ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಸರಾ ಸಂಭ್ರಮದಲ್ಲಿ 2ನೇ ಮಗಳಿಗೆ ʻದೇವಿʼ ಎಂದು ಹೆಸರಿಟ್ಟು ಫೋಟೋ ಹಂಚಿಕೊಂಡ ದೀಪಿಕಾ ಪಡುಕೊಣೆ - ರಣವೀರ್‌ ಸಿಂಗ್‌

ದಸರಾ ಹಬ್ಬದ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಅನೌನ್ಸ್‌ ಮಾಡಿದ್ದಾ ಮತ್ತು ತಮ್ಮಿಬ್ಬರು ಮಕ್ಕಳ ಜೊತೆಗಿನ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. 2ನೇ ಮಗುವಿಗೆ 'ದೇವಿ ಪಡುಕೋಣೆ ಸಿಂಗ್' ಎಂದು ನಾಮಕರಣ ಮಾಡಲಾಗಿದೆ.

ದಸರಾ‌ ಸಂಭ್ರಮದಲ್ಲಿ ದೀಪಿಕಾ ಪಡುಕೋಣೆ - ರಣವೀರ್ 2ನೇ ಮಗಳ ಹೆಸರು ಅನೌನ್ಸ್‌

-

Avinash GR
Avinash GR Oct 20, 2026 7:14 PM

ಬಾಲಿವುಡ್‌ನ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಸರಾ ಹಬ್ಬದ ಶುಭ ದಿನದಂದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಿದ್ದ ಈ ಜೋಡಿ, ಇದೀಗ ತಮ್ಮ ಎರಡನೇ ಮುದ್ದಾದ ಹೆಣ್ಣು ಮಗುವಿನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದು, ಪುಟ್ಟ ಕಂದಮ್ಮನಿಗೆ 'ದೇವಿ ಪಡುಕೋಣೆ ಸಿಂಗ್' (Devi Padukone Singh) ಎಂದು ಹೆಸರಿಟ್ಟಿದ್ದಾರೆ.

ಪ್ರೀತಿ ಮತ್ತು ಸಮೃದ್ಧಿಯ ಪ್ರತೀಕ..

ಎರಡನೇ ಮಗುವಿನ ಜನನದ ಬಳಿಕ ಇದೇ ಮೊದಲ ಬಾರಿಗೆ ಇಡೀ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಿರುವ ಸುಂದರ ಪೋಟೋವನ್ನು ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಆಕರ್ಷಕ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪಿಕಾ, "ಪ್ರೀತಿ ಮತ್ತು ಸಮೃದ್ಧಿಯ ಪ್ರತೀಕ... ದೇವಿ ಪಡುಕೋಣೆ ಸಿಂಗ್" ಎಂದು ಅರ್ಥಪೂರ್ಣ ಅಡಿಬರಹ ನೀಡಿದ್ದಾರೆ. ಹಬ್ಬದ ಕಳೆಯನ್ನು ಹೆಚ್ಚಿಸಿರುವ ಈ ಫೋಟೋದಲಿ ಇಡೀ ಕುಟುಂಬವು ಬಂಗಾರದ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದೆ.

ರಣವೀರ್ ತಮ್ಮ ಹಿರಿಯ ಮಗಳು ದುವಾಳನ್ನು ಎತ್ತಿಕೊಂಡಿದ್ದು, ಆಕೆ ಪುಟ್ಟ ತಂಗಿ ದೇವಿಗೆ ಅಕ್ಕರೆಯ ಮುತ್ತಿಡುತ್ತಿರುವ ದೃಶ್ಯ ಅಭಿಮಾನಿಗಳ ಕಣ್ಮನ ಸೆಳೆಯುತ್ತಿದೆ. ಇತ್ತ ದೀಪಿಕಾ ಪುಟ್ಟ ಕಂದಮ್ಮ ದೇವಿಯನ್ನು ಮಡಿಲಲ್ಲಿಟ್ಟು ಪ್ರೀತಿಯಿಂದ ಹಿಡಿದುಕೊಂಡಿದ್ದು, ಇಡೀ ಕುಟುಂಬದ ವಾತ್ಸಲ್ಯಪೂರ್ಣ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸೆಲೆಬ್ರಿಟಿಗಳಿಂದ ಶುಭ ಹಾರೈಕೆ

ದೀಪಿಕಾ ಮತ್ತು ರಣವೀರ್ ಹಂಚಿಕೊಂಡಿರುವ ಈ ಮುದ್ದಾದ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಬಾಲಿವುಡ್ ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿಯರಾದ ಶಾರ್ವರಿ, ಮೃಣಾಲ್ ಠಾಕೂರ್, ಭೂಮಿ ಪೆಡ್ನೇಕರ್, ಪ್ರಜ್ಞಾ ಜೈಸ್ವಾಲ್ ಹಾಗೂ ಸಿಂಗರ್‌ ಹರ್ಷದೀಪ್ ಕೌರ್ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖರು ಕಮೆಂಟ್ ಬಾಕ್ಸ್‌ನಲ್ಲಿ ಪುಟ್ಟ ದೇವಿಗೆ ಶುಭ ಹಾರೈಸಿದ್ದಾರೆ.

Deepika-Ranveer: ಎರಡನೇ ಮಗುವಿನ ಸಿಹಿ ಸುದ್ದಿ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಜೋಡಿ

ಸೆ.19 ರಂದು ಜನಿಸಿದ್ದ 2ನೇ ಮಗಳು

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಸೆಪ್ಟೆಂಬರ್ 19 ರಂದು ಎರಡನೇ ಮಗುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದರು. ಇದಕ್ಕೂ ಮುನ್ನ, ಈ ತಾರಾ ಜೋಡಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಹೆಣ್ಣು ಮಗು 'ದುವಾ' ಜನಿಸಿದ್ದಳು. ಇದೀಗ ದುವಾಗೆ ಮುದ್ದಾದ ತಂಗಿಯ ಆಗಮನವಾಗಿದ್ದು, ಇಡೀ ಕುಟುಂಬದಲ್ಲಿ ದಸರಾ ಸಂಭ್ರಮ ದುಪ್ಪಟ್ಟಾಗಿದೆ.

ಮಗಳ ಫೋಟೋ ಹಂಚಿಕೊಂಡ ದೀಪಿಕಾ

2018ರಲ್ಲಿ ನಡೆದಿದ್ದ ಮದುವೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 2013ರ 'ಗೋಲಿಯೋನ್ ಕಿ ರಾಸಲೀಲಾ ರಾಮ್-ಲೀಲಾ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ದೀಪಿಕಾ ಮತ್ತು ರಣವೀರ್‌ ಮಧ್ಯೆ ಪ್ರೇಮಾಂಕುರಗೊಂಡಿತ್ತು. ಹಲವು ವರ್ಷಗಳ ಕಾಲ ಪ್ರೀತಿಸಿ, 2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯಗಳ ಪ್ರಕಾರ ದೀಪಿಕಾ - ರಣವೀರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.