Shivu Manasa Marriage: ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಗಿಚ್ಚಿ ಗಿಲಿಗಿಲಿ’ ಜೋಡಿ ಶಿವು-ಮಾನಸಾ
Shivu Manasa Marriage: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋಗಳಾದ ʻಗಿಚ್ಚಿ ಗಿಲಿ ಗಿಲಿʼ & ʻಮಜಾಭಾರತʼ ಮೂಲಕ ಫೇಮಸ್ ಆದವರು ನಟಿ ಮಾನಸ ಗುರುಸ್ವಾಮಿ ಮತ್ತು ಶಿವಕುಮಾರ್. ಇದೀಗ ಈ ಜೋಡಿ ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮಾನಸ ಮತ್ತು ಶಿವು ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಈ ಜೋಡಿಯು ಒಟ್ಟಿಗೆ ಹಲವು ಕಾಮಿಡಿ ಸ್ಕಿಟ್‌ಗಳನ್ನ ಮಾಡಿದೆ.
ಶಿವು-ಮಾನಸ -
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ 'ಮಜಾ ಭಾರತ' (Maja Bharatha) ಮತ್ತು 'ಗಿಚ್ಚಿ ಗಿಲಿಗಿಲಿ' (gicchi gili gili) ಮೂಲಕ ಮನೆಮಾತಾಗಿರುವ ನಟಿ ಮಾನಸಾ ಗುರುಸ್ವಾಮಿ ಹಾಗೂ ಶಿವಕುಮಾರ್ (ಶಿವು) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂಭ್ರಮ ಏಪ್ರಿಲ್ 25 ಮತ್ತು 26ರಂದು ಅದ್ಧೂರಿಯಾಗಿ (Marriage) ನೆರವೇರಿದೆ. ವಿವಾಹ ಪೂರ್ವ ಕಾರ್ಯಕ್ರಮಗಳಾದ ಮೆಹಂದಿ, ಹಳದಿ ಶಾಸ್ತ್ರ ಹಾಗೂ ಬಳೆ ಶಾಸ್ತ್ರಗಳು ನೆರವೇರಿದ್ದು, ಈ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೀಗ ಮದುವೆಯ ವಿಡಿಯೋಗಳು ವೈರಲ್ ಆಗಿವೆ. ಜೋಡಿಗೆ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಶಿವು ಮತ್ತು ಮಾನಸಾ ಕಿರುತೆರೆಯಿಂದಲೇ ಪರಿಚಿತರು. 'ಮಜಾ ಭಾರತ' ಕಾಲದಿಂದಲೂ ಜೊತೆಯಾಗಿ ಹಲವು ಕಾಮಿಡಿ ಸ್ಕಿಟ್‌ಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಜೋಡಿ, 'ಗಿಚ್ಚಿ ಗಿಲಿಗಿಲಿ' ಶೋನಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Happy Raj on OTT: ಒಟಿಟಿ ಅಂಗಳಕ್ಕೆ ಕಾಲಿರಿಸಿದ ಒಂದೊಳ್ಳೆ ಕಾಮಿಡಿ ಸಿನಿಮಾ ; ಸ್ಟ್ರೀಮಿಂಗ್ ಎಲ್ಲಿ?
'ಗಿಚ್ಚಿ ಗಿಲಿಗಿಲಿ' ಸೀಸನ್ 1ರ ವಿಜೇತರಾಗಿದ್ದ ಶಿವು, ಈ ಶೋನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ಮಾತನಾಡುತ್ತಾ, ತಮಗೆ ಸಿಕ್ಕ ಪ್ರಶಸ್ತಿಯ ಮೊತ್ತವನ್ನು ಸ್ವಂತ ಮನೆ ಕಟ್ಟಲು ಬಳಸುವುದಾಗಿ ಹೇಳಿದ್ದರು.
ಶಿವು ಮತ್ತು ಮಾನಸಾ ಜೋಡಿ ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದ ಸಮಯದಲ್ಲಿಯೇ ಪರಸ್ಪರ ಪರಿಚಯವಾಗಿ, ಆ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಈಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಮದುವೆಗೆ ಮುಂಚಿತವಾಗಿ ನಡೆದ ಶಾಸ್ತ್ರಗಳಲ್ಲಿ ಈ ಜೋಡಿ ಪರಸ್ಪರ ಕೈಗಳಿಗೆ ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಿರುವ ಫೋಟೋಗಳು ವೈರಲ್ ಆಗಿತ್ತು.
ಇದನ್ನೂ ಓದಿ: Mythological films: ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಚಲನಚಿತ್ರಗಳದ್ದೇ ಹವಾ; ಬಾಕ್ಸ್ ಆಫೀಸ್‌ನಲ್ಲಿ ಹೊಸ ಟ್ರೆಂಡ್!
ಶಿವು - ಮಾನಸಾ ಅದ್ದೂರಿ ಮೆಹಂದಿ ಶಾಸ್ತ್ರದಲ್ಲಿ ಸುಷ್ಮಿತಾ ಜಗ್ಗಪ್ಪ, ನಿರೂಪಕ ನಿರಂಜನ್ ದೇಶಪಾಂಡೆ ಪತ್ನಿ ಯಶಸ್ವಿನಿ ಸೇರಿದಂತೆ ಹಲವು ಕಿರುತೆರೆ ತಾರೆಯರು ಭಾಗಿಯಾಗಿದ್ದರು. ಈ ಹಿಂದೆ ಇದೇ ಶೋನಲ್ಲಿ ಕಾಣಿಸಿಕೊಂಡಿದ್ದ ಸುಷ್ಮಿತಾ ಮತ್ತು ಜಗಪ್ಪ ಅವರು ಹೀಗೆ ಪ್ರೀತಿಸಿ ಮದುವೆ ಆಗಿದ್ದರು.