ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Love Mocktail 3: ಇದು ಸಿನಿಮಾದ ಅಂತಿಮ ಕತೆ; ‘ಲವ್ ಮಾಕ್ಟೆಲ್ 3’ ಟ್ರೈಲರ್ ಔಟ್‌

Darling Krishna: ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 07) ಬಿಡುಗಡೆ ಆಗಿದೆ. ‘ಲವ್ ಮಾಕ್ಟೆಲ್ 3’ (ಸಿನಿಮಾನಲ್ಲಿ ಆ ಪುಟ್ಟ ಹುಡುಗಿಯದ್ದೇ ಕತೆ ಇದೆ. ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ಮಿಸಿ, ನಿರ್ದೇಶನ ಮಾಡಿರುವ ʻಲವ್‌ ಮಾಕ್‌ಟೇಲ್‌ 3ʼ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ವಿತರಣೆ ಮಾಡುತ್ತಿದೆ. ಇದೀಗ ಟಾಕ್ಸಿಕ್‌ ಬದಲಿಗೆ, ಆ ಜಾಗಕ್ಕೆ ʻಲವ್‌ ಮಾಕ್‌ಟೇಲ್‌ 3ʼ ಚಿತ್ರವನ್ನು ರಿಲೀಸ್‌ ಮಾಡಲು ಮುಂದಾಗಿದೆ.

ಇದು ಸಿನಿಮಾದ ಅಂತಿಮ ಕತೆ; ‘ಲವ್ ಮಾಕ್ಟೆಲ್ 3’ ಟ್ರೈಲರ್ ಔಟ್‌

ಡಾರ್ಲಿಂಗ್‌ ಕೃಷ್ಣ -

Yashaswi Devadiga
Yashaswi Devadiga Mar 7, 2026 9:26 PM

ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 07) ಬಿಡುಗಡೆ ಆಗಿದೆ. ‘ಲವ್ ಮಾಕ್ಟೆಲ್ 3’ (ಸಿನಿಮಾನಲ್ಲಿ ಆ ಪುಟ್ಟ ಹುಡುಗಿಯದ್ದೇ ಕತೆ ಇದೆ. ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ಮಿಸಿ, ನಿರ್ದೇಶನ ಮಾಡಿರುವ ʻಲವ್‌ ಮಾಕ್‌ಟೇಲ್‌ 3ʼ (Love Mocktail-3 ) ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ವಿತರಣೆ ಮಾಡುತ್ತಿದೆ. ಇದೀಗ ಟಾಕ್ಸಿಕ್‌ ಬದಲಿಗೆ, ಆ ಜಾಗಕ್ಕೆ ʻಲವ್‌ ಮಾಕ್‌ಟೇಲ್‌ 3ʼ ಚಿತ್ರವನ್ನು ರಿಲೀಸ್‌ ಮಾಡಲು ಮುಂದಾಗಿದೆ. ಟ್ರೇಲರ್​​ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಹೇಳಿರುವಂತೆ ಇದು ‘ಲವ್ ಮಾಕ್ಟೆಲ್ 3’ ಸಿನಿಮಾದ ಅಂತಿಮ ಕತೆ ಆಗಿರಲಿದೆ.

ʻಲವ್‌ ಮಾಕ್‌ಟೇಲ್‌ 3ʼ

ರಣವೀರ್‌ ಸಿಂಗ್‌ ಅವರ ʻಧುರಂಧರ್‌ 2ʼ ಸಿನಿಮಾ ರಿಲೀಸ್‌ ಆಗುತ್ತಿದ್ದರೂ, ಅದರಿಂದ ʻಲವ್‌ ಮಾಕ್‌ಟೇಲ್‌ 3ʼ ಚಿತ್ರಕ್ಕೆ ಎಫೆಕ್ಟ್‌ ಏನೂ ಆಗೋದಿಲ್ಲ. ಯಾಕೆಂದರೆ, ಇದು ಕನ್ನಡ ಆಡಿಯೆನ್ಸ್‌ಗೆಂದೇ ಮಾಡಿರುವ ಸಿನಿಮಾ. ಇದರ ಮಾರುಕಟ್ಟೆಯೇ ಬೇರೆ ಇದೆ.

ಇದನ್ನೂ ಓದಿ: ಹೆಚ್ಚಾಗ್ತಿದೆ 'ಧುರಂಧರ್ 2' ಹವಾ; ಟ್ರೇಲರ್‌ ನೋಡಿದ ಬಾಲಿವುಡ್‌ ಮಂದಿ ರಿಯಾಕ್ಷನ್‌ ಹೇಗಿದೆ?

2020ರಲ್ಲಿ ಲವ್‌ ಮಾಕ್‌ಟೇಲ್‌ ಸಿನಿಮಾ ಮೂಲಕ ನಟರಾಗಿ ಮತ್ತು ನಿರ್ದೇಶಕರಾಗಿ ಗೆದ್ದಿದ್ದ ಡಾರ್ಲಿಂಗ್‌ ಕೃಷ್ಣ, ಆನಂತರ ಅದರ ಮುಂದುವರಿದ ಭಾಗ ಲವ್‌ ಮಾಕ್‌ಟೇಲ್‌ 2 ಮಾಡಿದ್ದರು. ಇದೀಗ ಸದ್ದಿಲ್ಲದೇ ಲವ್‌ ಮಾಕ್‌ಟೇಲ್‌ 3 ಸಿನಿಮಾವನ್ನು ಮಾಡಿದ್ದಾರೆ.

‘ಲವ್ ಮಾಕ್ಟೆಲ್’ ಸರಣಿಯ ಮೊದಲೆರಡು ಸಿನಿಮಾಗಳ ಹಲವು ದೃಶ್ಯಗಳಿಗೆ ಮೊದಲು ತೋರಿಸಲಾಗಿದ್ದು, ಪ್ರೇಕ್ಷಕರಿಗೆ ಕತೆಯನ್ನು ರೀಕಾಲ್ ಮಾಡಲಾಗಿದೆ. ‘ಲವ್ ಮಾಕ್ಟೆಲ್ 2’ ಸಿನಿಮಾನಲ್ಲಿ ಸಣ್ಣ ಮಗುವೊಂದನ್ನು ನಾಯಕ ದತ್ತು ಪಡೆವ ಮೂಲಕ ಸಿನಿಮಾ ಅಂತ್ಯವಾಗಿತ್ತು.

‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ ಮಿಲನಾ ನಾಗರಾಜ್ ಅವರು ಒಟ್ಟಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಕೆಲಸ, ಎಡಿಟರ್ ಮಾಡಿರುವುದು ಶ್ರೀ ಕ್ರೇಜಿ ಮೈಂಡ್.

ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಸಮೃತ್ಥ, ಮಿಲನಾ ನಾಗರಾಜ್, ದಿಲೀಪ್ ರಾಜ್, ಶ್ವೇತ ಪ್ರಸಾದ್ ಇನ್ನೂ ಹಲವರು ನಟಿಸಿದ್ದಾರೆ.



ಸಿನಿಮಾಕ್ಕೆ ಸಂಗೀತ ನೀಡಿರುವುದು ನಕುಲ್ ಅಭಯಂಕರ್. ಕೆ. ವೆಂಕಟ್‌ ನಾರಾಯಣ್‌ ಅವರ ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣದ, ಯಶ್‌ ನಟನೆಯ ʻಟಾಕ್ಸಿಕ್ʼ‌ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದೆ. ಮಾ.19ರಂದು ರಿಲೀಸ್‌ ಆಗಬೇಕಿದ್ದ ಸಿನಿಮಾವು ಈಗ ಜೂನ್‌ 4ರಂದು ರಿಲೀಸ್‌ ಅಗಲಿದೆ. ಈ ವರ್ಷದ ಮಾರ್ಚ್‌ 19, ನಿರ್ಮಾಪಕರ ಪಾಲಿಗೆ ಲಕ್ಕಿ ಎಂದೇ ಹೇಳಬಹುದು. ಯಾಕೆಂದರೆ, ಅಂದು ಯುಗಾದಿ ಹಬ್ಬದ ರಜೆ ಇದೆ. ನಂತರ ರಂಜಾನ್‌ ರಜೆ (ಮಾ.21) ಜೊತೆಗೆ ಲಾಂಗ್‌ ವೀಕೆಂಡ್‌ ಸಿಗಲಿದೆ. ಈ ಸಮಯಕ್ಕೆ ಸಿನಿಮಾ ʻಲವ್‌ ಮಾಕ್‌ಟೇಲ್‌ 3ʼ ಬರಲಿದೆ.

ಇದನ್ನೂ ಓದಿ: Radhika Pandit: ಬರ್ತ್‌ಡೇ ದಿನ ಫ್ಯಾನ್ಸ್‌ ಭೇಟಿ ಮಾಡಿದ ರಾಧಿಕಾ ಪಂಡಿತ್

ಲವ್ ಮಾಕ್ಟೆಲ್ ಸಿನಿಮಾ ಹಿಟ್ ಆಗಿತ್ತು. ಲವ್ ಮಾಕ್ಟೆಲ್-2 ಸಿನಿಮಾ ಜನರ ಮನಸ್ಸು ಗೆದ್ದಿತ್ತು. ಆದರೆ, ಲವ್ ಮಾಕ್ಟೆಲ್-3 ಚಿತ್ರವೂ ಹಿಟ್ ಆಗುವ ರೀತಿನೇ ಇದೆ.