ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Geetha Bhat: ಅಷ್ಟಿದ್ರೆ ಆ ಪಾತ್ರ ಮಾಡಬಾರದಿತ್ತು; ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

Geetha Bhat: ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್‌ ಅವರು ನಟಿಸಿದ್ದರು. 'ಲವ್ ಮಾಕ್ಟೇಲ್' ಚಿತ್ರದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ಗೀತಾ ಭಾರತಿ ಭಟ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಚಿತ್ರತಂಡದ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ (Krishna) ಸಂದರ್ಶನವೊಂದರಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

ಮಿಲನಾ ನಾಗರಾಜ್‌ -

Yashaswi Devadiga
Yashaswi Devadiga Mar 10, 2026 10:20 AM

ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್‌ (geetha bhat) ಅವರು ನಟಿಸಿದ್ದರು. 'ಲವ್ ಮಾಕ್ಟೇಲ್' (love mocktail) ಚಿತ್ರದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ಗೀತಾ ಭಾರತಿ ಭಟ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಚಿತ್ರತಂಡದ ಮಿಲನಾ ನಾಗರಾಜ್ (Milana Nagaraj) ಮತ್ತು ನಿರ್ದೇಶಕ ಕೃಷ್ಣ (Krishna) ಸಂದರ್ಶನವೊಂದರಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಯಾಕಾದರೂ ನಾನು ಈ ಸಿನಿಮಾ ಒಪ್ಪಿಕೊಂಡೆನೋ!

‘ಲವ್ ಮಾಕ್ಟೇಲ್’ ಚಿತ್ರದಲ್ಲಿ ‘ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ’ ಎಂಬ ಡೈಲಾಗ್ ಇದೆ. ಈ ದೃಶ್ಯವನ್ನು ಗೀತಾ ಮಾಡಿದರು. ಯಾಕಾದರೂ ನಾನು ಈ ಸಿನಿಮಾ ಒಪ್ಪಿಕೊಂಡೆನೋ ಏನೋ ಎಂದು ಗೀತಾ ಭಾರತೀ ಭಟ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ವಿಷಯಕ್ಕೆ ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಕೃಷ್ಣ ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Amruthadhaare Serial: ಮಲ್ಲಿಗೆ ಜೈದೇವ್‌ಗೆ ಕಾಟ; ಗೌತಮ್‌ಗೋಸ್ಕರ್‌ ಆನಂದ್‌ ಮಹಾತ್ಯಾಗ!

ʻಅದು ಬಾಡಿ ಶೇಮಿಂಗ್ ಮಾಡಿದ್ದಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ’ ಎಂದು ಕೃಷ್ಣ ಅವರು ಹೇಳಿದ್ದಾರೆ. ‘ಅವರಿಗೆ ಸಿನಿಮಾ ಪಾತ್ರ ಗೊತ್ತಿತ್ತು. ಈಗ ಮಾತನಾಡುವ ಅವಶ್ಯಕತೆ ಇಲ್ಲ. ಅವರು ಸಂಪೂರ್ಣ ದೃಶ್ಯವನ್ನೇ ಮಾಡಿ ಹೋಗಿದ್ದಾರೆ. ಕಲಾವಿದರಿಗೆ ಹೇಳದೆ ನಾವು ದೃಶ್ಯ ಮಾಡೋಕಾಗಲ್ಲ. ಯಾವುದನ್ನು ಮುಚ್ಚಿಟ್ಟು ಮಾಡಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡಿರೋದು. ನಿಮಗೆ ಆಗಲ್ಲ ಅಂದ್ರೆ ಬಿಡಿ’ ಎಂದು ಮಿಲನ ಖಡಕ್ ಆಗಿ ಹೇಳಿದ್ದಾರೆ.

ಗೀತಾ ಅವರು ಧಾರಾವಾಹಿ ಮಾಡುತ್ತಾ ಇದ್ದರು. ಅದರಲ್ಲೂ ಅದೇ ಕಥೆ ಇತ್ತು. ಮೂರು ವರ್ಷ ಆ ರೀತಿಯ ಧಾರಾವಾಹಿ ಮಾಡಿ, ಈಗ ಹೀಗೆ ಹೇಳಿದ್ದಾರೆ. ಮೇಕಿಂಗ್ ವಿಡಿಯೋ ಯೂಟ್ಯೂಬ್​​ನಲ್ಲೇ ಇದೆ. ಯಾರಿಗೂ ಹರ್ಟ್ ಮಾಡಬೇಕು ಎಂದು ಮಾಡಿದ್ದಲ್ಲ ಎಂದು ಕೃಷ್ಣ ಹೇಳಿದರು.

ಭಾರತಿ ಭಟ್ ರಿಯಾಕ್ಷನ್‌

ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್ ಮಾಧ್ಯಮವೊಂದಕ್ಕೆ ರಿಯಾಕ್ಷನ್‌ ಕೊಟ್ಟಿದ್ದಾರೆ. ನಾನು ಮೊದಲು ಬಾಡಿ ಶೇಮಿಂಗ್‌ ಇರುವ ಸೀರಿಯಲ್‌ನಲ್ಲಿ ನಟಿಸಿದ್ದೆ ಎಂದು ಹೇಳುತ್ತಿರುವವರಿಗೆ ಒಂದು ಸ್ಪಷ್ಟನೆ ಕೊಡಬೇಕಿದೆ. ಆ ಸೀರಿಯಲ್ಲಿನ ಕಥೆ ಒಬ್ಬ ದಪ್ಪ ಹುಡುಗಿ ಸಮಾಜದಲ್ಲಿ ಎದುರಿಸುವ ನಿಜವಾದ ಸಮಸ್ಯೆಗಳ ಬಗ್ಗೆ ಇತ್ತು.

ಇದನ್ನೂ ಓದಿ: Rani Serial: ರಾಣಿಗೆ ಅಪ್ಪ ಇಲ್ವಾ? ಈ ಪಾತ್ರಕ್ಕೆ ನಟ ಯಾರು?

ಆ ನೋವನ್ನು ತೋರಿಸುವುದು ಬಾಡಿ ಶೇಮಿಂಗ್‌ ಅನ್ನು ಹಾಸ್ಯದ ಹೆಸರಿನಲ್ಲಿ ಬೆಂಬಲಿಸುವುದು ಒಂದೇ ಅಲ್ಲ. ಆ ಒಂದು ಡೈಲಾಗ್ ಫೇಮಸ್‌ ಆಯಿತು ಅಂದ್ರೆ ಅದು ಕೇವಲ ಕಾಮಿಡಿ ಆಗಿದ್ದರಿಂದ ಮಾತ್ರ ಅಲ್ಲ, ಜನರು ಅದನ್ನು ಇನ್ನೊಬ್ಬರನ್ನು ಹಾಸ್ಯ ಮಾಡಲು ಬಳಸಿದ ಕಾರಣವೂ ಹೌದು ಎಂದಿದ್ದಾರೆ.