ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raj B Shetty: ರಾಜ್‌ - ರಿಷಬ್‌ ನಡುವೆ ಮನಸ್ತಾಪ ಇರೋದು ನಿಜನಾ? ಕ್ಲಾರಿಟಿ ಕೊಟ್ಟ ರಾಜ್ ಬಿ ಶೆಟ್ಟಿ

Rishab Shetty: 45 ಸಿನಿಮಾ ಟ್ರೈಲರ್‌ವನ್ನು ಮೊದಲಿಗೆ ರಿಷಬ್‌ ಅವರು ಲಾಂಚ್‌ ಮಾಡಿದ್ದರು. ಈ ವೇಳೆ ರಾಜ್‌ ಬಿ ಶೆಟ್ಟಿ ಅವರ ಹೆಸರು ಅವರು ಹೇಳಲೇ ಇಲ್ಲ. ರಿಷಬ್ ಶೆಟ್ಟಿ, ‘45’ ಸಿನಿಮಾಕ್ಕೆ ಶುಭ ಕೋರಿ ವಿಡಿಯೋ ಮಾಡಿದ್ದು, ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಹೆಸರನ್ನು ಹೇಳಿಲ್ಲ ಎಂಬ ಚರ್ಚೆಗಳು ಆಗಿದ್ದವು. ರಿಷಬ್ ಶೆಟ್ಟಿಯವರ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ರಾಜ್ ಬಿ ಶೆಟ್ಟಿಯಾಗಲಿ, ರಕ್ಷಿತ್ ಆಗಲಿ ಪೋಸ್ಟ್ ಹಂಚಿಕೊಂಡಿಲ್ಲ.

Raj B Shetty: ರಾಜ್‌ - ರಿಷಬ್‌ ನಡುವೆ ಮನಸ್ತಾಪ ಇರೋದು ನಿಜನಾ?

ರಿಷಬ್‌-ರಾಜ್‌ ಬಿ ಶೆಟ್ಟಿ -

Yashaswi Devadiga
Yashaswi Devadiga Dec 16, 2025 8:40 PM

45 ಸಿನಿಮಾ ಟ್ರೈಲರ್‌ವನ್ನು (45 Cinema Trailer) ಮೊದಲಿಗೆ ರಿಷಬ್‌ (Rishab Shetty) ಅವರು ಲಾಂಚ್‌ ಮಾಡಿದ್ದರು. ಈ ವೇಳೆ ರಾಜ್‌ ಬಿ ಶೆಟ್ಟಿ (Rak B shetty) ಅವರ ಹೆಸರು ಅವರು ಹೇಳಲೇ ಇಲ್ಲ. ರಿಷಬ್ ಶೆಟ್ಟಿ, ‘45’ ಸಿನಿಮಾಕ್ಕೆ ಶುಭ ಕೋರಿ ವಿಡಿಯೋ ಮಾಡಿದ್ದು, ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಹೆಸರನ್ನು ಹೇಳಿಲ್ಲ ಎಂಬ ಚರ್ಚೆಗಳು ಆಗಿದ್ದವು. ರಿಷಬ್ ಶೆಟ್ಟಿಯವರ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ರಾಜ್ ಬಿ ಶೆಟ್ಟಿಯಾಗಲಿ, ರಕ್ಷಿತ್ ಆಗಲಿ ಪೋಸ್ಟ್ ಹಂಚಿಕೊಂಡಿಲ್ಲ. ಕಳೆದ ಬಾರಿ ‘ಕಾಂತಾರ’ ಸಿನಿಮಾಕ್ಕೆ ಈ ಇಬ್ಬರೂ ಸಹ ರಿಷಬ್ ಶೆಟ್ಟಿಗೆ ಸಹಾಯ ಮಾಡಿದ್ದರು. ಆದರೆ ಈ ಬಾರಿ ಇಬ್ಬರೂ ಸಹ ‘ಕಾಂತಾರ: ಚಾಪ್ಟರ್ 1’ (Kantara Chapter 1) ಚಿತ್ರೀಕರಣದಿಂದ ದೂರವೇ ಉಳಿದಿದ್ದರು. ಆ ಈ ಎಲ್ಲದರ ಬಗ್ಗೆ ಈಗ ರಾಜ್‌ ಬಿ ಶೆಟ್ಟಿ ಮಾಧ್ಯಮವೊಂದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: Imanvi: "ಪಾಕ್‌ ಜೊತೆ ಈಕೆಗೆ ನಂಟು ಸಿನಿಮಾದಿಂದ ಕಿತ್ತೊಗೆಯಿರಿ" ; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ರಾಜ್‌ ಬಿ ಶೆಟ್ಟಿ ಹೇಳಿದ್ದೇನು?

ನನಗಂತೂ ಏನೂ ಮನಸ್ತಾಪ ಇಲ್ಲ. ನಾನು ಎಲ್ಲಿಯೂ ಅವರ ಹೆಸರು ಮಿಸ್‌ ಮಾಡಿಲ್ಲ. ನನಗೆ ಅನ್ನಿಸಲ್ಲ ಅವರು ಬೇಕು ಅಂತ ಮೆನ್ಷನ್‌ ಮಾಡಿಲ್ಲ ಅಂತ. ಬೇಕು ಅಂತ ಯಾರೂ ಆ ಥರ ಮಿಸ್‌ ಮಾಡಲ್ಲ. ಫ್ಲೋದಲ್ಲಿ ಹೇಳುವಾಗ ಮಿಸ್‌ ಆಗಿದೆ ಅನ್ಸತ್ತೆ. ಈ ವಿಚಾರ ಅಲ್ಲೇ ಬಿಡಬಹುದು ಅನ್ಸತ್ತೆ, ಅಷ್ಟು ಸೀರೆಯೆಸ್‌ ಆಗೋ ವಿಚಾರ ಅಲ್ಲ ಅದು. ಚುಚ್ಚಬೇಕು ಅಂತ ಯಾಕೆ ಹೀಗೆ ಮಾಡ್ತಾರೆ? ಅದು ನನಗೆ ತಾಗೋದು ಇಲ್ಲ.

ಇನ್ನು ಕಾಂತಾರ 1 ಅಲ್ಲಿ ನಾನು ಭಾಗಿಯಾಗಲ್ಲ ಅಂತ ಮುಂಚೆನೇ ಹೇಳಿದ್ದೆ . ಹಲವು ಸಂದರ್ಶನಗಳಲ್ಲಿ ಈ ಕುರಿತಾಗಿ ಮಾತನಾಡಿದ್ದೆ. ಕಾಂತಾರ ಮೂರನೇ ಭಾಗ ಬಂದರೂ ನಾನು ಅದಕ್ಕೆ ಭಾಗಿಯಾಗಲ್ಲ. ಬೇರೆ ಸಿನಿಮಾ ಮಾಡಿದರೆ, ನನ್ನ ಅವಶ್ಯಕತೆ ಇದ್ದರೆ ಖಂಡಿತ ರಿಷಬ್‌ ಶೆಟ್ಟಿ ಜೊತೆ ಸಿನಿಮಾ ಮಾಡುವೆ. ಮತ್ತೆ ಇದೆಲ್ಲಸಣ್ಣ ವಿಚಾರ, ಜಗಳ ಮಾಡಿಕೊಂಡು ಕೂರೋಕೆ ನಾವು ಕಾಲೇಜು ಮಕ್ಕಳಲ್ಲ. ಈ ರೀತಿ ಇದ್ದರೆ ಇಂಡಸ್ಡ್ರಿ ಕೂಡ ಬೆಳೆಯಲ್ಲ. ರಿಷಬ್ ಶೆಟ್ಟಿ ಮತ್ತು ನನ್ನ ನಡುವೆ ಮನಸ್ತಾಪ ಇಲ್ಲ ಅಂತ ಕ್ಲಾರಿಟಿ ಕೊಟ್ಟಿದ್ದಾರೆ ರಾಜ್‌.

ಇದನ್ನೂ ಓದಿ: Kantara: Chapter -1: ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವಾ? ರಿಷಬ್‌ ಪತ್ನಿ ಪ್ರಗತಿ ಹೇಳಿದ್ದೇನು?

ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಬಿಡುಗಡೆ ಆಗುತ್ತಿದೆ. ರಿಷಬ್ ಶೆಟ್ಟಿ ಅವರು ಸಿನಿಮಾಕ್ಕೆ ಶುಭ ಹಾರೈಸಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು ‘45’ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದರೂ ಸಹ ರಿಷಬ್ ಅವರು ರಾಜ್ ಬಿ ಶೆಟ್ಟಿಯ ಹೆಸರು ಹೇಳಿಲ್ಲ. ಅಲ್ಲದೆ, ‘45’ ಸಿನಿಮಾ ಶಿವಣ್ಣ ಹಾಗೂ ಉಪೇಂದ್ರ ನಟನೆಯ ಸಿನಿಮಾ ಎಂದು ವಿಡಿಯೋನಲ್ಲಿ ಹೇಳಿದ್ದಾರೆ. ಆ ಮೂಲಕ ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಹೆಸರನ್ನು ರಿಷಬ್ ಉಲ್ಲೇಖಿಸಿಲ್ಲ ಎಂಬ ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಿತ್ತು.