Geetha Wadeyar: ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ
Geetha Wadeyar: ಮಲ್ಟಿಪಲ್ ಮೈಲೋಮ ಮತ್ತು ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎರಡು ತಿಂಗಳಿಂದ ಪವನ್ ಒಡೆಯರ್ ಜೊತೆಯಲ್ಲಿ ಬೆಂಗಳೂರು ನಲ್ಲೇ ತಾಯಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಂದು ಕುಣಿಗಲ್ ನಲ್ಲಿ (Kunigal) ಅಂತ್ಯ ಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.
ಪವನ್ ಒಡೆಯರ್ ತಾಯಿ -
ಖ್ಯಾತ ನಿರ್ದೇಶಕ ಪವನ್ ಒಡೆಯರ್ (pavan wadeyar) ತಾಯಿ ಗೀತಾ ಒಡೆಯರ್ (73) (Geetha Wadeyar ) ನಿಧನರಾಗಿದ್ದಾರೆ. ಮಲ್ಟಿಪಲ್ ಮೈಲೋಮ ಮತ್ತು ಜಿಬಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎರಡು ತಿಂಗಳಿಂದ ಪವನ್ ಒಡೆಯರ್ ಜೊತೆಯಲ್ಲಿ ಬೆಂಗಳೂರು ನಲ್ಲೇ ತಾಯಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಂದು ಕುಣಿಗಲ್ ನಲ್ಲಿ (Kunigal) ಅಂತ್ಯ ಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.
ಅಭಿಮಾನಿಗಳು ಕಂಬನಿ
ಗೀತಾ ಒಡೆಯರ್ ಮಲ್ಟಿಪಲ್ ಮೈಲೋಮ ಮತ್ತು ಜಿಬಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಪವನ್ ಒಡೆಯರ್ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಪವನ್ ಒಡೆಯರ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಿರ್ದೇಶಕ, ಸಂಭಾಷಣಾಕಾರ, ನಟ ಮತ್ತು ನಿರ್ಮಾಪಕ. 1987 ಡಿಸೆಂಬರ್ 10ರಂದು ಕುಣಿಗಲ್‌ನಲಗಲ್ಲಿ ಜನಿಸಿದ ಇವರು, ವಾಣಿಜ್ಯ ವಿಭಾಗದಲ್ಲಿ ಪಡೆದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಸಿನಿಮಾದಲ್ಲಿನ ಆಸಕ್ತಿಯಿಂದಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗದತ್ತ ಮುಖ ಮಾಡಿದರು.
2010ರಲ್ಲಿ ಯೋಗರಾಜ್ ಭಟ್ ನಿರ್ದೇಶನದ `ಪಂಚರಂಗಿ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಸಿನಿರಂಗ ಪ್ರವೇಶಿಸಿದರು.
ನಂತರ 2012ರಲ್ಲಿ `ಗೋವಿಂದಾಯ ನಮಃ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. 'ಗೂಗ್ಲಿ' ಮತ್ತು `ರಣವಿಕ್ರಮ' ಚಿತ್ರಗಳು ಬಾಕ್ಸಾಫಿಸ್‌ನಲ್ಲಿ ಅದ್ಭುತ ಯಶಸ್ಸು ಪಡೆದವು.
ಇದನ್ನೂ ಓದಿ: Sanvi Sudeep: ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್ ಪುತ್ರಿ ಗರಂ
ನಂತರ ಜೆಸ್ಸಿ, ನಟರಾಜ ಸರ್ವೀಸ್, ನಟಸಾರ್ವಭೌಮ, ರೇಮೋ ಸಿನಿಮಾಗಳನ್ನು ನಿರ್ದೇಶಿಸಿದರು.