ಕನ್ನಡ ನಟಿ ಚೈತ್ರಾ ಆಚಾರ್‌ಗೆ ಧನುಷ್ ಸಿನಿಮಾದ ನಾಯಕಿಯಾಗುವ ಚಾನ್ಸ್ ಮಿಸ್ ಆಗಿದ್ದೇಗೆ? ಹೊರಬಿತ್ತು ಇಂಟರೆಸ್ಟಿಂಗ್ ವಿಚಾರ!
ಸ್ಯಾಂಡಲ್‌ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಧನುಷ್ ನಟನೆಯ 'ಕರ' (Kara) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಅವರದ್ದೇ ಮತ್ತೊಂದು ಚಿತ್ರ 'ಮೈ ಲಾರ್ಡ್'ನಲ್ಲಿ ಚೈತ್ರಾ ಅವರು ಹೊಂದಿದ್ದ ಲುಕ್, 'ಕರ' ಚಿತ್ರದ ಲುಕ್‌ಗೆ ಸಾಮ್ಯತೆ ಹೊಂದಿದ್ದರಿಂದ ನಿರ್ದೇಶಕ ವಿಘ್ನೇಶ್ ರಾಜ ಅವರು ನಾಯಕಿಯನ್ನು ಬದಲಿಸಿದ್ದಾರೆ.
-
ಸ್ಯಾಂಡಲ್‌ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಸದ್ಯ ಕನ್ನಡಕ್ಕಿಂತ ಪರಭಾಷೆಯಲ್ಲೇ ಹೆಚ್ಚು ಬ್ಯುಸಿ ಅಗುತ್ತಿದ್ದಾರೆ. ಅವರಿಗೆ ತಮಿಳಿನಿಂದ ಉತ್ತಮ ಆಫರ್‌ಗಳು ಸಿಗುತ್ತಿವೆ. ಈ ಮಧ್ಯೆ ಅವರು ಧನುಷ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದ್ದರೂ, ಅದನ್ನು ಮಿಸ್ ಮಾಡಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂದಹಾಗೆ, ಆ ಸಿನಿಮಾದ ಹೆಸರು ʻಕರʼ. ಏಪ್ರಿಲ್ 30ರಂದು ಈ ಸಿನಿಮಾವು ತೆರೆಗೆ ಬರುತ್ತಿದೆ.
ಇಂಟರೆಸ್ಟಿಂಗ್ ವಿಚಾರ ಬಯಲು ಮಾಡಿದ ನಿರ್ದೇಶಕ
ʻಪೋರ್ ತೊಳಿಲ್ʼ ಖ್ಯಾತಿಯ ನಿರ್ದೇಶಕ ವಿಘ್ನೇಶ್ ರಾಜ ಅವರು ʻಕರʼ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಧನುಷ್ ಎದುರು ಈ ಸಿನಿಮಾದಲ್ಲಿ ನಟಿ ಮಮಿತಾ ಬೈಜು ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಘ್ನೇಶ್ ರಾಜ, "ಕರ ಚಿತ್ರದ ನಾಯಕಿ ಪಾತ್ರಕ್ಕೆ ನಾವು ಮೊದಲು ಕನ್ನಡ ನಟಿ ಚೈತ್ರಾ ಜೆ ಆಚಾರ್ ಅವರನ್ನು ಅಂತಿಮಗೊಳಿಸಿದ್ದೆವು. ಅವರಿಗೆ ಲುಕ್ ಟೆಸ್ಟ್ ಕೂಡ ಮಾಡಿದ್ದೆವು. ಆದರೆ ಚೈತ್ರಾ ಅವರು ನಟ ಶಶಿಕುಮಾರ್ ಅವರ 'ಮೈ ಲಾರ್ಡ್' ಚಿತ್ರದಲ್ಲೂ ಅದೇ ರೀತಿಯ ಲುಕ್ ಹೊಂದಿರುವುದಾಗಿ ತಿಳಿಸಿದರು" ಎಂದು ಹೇಳಿದ್ದಾರೆ.
ಚೈತ್ರಾ ಆಚಾರ್ ಹೊಸ ಸಿನಿಮಾಕ್ಕೆ LSD ಟೈಟಲ್; ಅಮ್ಮನ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ ಗಾಯಕಿ ಎಂಡಿ ಪಲ್ಲವಿ
"ಚೈತ್ರಾ ಅವರು ನಟಿಸುತ್ತಿದ್ದ ಮೈಲಾರ್ಡ್ ಚಿತ್ರವು ನಮ್ಮ ʻಕರʼಕ್ಕಿಂತ ಮೊದಲೇ ಬಿಡುಗಡೆಯಾಗಲಿದೆ ಎಂದು ನಮಗೆ ತಿಳಿಯಿತು. ಹಾಗಾಗಿ, ಚೈತ್ರಾ ಅವರ ಬದಲು ನಟಿ ಮಮಿತಾ ಬೈಜು ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಿದೆ. ಮಮಿತಾ ಅವರು ಹೆಚ್ಚಾಗಿ ಬಬ್ಲಿ ಬಬ್ಲಿ ಥರದ ಪಾತ್ರಗಳನ್ನೇ ಮಾಡುತ್ತಿರುವುದರಿಂದ ಕರ ಚಿತ್ರದ ಈ ಪಾತ್ರವನ್ನು ಒಪ್ಪುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಆಶ್ಚರ್ಯ ಎಂದರೆ, ಅವರು ಈ ಚಿತ್ರದಲಿ ನಟಿಸಲು ಒಪ್ಪಿಕೊಂಡರು" ಎಂದು ನಿರ್ದೇಶಕ ವಿಘ್ನೇಶ್ ರಾಜ ಹೇಳಿದ್ದಾರೆ.
ಕರ ಚಿತ್ರದ ಕುರಿತ ಟ್ವೀಟ್
Director #VigneshRaja:
— AmuthaBharathi (@CinemaWithAB) April 26, 2026
For #Kara, we initially finalized #Chaithra as the female lead & conducted look test for her. Chaithra told she'll be having same kind of look for Sasikumar's #MyLord Movie, which will release before Kara✌️
So i approached #MamithaBaiju after that,… pic.twitter.com/Ft0SvlgKuJ
ʻಕರʼ ಚಿತ್ರದ ಬಗ್ಗೆ..
ʻಪೋರ್ ತೊಳಿಲ್ʼನಂತಹ ಸೂಪರ್ ಹಿಟ್ ಸಿನಿಮಾವನ್ನು ನಿರ್ದೇಶಿಸಿರುವ ವಿಘ್ನೇಶ್ ರಾಜಗೆ ಧನುಷ್ ಕಾಲ್ ಶೀಟ್ ನೀಡಿದ್ದರು. ಅದರ ಫಲವೇ ʻಕರʼ ಸಿನಿಮಾ. ಬರೀ ಟ್ರೈಲರ್‌ನಿಂದಲೇ ಪ್ರೇಕ್ಷಕರಲ್ಲಿ ಈ ಸಿನಿಮಾವು ಭಾರಿ ಕುತೂಹಲ ಮೂಡಿಸಿದ್ದು, ಏಪ್ರಿಲ್ 30 ರಂದು ಕರ ಬಿಡುಗಡೆ ಆಗಲು ಸಿದ್ಧವಾಗಿದೆ.
Anchor Anushree: "ಅವಳು ಡೇಟ್ ಮಾಡೋ ಟೈಂನಲ್ಲೇ ಗೊತ್ತಿತ್ತು"; ಅನುಶ್ರೀ ಲವ್ ಸ್ಟೋರಿ ಬಿಚ್ಚಿಟ್ಟ ಚೈತ್ರಾ ಆಚಾರ್
ಧನುಷ್, ಮಮಿತಾ ಜೊತೆಗೆ ಸೂರಜ್ ವೆಂಜಾರಮೂಡು, ಜಯರಾಮ್, ಕೆ. ಎಸ್. ರವಿಕುಮಾರ್ ಮತ್ತು ಕರುಣಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡದ್ದಾರೆ. ವೆಲ್ಸ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಇಶಾರಿ ಕೆ. ಗಣೇಶ್ 'ಕರ' ಚಿತ್ರವನ್ನು ನಿರ್ಮಿಸಿದ್ದು, ಕುಶ್ಮಿತಾ ಗಣೇಶ್ ಸಹ ನಿರ್ಮಾಪಕರಾಗಿದ್ದಾರೆ. ಜಿ. ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.