ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dhruva Sarja: ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಕಾಳಿ; ಮೊದಲ ದಿನ ʻಕೆಡಿʼ ಅಕೌಂಟ್‌ಗೆ ಬಂದ ಹಣವೆಷ್ಟು?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʻಕೆಡಿ: ದಿ ಡೆವಿಲ್ʼ ಸಿನಿಮಾ ಏಪ್ರಿಲ್ 30 ರಂದು ಅದ್ದೂರಿಯಾಗಿ ತೆರೆಕಂಡು ಮೊದಲ ದಿನವೇ ಭರ್ಜರಿ ಕಮಾಯಿ ಮಾಡಿದೆ. ಶೋಮ್ಯಾನ್ ಪ್ರೇಮ್ ನಿರ್ದೇಶನದ ಈ ಚಿತ್ರವು ಬಹುತೇಕ ಕಡೆ ಹೌಸ್‌ಫುಲ್ ಆಗಿವೆ. ಧ್ರುವ ಸರ್ಜಾ ಫ್ಯಾನ್ಸ್‌ಗೆ ಈ ಸಿನಿಮಾದ ಹಬ್ಬದೂಟದಂತಿದೆ.

ಬಾಕ್ಸ್ ಆಫೀಸ್‌ನಲ್ಲಿ KD ಕಾಳಿದಾಸನ ರಣಬೇಟೆ; ಮೊದಲ ದಿನ ಗಳಿಕೆ ಎಷ್ಟು?

-

Avinash GR
Avinash GR May 1, 2026 12:12 PM

ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಮತ್ತು 'ಶೋಮ್ಯಾನ್' ಪ್ರೇಮ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ 'ಕೆಡಿ: ದಿ ಡೆವಿಲ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ಏಪ್ರಿಲ್ 30ರಂದು ಅದ್ಧೂರಿಯಾಗಿ ತೆರೆಕಂಡ ಈ ಚಿತ್ರ, ಮೊದಲ ದಿನವೇ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಂಡಿದೆ. ಗುರುವಾರ ಮುಂಜಾನೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿದ್ದರಿಂದ ಮತ್ತು ಬಹುತೇಕ ಕಡೆ ಹೌಸ್‌ಫುಲ್‌ ಆಗಿದ್ದರಿಂದ ಉತ್ತಮ ಗಳಿಕೆ ಆಗಿದೆ.

ಮೊದಲ ಎಷ್ಟಾಯ್ತು ಗಳಿಕೆ?

ಕೆಡಿ ಸಿನಿಮಾವು ಮೊದಲ ದಿನ ದೇಶಾದ್ಯಂತ 4.10 ಕೋಟಿ ರೂ. ಗಳಿಕೆ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಒಟ್ಟಾರೆ ಶೇ. 46ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ಬೆಳಗಿನ ಪ್ರದರ್ಶನಗಳಿಗಿಂತ ಮಧ್ಯಾಹ್ನ ಮತ್ತು ರಾತ್ರಿಯ ಶೋಗಳಿಗೆ ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ವಿಶೇಷವಾಗಿ ರಾತ್ರಿಯ ಪ್ರದರ್ಶನಗಳು ಭರ್ತಿಯಾಗುವ ಮೂಲಕ ವಾರಾಂತ್ಯದ ದೊಡ್ಡ ಮಟ್ಟದ ಗಳಿಕೆಗೆ ಮುನ್ನುಡಿ ಬರೆದಿವೆ. ಇಂದಿನಿಂದ ಮೂರು ದಿನಗಳ ವಾರಾಂತ್ಯ ರಜೆ ಇರುವುದಿರಂದ ಗಳಿಕೆಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಾರಾಂತ್ಯದ ಗಳಿಕೆಯು 20 ಕೋಟಿ ರೂ. ತಲುಪಬಹುದು ಎಂಬ ನಿರೀಕ್ಷೆ ಇದೆ.

KD-The Devil Movie: ಸೆರಗಿನ ತಂಟೆಗೆ ಹೋದ ʻಕೆಡಿʼ ಟೀಮ್‌; ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದೇನು?

ಹೇಗಿದೆ ಕೆಡಿ ಸಿನಿಮಾ?

ಧ್ರುವ ಸರ್ಜಾ ಅವರ ರಾ ಎನರ್ಜಿ ಮತ್ತು ನಿರ್ದೇಶಕ ಪ್ರೇಮ್ ಅವರ ನಿರ್ದೇಶನ, ಅದ್ಧೂರಿ ಮೇಕಿಂಗ್ ಅಭಿಮಾನಿಗಳಿಗೆ ಹಬ್ಬದೂಟ ನೀಡಿದೆ. 1970-80ರ ದಶಕದ ಬೆಂಗಳೂರಿನ ಭೂಗತ ಲೋಕವನ್ನು ತೆರೆಯ ಮೇಲೆ ತಂದಿರುವ ರೀತಿ, ರಕ್ತಸಿಕ್ತ ಆಕ್ಷನ್ ದೃಶ್ಯಗಳು ಮತ್ತು ಬೃಹತ್ ಸೆಟ್‌ಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿವೆ.

KD Review: ಇದು ನೆತ್ತರಿನಲ್ಲಿ ಬರೆದ ಕಾಳಿದಾಸನ ಸ್ಟೋರಿ; ಬ್ರದರ್‌ ಸೆಂಟಿಮೆಂಟ್‌ನಲ್ಲಿ ಧ್ರುವ ಸರ್ಜಾ ಭರ್ಜರಿ!

ಇನ್ನು, ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್‌ ಅರವಿಂದ್‌, ಬಾಲಿವುಡ್ ಸ್ಟಾರ್‌ಗಳಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರ ನಟನೆ ಚಿತ್ರಕ್ಕೆ ಆನೆಬಲ ತಂದಿದೆ. ಇದೆಲ್ಲದರ ಜೊತೆಗೆ ಸಿನಿಮಾದ ಕೊನೆಯಲ್ಲಿ ಬರುವ ಕಿಚ್ಚ ಸುದೀಪ್ ಅವರ ಎಂಟ್ರಿ ಚಿತ್ರಮಂದಿರಗಳಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯನ್ನೇ ಹರಿಸುತ್ತಿದೆ.

ವಿಮರ್ಶಕರು ಏನಂದ್ರು?

ವಿಮರ್ಶಕರು ಮತ್ತು ಸಾಮಾನ್ಯ ಪ್ರೇಕ್ಷಕರಿಂದ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧ್ರುವ ಸರ್ಜಾ ಅವರ ಬಾಡಿ ಲಾಂಗ್ವೇಜ್ ಮತ್ತು ಚಿತ್ರದ ತಾಂತ್ರಿಕ ಶ್ರೀಮಂತಿಕೆಗೆ ಎಲ್ಲೆಡೆ ಮೆಚ್ಚುಗೆ ಕೇಳಿಬರುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, 'ಕೆಡಿ' ಪಕ್ಕಾ ಮಾಸ್ ಎಂಟರ್‌ಟೈನರ್ ಆಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ʻಕೆಡಿʼ ಬಾಕ್ಸ್ ಆಫೀಸ್‌ನಲ್ಲಿ ಇನ್ನೆಷ್ಟು ದಾಖಲೆಗಳನ್ನು ಪುಡಿಪುಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.