Ekka OTT: ದೊಡ್ಮನೆ ಅಭಿಮಾನಿಗಳಿಗೆ ಮನರಂಜನೆ ಫಿಕ್ಸ್; OTTಗೆ ಎಂಟ್ರಿ ಕೊಡ್ತಿದೆ ʻಎಕ್ಕʼ ಸಿನಿಮಾ, ಸ್ಟ್ರೀಮಿಂಗ್ ಎಲ್ಲಿ?
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ (Jayanna Films) ಒಟ್ಟಾಗಿ ಚಿತ್ರ ನಿರ್ಮಾಣ ಮಾಡುತ್ತಿರುವ ʼಎಕ್ಕʼ ಸಿನಿಮಾಗೆ ರೋಹಿತ್ (Rohit Padaki) ಪದಕಿ ಆಕ್ಷನ್ ಕಟ್ (Action Cut) ಹೇಳಿದ್ದಾರೆ. ನಾಯಕ ಯುವರಾಜ್ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಆರಂಭಿಕ ವರದಿಗಳು ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣೇಶ ಚತುರ್ಥಿಯ ಆಸುಪಾಸಿನಲ್ಲಿ OTT ಬಿಡುಗಡೆಯನ್ನು ಸೂಚಿಸಿದ್ದರೂ, ಆ ಸಮಯದಲ್ಲಿ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬರಲಿಲ್ಲ. ಇದೀಗ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
EKKA MOVIE -
ಶುಕ್ರವಾರ ಬಂತಂದರೆ ಸಾಕು ಸಿನಿ ಪ್ರಿಯರು ಒಟಿಟಿಯಲ್ಲಿ (OTT) ಹೊಸ ಸಿನಿಮಾಗಳನ್ನು ಸರ್ಚ್ ಮಾಡಲು ಶುರು ಮಾಡುತ್ತಾರೆ. ಇದೀಗ ಒಟಿಟಿ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಯುವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಎಕ್ಕʼ (Ekka Movie OTT) ಸಿನಿಮಾ ಜುಲೈ 18, 2025ರಂದು ಚಿತ್ರಮಂದಿರಗಳಲ್ಲಿ (Release) ಬಿಡುಗಡೆಯಾಯಿತು.
ಆರಂಭಿಕ ವರದಿಗಳು ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣೇಶ ಚತುರ್ಥಿಯ ಆಸುಪಾಸಿನಲ್ಲಿ OTT ಬಿಡುಗಡೆಯನ್ನು ಸೂಚಿಸಿದ್ದರೂ, ಆ ಸಮಯದಲ್ಲಿ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬರಲಿಲ್ಲ. ಇದೀಗ ಒಟಿಟಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಚಿತ್ರ ನಿರ್ಮಾಣ ಮಾಡುತ್ತಿರುವ ʼಎಕ್ಕʼ ಸಿನಿಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ಯುವರಾಜ್ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.
ಮಿಶ್ರಪ್ರತಿಕ್ರಿಯೆ ಸಿಕ್ಕರೂ 'ಎಕ್ಕ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಮರುವಾರವೇ ಬಂದ 'ಸು ಫ್ರಮ್ ಸೋ' ಆರ್ಭಟದ ಮುಂದೆ 'ಎಕ್ಕ' ನೆಲ ಕಚ್ಚಿತ್ತು.ಯುವರಾಜ್‌ಕುಮಾರ್ ಜೋಡಿಯಾಗಿ ಚಿತ್ರದಲ್ಲಿ ಸಂಜನಾ ಆನಂದ್ ನಟಿಸಿದ್ದಾರೆ.
Every word a cheer, every cheer a celebration! 🥳
— SUN NXT (@sunnxt) November 6, 2025
After the blockbuster run, #Ekka comes home! Watch it only on Sun NXT from 7 November!
@krg.studios #RohitPadaki @yuva_rajkumar @sanjanaa_anand @sampaada1 @ashwinipuneeth.rajkumar @charanraj27185#Ekka #EkkaOnSunNxt #SunNxt… pic.twitter.com/CQEiz9s0Ab
ಸಂಪದಾ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಅತುಲ್ ಕುಲಕರ್ಣಿ, ಆದಿತ್ಯಾ, ಶ್ರುತಿ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಚಿತ್ರದ ತಾರಾಗಣದಲ್ಲಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. 'ಬ್ಯಾಂಗಲ್ ಬಂಗಾರಿ' ಸಾಂಗ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು.
ಎಲ್ಲಿ ಸ್ಟ್ರೀಮಿಂಗ್?
ಮುಂದಿನ ವಾರ ಅಂದರೆ ನವೆಂಬರ್ 13ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಸನ್‌ನೆಕ್ಸ್ಟ್ ಒಟಿಟಿ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ.
'ಎಕ್ಕ' ಬಳಿಕ ಸೂರಿ ಕಾಂಬಿನೇಷನ್‌ನಲ್ಲಿ ಯುವರಾಜ್‌ಕುಮಾರ್ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಇದೇ ನಿಜವಾದ ಸ್ನೇಹ! ಕಾವುಗೋಸ್ಕರ ಪತ್ರ ತ್ಯಾಗ ಮಾಡಿದ ಗಿಲ್ಲಿ
ನಟ ಯುವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು ಎಕ್ಕ ಬೆಂಗಳೂರಿನ ಅಂಡರ್‌ವರ್ಲ್ಡ್ ಕಥೆ ಚಿತ್ರದಲ್ಲಿದೆ. ಯುವ ರಾಜ್‌ಕುಮಾರ್ ಸಿಕ್ಕಾಪಟ್ಟೆ ರಡಗ್ ಲುಕ್‌ನಲ್ಲಿ ನಟಿಸಿದ್ದಾರೆ. ಎಕ್ಕ' ಚಿತ್ರದ ವಿಚಾರಕ್ಕೆ ಬಂದರೆ ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಮಾಸ್ ಪ್ರೇಕ್ಷರಕನ್ನು ಗಮನ ದಲ್ಲಿ ಟ್ಟುಕೊಂಡು ಈ ಸಿನಿಮಾ ಮಾಡಲಾಗಿತ್ತು.