲಾವಿದ ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
 
            