ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾಡು ನಿಲ್ಲಿಸಿದ ಗಾನಕೋಗಿಲೆ: ಹಾಡುತ್ತಲೇ ಪ್ರಾಣ ಹೋಗಲಿ ಎಂದು ಆಶಿಸಿದ್ದ ಗಾಯಕಿ ಆಶಾ ಭೋಸ್ಲೆ!

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಇಂದು ನಿಧನರಾಗಿದ್ದಾರೆ. ಕಳೆದ ಶನಿವಾರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ ಪ್ಪಿದ್ದಾರೆ. ಆದ್ರೆ ಗಾಯಕಿ ಆಶಾಭೋಸ್ಲೆ ಕೊನೆಯ ಆಸೆ ಏನಾಗಿತ್ತು ಗೊತ್ತೆ?

ಗಾಯಕಿ ಆಶಾ ಭೋಸ್ಲೆ ಅವರ ಕೊನೆಯ ಆಸೆ ಏನಾಗಿತ್ತು ಗೊತ್ತೆ?

ಹಾಡು ನಿಲ್ಲಿಸಿದ ಗಾನಕೋಗಿಲೆ ಆಶಾ ಭೋಸ್ಲೆ -

Profile
Pushpa Kumari Apr 12, 2026 9:11 PM

ಮುಂಬೈ, ಎ.12: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ಇಂದು ನಿಧನರಾಗಿದ್ದಾರೆ. ಕಳೆದ ಶನಿವಾರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನಪ್ಪಿದ್ದಾರೆ. ಏಳು ದಶಕಗಳಿಗೂ ಹೆಚ್ಚು ಕಾಲ ವ್ಯಾಪಿಸಿದ್ದ ಸಂಗೀತ ಪರಂಪರೆಯನ್ನು ಉಳಿಸಿಕೊಂಡು ಅವರು ಜಗತ್ ಪ್ರಸಿದ್ಧಗೊಂಡಿದ್ದರು.

ಅವರ ವಯಸ್ಸಿನ ಹೊರತಾಗಿಯೂ, ಆಶಾ ಭೋಸ್ಲೆ ಸಂಗೀತದಲ್ಲಿ ಸಕ್ರಿಯರಾಗಿದ್ದು ಹೊಸ ಯೋಜನೆಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಒಂದು ವರ್ಷದ ಹಿಂದೆ ಸಂದರ್ಶನ ವೊಂದರಲ್ಲಿ ಮಾತನಾಡಿದ್ದ ಅವರು ಹಾಡು ನನ್ನ ಜೀವನ. ನನ್ನ ಪ್ರಾಣ ಹೋಗುವ ಸಂದರ್ಭದಲ್ಲೂ ನಾನು ಹಾಡುತ್ತಲೇ ಇರಬೇಕು ಎಂದು ಹೇಳಿದ್ದರು. ಅಂದು ಹೇಳಿದಂತೆ ಅವರ ಆಸೆಯಂತೆಯೇ ಕೊನೆಯವರೆಗೂ ಸಂಗೀತದೊಂದಿಗೆ ಬದುಕಿದರು.

Asha Bhosle Death: ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ: ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಂತಾಪ

ಆಶಾ ಭೋಸ್ಲೆ ಅವರ ಕೊನೆಯ ಸಾರ್ವಜನಿಕ ಪ್ರದರ್ಶನ ಮಾರ್ಚ್ 5 ರಂದು ಮುಂಬೈನಲ್ಲಿ ನಡೆದಿತ್ತು. ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ಸಮಾರಂಭದಲ್ಲಿ ಹಾಡಿದ್ದರು. ಇದೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಯಿತು.. ಸುಮಾರು 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.