ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dhurandhar 2: ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ 6 ವಾರಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ರಣವೀರ್‌ ಸಿಂಗ್;‌ ಹೇಗಿತ್ತು ಆ ಜರ್ನಿ?

'ಧುರಂಧರ್ 2' ಚಿತ್ರದ ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ ನಟ ರಣವೀರ್ ಸಿಂಗ್ ಕೇವಲ ಆರು ವಾರಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಫಿಟ್ನೆಸ್ ತರಬೇತುದಾರ ಮುಸ್ತಫಾ ಅಹ್ಮದ್ ಮಾರ್ಗದರ್ಶನದಲ್ಲಿ ಅವರು ತೂಕ ಏರಿಸಿಕೊಂಡಿದ್ದರು. ಆ ಬಗ್ಗೆ ಮುಸ್ತಫಾ ಅಹ್ಮದ್ ಮಾತನಾಡಿದ್ದಾರೆ.

ರಣವೀರ್ ಸಿಂಗ್ 'ಬಾಡಿ ಟ್ರಾನ್ಸ್‌ಫರ್ಮೇಷನ್' ರಹಸ್ಯ ಬಿಚ್ಚಿಟ್ಟ ಕೋಚ್

-

Avinash GR
Avinash GR Mar 24, 2026 6:08 PM

ನಟ ರಣವೀರ್‌ ಸಿಂಗ್‌ ಅವರು ತಮ್ಮ ವೃತ್ತಿ ಬದುಕಿನಲ್ಲಿ ಹಲವು ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಇದೀಗ ಧುರಂಧರ್‌ ಸಿನಿಮಾದ ಮೂಲಕ ತಮ್ಮೊಳಗಿನ ಪ್ರತಿಭೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ ರಣವೀರ್‌ ಸಿಂಗ್‌.

ಅಂದಹಾಗೆ, ಧುರಂಧರ್‌ ಸಿನಿಮಾದಲ್ಲಿ ರಣವೀರ್‌ ಸಿಂಗ್‌ ಅವರು ಹಮ್ಜಾ ಅಲಿ ಮಜಾರಿ/ಜಸ್ಕಿರತ್ ಸಿಂಗ್ ರಾಂಗಿ ಎಂಬ ಎರಡು ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ ರಣವೀರ್‌ ಸಿಂಗ್‌ ತೂಕ ಜಾಸ್ತಿ ಮಾಡಿಕೊಂಡಿದ್ದರ ಬಗ್ಗೆ ಫಿಟ್‌ನೆಸ್‌ ಕೋಚ್‌ ಮಾಹಿತಿ ಹಂಚಿಕೊಂಡಿದ್ದಾರೆ.

Dhurandhar 2: IMDb ಪಟ್ಟಿಯಲ್ಲಿ ‘ಧುರಂಧರ್ 2’; ನಿರ್ದೇಶಕ ಆದಿತ್ಯ ಧರ್‌ಗೆ ಮೊದಲನೇ ಸ್ಥಾನ

ಹೌದು, 'ಧುರಂಧರ್: ದಿ ರಿವೆಂಜ್' ಚಿತ್ರದಲ್ಲಿ ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ ಭರ್ತಿ 10 ತೂಕವನ್ನು ಆರು ವಾರಗಳಲ್ಲಿ ಜಾಸ್ತಿ ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿ ರಣವೀರ್‌ ಸಿಂಗ್‌ ಯಾವೆಲ್ಲಾ ರೀತಿಯ ತಯಾರಿ ಮಾಡಿಕೊಂಡರು ಎಂಬುದನ್ನು ಫಿಟ್‌ನೆಸ್ ತರಬೇತುದಾರ ಮುಸ್ತಫಾ ಅಹ್ಮದ್ ಹೇಳಿಕೊಂಡಿದ್ದಾರೆ. "ತೆರೆಯ ಮೇಲೆ ಕ್ರೂರವಾಗಿ ಕಾಣಿಸಿಕೊಳ್ಳಲು ರಣವೀರ್ ಸಿಂಗ್ ಕೇವಲ ಆರು ವಾರಗಳಲ್ಲಿ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ರಣವೀರ್ ಅವರು ತೂಕವನ್ನುಹೆಚ್ಚಿಸಿಕೊಳ್ಳಬೇಕಿತ್ತು. ಆದರೆ ಸಮಯ ಬಹಳ ಕಡಿಮೆ ಇತ್ತು" ಎಂದು ಮುಸ್ತಫಾ ಅಹ್ಮದ್ ಹೇಳಿದ್ದಾರೆ.

Dhurandhar - The Revenge: ʻನಾನು ಪ್ರಧಾನಿ ಮೋದಿಯ ಹೆಮ್ಮೆಯ ಅಂಧ ಭಕ್ತೆʼ ಎಂದ ಪವನ್‌ ಕಲ್ಯಾಣ್‌ ಮಾಜಿ ಪತ್ನಿ ರೇಣು ದೇಸಾಯಿ

"ನಮಗೆ ಆದಿತ್ಯ ಸರ್ ಅವರು, 'ನಮಗೆ 6 ವಾರಗಳಲ್ಲಿ ಶೂಟಿಂಗ್ ಆರಂಭವಾಗಲಿದೆ, ಅಷ್ಟರೊಳಗೆ ರಣವೀರ್ 10 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕು' ಎಂದು ಸೂಚಿಸಿದ್ದರು. ಹಾಗಾಗಿ, ಕೂಡಲೇ ತಯಾರಿ ಆರಂಭಿಸಿದೆವು. ರಣವೀರ್ ಅವರನ್ನು ನಾನು ಭೇಟಿಯಾದಾಗ ಅವರು 76 ರಿಂದ 77 ಕೆಜಿ ತೂಕವಿದ್ದರು. ಶೂಟಿಂಗ್ ಆರಂಭವಾಗುವ ವೇಳೆಗೆ ಅವರು 87-88 ಕೆಜಿಗೆ ತಲುಪಿದ್ದರು. ಅವರು ಯಂತ್ರದಂತೆ ಓಡುತ್ತಾರೆ, ನೀವು ಅವರಿಗೆ ಗುರಿ ನೀಡಿದರೆ ಸಾಕು ಅದನ್ನು ಸಾಧಿಸಿಯೇ ತೀರುತ್ತಾರೆ" ಎಂದು ಮುಸ್ತಫಾ ತಿಳಿಸಿದ್ದಾರೆ.

ರಣವೀರ್‌ ಅವರ ಆಹಾರ ಕ್ರಮ ಹೇಗಿತ್ತು?

"ರಣವೀರ್ ದಿನಕ್ಕೆ 3600 ರಿಂದ 4000 ಕ್ಯಾಲೊರಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅದರಲ್ಲಿ 1,200 ರಿಂದ 1,500 ಕ್ಯಾಲೊರಿಗಳು ಕೇವಲ ಪ್ರೋಟೀನ್ ಶೇಕ್‌ಗಳಿಂದಲೇ ಬರುತ್ತಿದ್ದವು. ದಿನಕ್ಕೆ ಸುಮಾರು 240 ಗ್ರಾಂ ಪ್ರೋಟೀನ್ ಪಡೆಯಲು ಅವರು ಹೆಚ್ಚಿನ ಪ್ರಮಾಣದಲ್ಲಿ ಚಿಕನ್, ಅನ್ನ ಮತ್ತು ಮಟನ್‌ ಸೇವಿಸುತ್ತಿದ್ದರು. ಪಾತ್ರದ ಅಗತ್ಯಕ್ಕೆ ತಕ್ಕಂತೆ ಶೂಟಿಂಗ್ ನಡುವಿನ ಊಟದ ಬಿಡುವಿನಲ್ಲೂ ಅವರು ವರ್ಕ್‌ಔಟ್ ಮಾಡುತ್ತಿದ್ದರು" ಎಂದು ತರಬೇತುದಾರ ಮುಸ್ತಫಾ ಹೇಳಿದ್ದಾರೆ.‌

ದಿನಕ್ಕೆ 16-18 ಗಂಟೆ ಕೆಲಸ ಮಾಡಿದ್ದ ರಣವೀರ್‌

ಧುರಂಧರ್‌ 2 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವೊಂದರಲ್ಲಿ ರಿಜ್ವಾನ್ ಮತ್ತು ಜಸ್ಕಿರತ್ ಕುಳಿಯಲ್ಲಿ ಕುಸ್ತಿ ಮಾಡುವ ದೃಶ್ಯವಿದೆ. ಇದನ್ನು ಕಸೌಲಿಯಲ್ಲಿ ಚಿತ್ರೀಕರಿಸಲಾಗಿತ್ತು. "ಸುಮಾರು 12 ಗಂಟೆಗಳ ಕಾಲ ಶೂಟಿಂಗ್ ಮುಗಿಸಿ, ನಂತರ 6 ಗಂಟೆಗಳ ಕಾಲ ಆಕ್ಷನ್ ದೃಶ್ಯಗಳ ತಾಲೀಮು ನಡೆಸುತ್ತಿದ್ದೆವು. ಅಂದರೆ ನಾವು ದಿನಕ್ಕೆ ಸತತ 16-18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆವು. ಅದಕ್ಕಾಗಿ ಪಟ್ಟ ಶ್ರಮಕ್ಕೆ ಈಗ ಸಾರ್ಥಕತೆ ಸಿಕ್ಕಿದೆ" ಎಂದು ಮುಸ್ತಫಾ ಹಂಚಿಕೊಂಡಿದ್ದಾರೆ.