ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Om Movie: ಅಬ್ಬಾ! ಮಾಜಿ ಮಾವ ರಜನಿಕಾಂತ್‌ ಮೇಲೆ ಧನುಷ್‌ಗೆ ಎಂಥ ಗೌರವ ನೋಡಿ; ಈ ಒಂದು ನಿರ್ಧಾರದಿಂದ ಎಲ್ಲರ ಮನಗೆದ್ದ ತಮಿಳು ನಟ

Dhanush's Om Movie: ಸೂಪರ್‌ಸ್ಟಾರ್ ರಜನಿಕಾಂತ್ ಅವರ ‘ಜೈಲರ್ 2’ ಹಾಗೂ ನಟ ಸೂರ್ಯ ಅವರ ಹೊಸ ಚಿತ್ರಗಳಿಗೆ ಗೌರವ ನೀಡಿ ನಟ ಧನುಷ್‌ ತಮ್ಮ ʻಓಂʼ ಸಿನಿಮಾವನ್ನು ಮುಂದೂಡಿದ್ದಾರೆ. ಚಿತ್ರರಂಗದ ಹಿತದೃಷ್ಟಿಯಿಂದ ಅನಗತ್ಯ ಪೈಪೋಟಿ ತಪ್ಪಿಸಿರುವ ಧನುಷ್‌ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸಂಬಂಧ ಮುರಿದರೂ ಮಾಜಿ ಮಾವ ರಜನಿಕಾಂತ್ ಮೇಲಿನ ಧನುಷ್ ಪ್ರೀತಿ ಕಮ್ಮಿಯಾಗಿಲ್ಲ‌

-

Avinash GR
Avinash GR Sep 23, 2026 8:10 PM

ತಮಿಳು ಚಿತ್ರರಂಗದ ಪ್ರತಿಭಾವಂತ ನಟ ಧನುಷ್ ಅವರು ಚಿತ್ರರಂಗದ ಮೇಲೆ ಹೊಂದಿರುವ ಗೌರವದಿಂದಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಟ ಸೂರ್ಯ ಅವರ ಬಹುನಿರೀಕ್ಷಿತ ಸಿನಿಮಾಗಳಿಗೆ ಗೌರವ ನೀಡಿ, ತಮ್ಮ ನಟನೆಯ ಬಹುಕೋಟಿ ವೆಚ್ಚದ 'ಓಂ' ಚಿತ್ರದ ಬಿಡುಗಡೆಯನ್ನು ಮುಂದೂಡುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮಾಜಿ ಮಾವ ರಜನಿಕಾಂತ್ ಅವರ ಮೇಲಿರುವ ಗೌರವವನ್ನು ಎತ್ತಿಹಿಡಿದಿರುವ ಧನುಷ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

'ಜೈಲರ್ 2' ಚಿತ್ರಕ್ಕಾಗಿ ʻಓಂʼ ಸಿನಿಮಾ ಪೋಸ್ಟ್‌ಪೋನ್

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಧನುಷ್, "ಒಂದು ಚಿತ್ರದ ಬಿಡುಗಡೆ ದಿನಾಂಕವನ್ನು ಕೊನೆ ಕ್ಷಣದಲ್ಲಿ ಬದಲಾಯಿಸುವುದು ಸವಾಲಿನ ವಿಚಾರವೇ ಹೌದು. ಆದರೆ ನಾವೆಲ್ಲರೂ ಅಪಾರವಾಗಿ ಗೌರವಿಸುವ ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ಜೈಲರ್ 2' ಚಿತ್ರವು ನಮ್ಮ 'ಓಂ' ಸಿನಿಮಾ ಬಿಡುಗಡೆಯಾಗಬೇಕಿದ್ದ ದಿನದ ಹಿಂದಿನ ದಿನವೇ, ಅಂದರೆ ಅಕ್ಟೋಬರ್ 15ರಂದು ತೆರೆಕಾಣುತ್ತಿದೆ. ಅವರ ಮೇಲಿರುವ ಅಪಾರ ಗೌರವದ ಕಾರಣದಿಂದ ನಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.

Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್‌ ಮಾಡಿದ ನಟ ಧನುಷ್!

ಸೂರ್ಯ ಜೊತೆಗೂ ಇಲ್ಲ ಪೈಪೋಟಿ

ಇಷ್ಟೇ ಅಲ್ಲದೆ, ಮುಂಬರುವ ದೀಪಾವಳಿ ಹಬ್ಬದ ರೇಸ್‌ನಿಂದಲೂ ʻಓಂʼ ಚಿತ್ರ ಹಿಂದೆ ಸರಿದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಧನುಷ್, "ನಟ ಸೂರ್ಯ ಅವರ ಹೊಸ ಸಿನಿಮಾ (ಸೀನ್) ಈಗಾಗಲೇ ದೀಪಾವಳಿ ಬಿಡುಗಡೆ ದಿನಾಂಕವನ್ನು ಮೊದಲೇ ಘೋಷಿಸಿದೆ. ಚಿತ್ರೋದ್ಯಮದ ಹಿತದೃಷ್ಟಿಯಿಂದ ಪರಸ್ಪರ ತಿಳುವಳಿಕೆ ಮತ್ತು ಗೌರವ ಬಹಳ ಮುಖ್ಯ. ದೊಡ್ಡ ಚಿತ್ರಗಳ ನಡುವೆ ಅನಗತ್ಯ ಪೈಪೋಟಿ ಇರಬಾರದು ಎಂಬುದು ನಮ್ಮ ಆಶಯ. ಹೀಗಾಗಿ ನಮ್ಮ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ" ಎಂದಿದ್ದಾರೆ.

ಐಶ್ವರ್ಯಾರನ್ನು ಮದುವೆಯಾಗಿದ್ದ ಧನುಷ್‌

ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರೊಂದಿಗೆ‌ ಧನುಷ್‌ ಅವರ 18 ವರ್ಷಗಳ ವೈವಾಹಿಕ ಜೀವನ ಕೊನೆಗೊಂಡಿದ್ದರೂ, ರಜನಿ ಮೇಲಿನ ಧನುಷ್ ಗೌರವ ಕೊಂಚವೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ನಡೆ ಸ್ಪಷ್ಟ ನಿದರ್ಶನ. 'ಅಮರನ್' ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ 'ಓಂ' ಚಿತ್ರದಲ್ಲಿ ಧನುಷ್ ನಟನೆಯೊಂದಿಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀಲೀಲಾ, ಸಾಯಿ ಪಲ್ಲವಿ, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಹಾಗೂ ನಸೀರುದ್ದೀನ್ ಶಾ ಮುಂತಾದ ದಿಗ್ಗಜ ಕಲಾವಿದರ ತಾರಾಗಣವಿದೆ.

ಧನುಷ್‌ ಅವರ ಟ್ವೀಟ್

ಸದ್ಯದ ಮಾಹಿತಿ ಪ್ರಕಾರ, ʻಓಂʼ ಚಿತ್ರತಂಡ ನವೆಂಬರ್ 27 ಅಥವಾ ಡಿಸೆಂಬರ್ 2 ರಂದು ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಅಧಿಕೃತ ಪ್ರಕಟಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.