ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಧುರಂಧರ್‌ 2ʼ ಅಬ್ಬರದ ನಡುವೆಯೂ ಸದ್ದಿಲ್ಲದೇ ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿದ ಮಲಯಾಳಂ ಸಿನಿಮಾ! ಯಾವುದು ಆ ಚಿತ್ರ?

Aadu 3 Collection: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಅಬ್ಬರದ ನಡುವೆಯೂ ಮಲಯಾಳಂನ 'ಆಡು 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಜಯಸೂರ್ಯ ನಟನೆಯ ಈ ಫ್ಯಾಂಟಸಿ ಕಾಮಿಡಿ ಎಂಟರ್ಟೈನರ್ ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವದಾದ್ಯಂತ 85 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ವಿಶೇಷವಾಗಿ ವಿದೇಶಿ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದ ಗಳಿಕೆ ಮಾಡಿದೆ.

ಧುರಂಧರ್ 2 ಅಬ್ಬರದ ನಡುವೆಯೂ ದಾಖಲೆ ಬರೆದ ಮಲಯಾಳಂ ಸಿನಿಮಾ; ವಿದೇಶದಲ್ಲೂ ಹವಾ

-

Avinash GR
Avinash GR Mar 24, 2026 5:13 PM

ರಣವೀರ್‌ ಸಿಂಗ್‌ ನಟನೆ ʻಧುರಂಧರ್‌ 2ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಐದು ದಿಗನಳಲ್ಲಿ ಈ ಚಿತ್ರದ ಗಳಿಕೆಯು ಆಗಲೇ 800 ಕೋಟಿ ರೂ. ದಾಟಿದೆ. ʻಧುರಂಧರ್‌ 2ʼ ಎದುರು ಪೈಪೋಟಿ ನೀಡಲು ಬಂದಿದ್ದ ʻಉಸ್ತಾದ್‌ ಭಗತ್‌ ಸಿಂಗ್‌ʼ ಸಿನಿಮಾವು ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿದೆ. ಈ ನಡುವೆ ಸದ್ದಿಲ್ಲದೇ ಮಲಯಾಳಂನ ಸಿನಿಮಾವೊಂದು ಬಾಕ್ಸ್‌ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ಯಾವುದು ಆ ಸಿನಿಮಾ? ಮುಂದೆ ಓದಿ.

ಜಾದೂ ಮಾಡುತ್ತಿದೆ ʻಆಡು 3ʼ

ಮಲಯಾಳಂನ ಜಯಸೂರ್ಯ ನಟನೆಯ, ಮಿಥುನ್ ಮ್ಯಾನುಯೆಲ್ ಥಾಮಸ್ ನಿರ್ದೇಶನದ 'ಆಡು 3' (Aadu 3) ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ದಾಖಲಿಸಿದೆ. ಮಾ.19ರಂದು ಧುರಂಧರ್‌ 2 ಸಿನಿಮಾದ ಜೊತೆಗೆ ತೆರೆಕಂಡಿದ್ದ ಈ ಫ್ಯಾಂಟಸಿ ಕಾಮಿಡಿ ಎಂಟರ್ಟೈನರ್ ಸಿನಿಮಾವು ಬಿಡುಗಡೆಯಾದ ಮೊದಲ 5 ದಿನಗಳಲ್ಲೇ ವಿಶ್ವದಾದ್ಯಂತ 85+ ಕೋಟಿ ರೂ. ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ.

Rajinikanth: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ! ಧುರಂಧರ್‌ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ವಿದೇಶದಲ್ಲೇ ಹೆಚ್ಚು ಮೋಡಿ ಮಾಡುತ್ತಿರುವ ಆಡು 3

ʻಆಡು 3ʼ ಸಿನಿಮಾವು ಭಾರಕ್ಕಿಂತ ವಿದೇಶದಲ್ಲಿಯೇ ಹೆಚ್ಚಿನ ಪ್ರಮಾಣದ ಗಳಿಕೆ ಮಾಡುತ್ತಿರುವುದು ಅಚ್ಚರಿ ತಂದಿದೆ. ಹೌದು, ಭಾರತದಲ್ಲಿ ಈವರೆಗೂ ಸುಮಾರು 30+ಕೋಟಿ ರೂ. ಗಳಿಕೆ ಮಾಡಿರುವ ಈ ಸಿನಿಮಾವು ವಿದೇಶಿ ಮಾರುಕಟ್ಟೆಯಲ್ಲಿ ಒಟ್ಟು 50+ ಕೋಟಿ ರೂ. ವ್ಯವಹಾರ ಮಾಡಿದೆ. ಒಂದು ವಾರ ಕಳೆಯುವುದರೊಳಗೆ ಈ ಗಳಿಕೆಯು 100 ಕೋಟಿ ರೂ. ದಾಟುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ. ಸದ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅಲ್ಲಿನ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಅಲ್ಲಿ ಸುಮಾರು 33 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡಿ ದಾಖಲೆ ಬರೆದಿದೆಯಂತೆ.

Dhurandhar 2 Review: ಆದಿತ್ಯ ಧರ್‌ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!

ಈ ಭರ್ಜರಿ ಓಪನಿಂಗ್ ಮೂಲಕ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ವಾರಾಂತ್ಯದ ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ 'ಆಡು 3' ಪಾತ್ರವಾಗಿದೆ. ಮೋಹನ್‌ಲಾಲ್ ಅವರ 'L2: ಎಂಪುರಾನ್' (175.60 ಕೋಟಿ ರೂ.) ಮೊದಲ ಸ್ಥಾನದಲ್ಲಿದ್ದರೆ, 'ಆಡು 3' ಎರಡನೇ ಸ್ಥಾನಕ್ಕೇರಿದೆ. 'ಆಡು 3: ಒನ್ ಲಾಸ್ಟ್ ರೈಡ್ – ಪಾರ್ಟ್ 1' ಚಿತ್ರದಲ್ಲಿ ಜಯಸೂರ್ಯ, ಸೈಜು ಕುರುಪ್, ವಿನಾಯಕನ್, ಸನ್ನಿ ವೇನ್, ಧರ್ಮಜನ್ ಬೋಲ್ಗಾಟ್ಟಿ, ವಿಜಯ್ ಬಾಬು, ಅಲೆಯಾ ಬೋರ್ನ್ ಮತ್ತು ಕೃಷ್ಣ ಜೀವ್ ಕಾಣಿಸಿಕೊಂಡಿದ್ದಾರೆ. ನಟಿ ವೇದಿಕಾ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಮಿಥುನ್ ಮ್ಯಾನುಯೆಲ್ ಥಾಮಸ್ ಕಥೆ ಬರೆದು, ನಿರ್ದೇಶನ ಮಾಡಿರುವ ಈ ಚಿತ್ರವನ್ನು ವಿಜಯ್ ಬಾಬು ಮತ್ತು ವೇಣು ಕುನ್ನಪ್ಪಿಳ್ಳಿ ನಿರ್ಮಿಸಿದ್ದಾರೆ.