ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Darshan Birthday: ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್‌ ವಿಶ್‌

Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟ ಧನ್ವೀರ್ ಗೌಡ ಉತ್ತಮ ಬಾಂಧವ್ಯ ಹೊಂದಿದ್ದಾರೆ .ಅಷ್ಟೇ ಅಲ್ಲದೆ ನಟ ದರ್ಶನ್ ಅರೆಸ್ಟ್ ಆದ ಆರಂಭದಿಂದಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಜೈಲಿಗೆ ಧನ್ವೀರ್ ಗೌಡ ಭೇಟಿ ನೀಡುತ್ತಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ (Darshan Birthday) ಜೈಲು ಸೇರಿದ ಬಳಿಕ ಕೆಲವರು ಅವರಿಂದ ದೂರಾಗಿದ್ದಾರೆ. ಧನ್ವೀರ್ ಮಾತ್ರ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಧನ್ವೀರ್ ) ತಮ್ಮ ನೆಚ್ಚಿನ ಅಣ್ಣನಿಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ.

ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್‌ ವಿಶ್‌

ದರ್ಶನ್‌ ಬರ್ತ್‌ಡೇ -

Yashaswi Devadiga
Yashaswi Devadiga Feb 16, 2026 9:25 AM

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೊತೆ ನಟ ಧನ್ವೀರ್ ಗೌಡ(Dhanveerah Gowda) ಉತ್ತಮ ಬಾಂಧವ್ಯ ಹೊಂದಿದ್ದಾರೆ .ಅಷ್ಟೇ ಅಲ್ಲದೆ ನಟ ದರ್ಶನ್ ಅರೆಸ್ಟ್ ಆದ ಆರಂಭದಿಂದಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಜೈಲಿಗೆ ಧನ್ವೀರ್ ಗೌಡ ಭೇಟಿ ನೀಡುತ್ತಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ (Darshan Birthday) ಜೈಲು ಸೇರಿದ ಬಳಿಕ ಕೆಲವರು ಅವರಿಂದ ದೂರಾಗಿದ್ದಾರೆ. ಧನ್ವೀರ್ ಮಾತ್ರ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಧನ್ವೀರ್ (Dhanveerah) ತಮ್ಮ ನೆಚ್ಚಿನ ಅಣ್ಣನಿಗೆ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ.

ಬರ್ತ್ ಡೇ ಸೆಲೆಬ್ರೇಷನ್

ಈ ಹಿಂದಿನ ಬರ್ತ್ ಡೇ ಸೆಲೆಬ್ರೇಷನ್ ಮಾಡಿರೋ ವಿಡಿಯೋ ಒಂದನ್ನು ಕೂಡ ಶೇರ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) ಅಂತಲೂ ಬರೆದುಕೊಂಡಿದ್ದಾರೆ. ಇದರಲ್ಲಿ ದರ್ಶನ್ ಮತ್ತು ಧನ್ವೀರ್ ಇದ್ದಾರೆ. ಅದ್ದೂರಿ ಆಗಿಯೇ ಸೆಲೆಬ್ರೇಟ್ ಮಾಡಿದ ಬರ್ತ್ ಡೇ ಕ್ಷಣ ಇದಾಗಿದೆ. ವಿಜಯಕ್ಷ್ಮಿ ದರ್ಶನ್ ಮತ್ತು ಮಗ ವಿನೀಶ್ ಕೂಡ ಈ ಸಡಗರದಲ್ಲಿದ್ದಾರೆ.

ಇದನ್ನೂ ಓದಿ: Darshan Birthday: ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿ; ಪತಿಗೆ ವಿಜಯಲಕ್ಷ್ಮೀ ಕ್ಯೂಟ್‌ ವಿಶ್

ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಸಮಯದಿಂದ ಧನ್ವೀರ್ ಬೆಂಬಲಕ್ಕೆ ನಿಂತಿದ್ದಾರೆ. ಬಳ್ಳಾರಿ ಜೈಲಿನಿಂದ ಬಿಡುಗಡೆಯಾದಾಗ ಸ್ವತಃ ದರ್ಶನ್ ಕಾರ್ ಚಲಾಯಿಸಿಕೊಂಡು ಕರೆದುಕೊಂಡು ಬಂದಿದ್ದರು. ಆ ಬಳಿಕ ವಿಜಯಲಕ್ಷ್ಮಿ ದರ್ಶನ್ ಜೊತೆ ನಿಂತಿದ್ದಾರೆ. ಇದೆಲ್ಲ ಪ್ರಚಾರಕ್ಕಾಗಿ ಎಂದು ಕೆಲವರು ಕುಹಕವಾಡಿದರೂ ಧನ್ವೀರ್ ತಲೆ ಕೆಡಿಸಿಕೊಳ್ಳಲಿಲ್ಲ. ಏನೇ ಆದ್ರೂ ದರ್ಶನ್ ಜೊತೆ ನಿಲ್ತೀನಿ ಎಂದಿದ್ದರು.

ಫೆ. 27 ರಂದು ಸಿನಿಮಾ ತೆರೆಗೆ

ಸಿನಿಮಾ ವಿಚಾರಕ್ಕೆ ಬರೋದಾದರೆ, ನಟ ಧನ್ವಿರ್ ಅವರು ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ ಬಂದರೂ ಕೂಡ ದೊಡ್ಡ ದೊಡ್ಡ ನಟ ನಟಿಯರ ಒಡನಾಟ ಅವರಿಗೆ ಮೊದಲಿನಿಂದಲೂ ಇದೆ. ಧನ್ವೀರ್‌ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಯ್ತು. ಫೆ. 27 ರಂದು ಸಿನಿಮಾ ತೆರೆಗೆ ಬರುತ್ತಿದೆ. ಇನ್ನು, ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನ್ವಿರ್‌ಗೆ ಜೋಡಿಯಾಗಿ ಸಲಗ' ಖ್ಯಾತಿಯ ಸಂಜನಾ ಆನಂದ್‌ ನಟಿಸಿದ್ದಾರೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಧನ್ವೀರ್ ಅವರು 2019ರಲ್ಲಿ ತೆರೆಕಂಡ ಸಿಂಪಲ್ ಸಿನಿ ನಿರ್ದೇಶನದ `ಬಜಾರ್' ಚಿತ್ರದ ಮೂಲಕ ಸ್ವಲ್ಪ ಮಟ್ಟಿಗೆ ಜನ ಮಾನ್ಯತೆ ಪಡೆದು ಬಳಿಕ ಬೈಟು ಲವ್, ಕೈವ, ವಾಮನ ಸಿನಿಮಾಗಳಲ್ಲಿ ಕೂಡ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕ ನಟನೆನಿಸಿದ್ದಾರೆ.

ಇದನ್ನೂ ಓದಿ: Vijay Devarakonda: ಸಿಎಂ ಭೇಟಿ ಮಾಡಿದ ವಿಜಯ್ ದೇವರಕೊಂಡ; ಮದುವೆಗೆ ಆಮಂತ್ರಣ ಆರಂಭಿಸಿದ್ರಾ?

ಇನ್ನು ಧನ್ವಿರ್‌ ಅವ ವಾಮನ ಸಿನಿಮಾ ಕೂಡ ಸಖತ್‌ ಸದ್ದು ಮಾಡಿತ್ತು. ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ನಟನೆಯ 'ವಾಮನ' ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು. ಶಂಕರ್ ರಾಮನ್ ನಿರ್ದೇಶನದ ಚಿತ್ರಕ್ಕೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡಿದ್ದರು. ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಸಂಪತ್ ರಾಜ್, ಆದಿತ್ಯ ಮೆನನ್, ತಾರಾ, ಅವಿನಾಶ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ