Gowri shankara serial: ‘ಗೌರಿಶಂಕರ’ ಧಾರಾವಾಹಿ ಅಂತ್ಯ! ಕಾರಣ ಏನು?
Gowri shankara serial: ಗೌರಿ' ಪಾತ್ರದಲ್ಲಿ ಆರಂಭದಲ್ಲಿ ನಟಿ ಕೌಸ್ತುಭ ಮಣಿ ನಟಿಸಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ಅವರು, ಧಾರಾವಾಹಿಯಿಂದ ಹೊರಬಂದ್ದಿದ್ದರು. ಬಳಿಕ ನಟಿ ದಿವ್ಯಾ ವಾಗುಕರ್ ನಟಿಸಿದ್ದರು, ಇವರು ಸುಮಾರು ಮೂರು ವರ್ಷಗಳ ಕಾಲ ಗೌರಿ ಪಾತ್ರಕ್ಕೆ ಜೀವತುಂಬಿ ನಟಿಸಿದ್ದರು. ಆರೋಗ್ಯದ ಸಮಸ್ಯೆಯಿಂದಾಗಿ ದಿವ್ಯಾ ಕೂಡ ಧಾರಾವಾಹಿಯಿಂದ ಹೊರನಡೆದರು.
ಗೌರಿ ಶಂಕರ ಧಾರಾವಾಹಿ -
950ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ವೀಕ್ಷಕರ ಮನ ಗೆದ್ದಿದ್ದ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ‘ಗೌರಿ ಶಂಕರ (Gowri shankara) ಮುಕ್ತಾಯವಾಗುತ್ತಿದೆ. ಶೀಘ್ರದಲ್ಲೇ ಅಂತಿಮ ಸಂಚಿಕೆಗಳು ಪ್ರಸಾರವಾಗಲಿವೆ. ನಾಯಕನ ಪಾತ್ರಕ್ಕೆ ನಟ ಯಶ್ವಂತ್ ಬೆಟ್ಟಸ್ವಾಮಿ ಬಣ್ಣ ಹಚ್ಚಿದರು. ಪ್ರಾರಂಭದಿಂದೂ ಕೊನೆಯ ವರೆಗೂ ಸತತ 3ರಿಂದ 4ವರ್ಷ ಶಂಕರ ಪಾತ್ರಕ್ಕೆ ಜೀವ ತುಂಬಿದ್ದಾರೆ.
'ಗೌರಿ' ಪಾತ್ರದಲ್ಲಿ ಆರಂಭದಲ್ಲಿ ನಟಿ ಕೌಸ್ತುಭ ಮಣಿ ನಟಿಸಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ಅವರು, ಧಾರಾವಾಹಿಯಿಂದ ಹೊರಬಂದ್ದಿದ್ದರು. ಬಳಿಕ ನಟಿ ದಿವ್ಯಾ ವಾಗುಕರ್ ನಟಿಸಿದ್ದರು, ಇವರು ಸುಮಾರು ಮೂರು ವರ್ಷಗಳ ಕಾಲ ಗೌರಿ ಪಾತ್ರಕ್ಕೆ ಜೀವತುಂಬಿ ನಟಿಸಿದ್ದರು. ಆರೋಗ್ಯದ ಸಮಸ್ಯೆಯಿಂದಾಗಿ ದಿವ್ಯಾ ಕೂಡ ಧಾರಾವಾಹಿಯಿಂದ ಹೊರನಡೆದರು. ನಂತರ 'ಕನ್ನಡತಿ' ಖ್ಯಾತಿಯ ರಮೋಲ ಹೊಸ ಗೌರಿಯಾಗಿ ಎಂಟ್ರಿ ಕೊಟ್ಟಿದ್ದರು. ಹೀಗೆ ಪದೇ ಪದೇ ನಾಯಕಿ ಬದಲಾಗಿದ್ದು ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿತ್ತು. ಧಾರಾವಾಹಿ ಅಂತ್ಯವಾಗಲು ಇದೂ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: Kajal Aggarwal: ಸೌತ್‌ನವರ ಈ ಗುಣವನ್ನು ಬಾಲಿವುಡ್ ಕಲಿಯಬೇಕು ಎಂದ ಕಾಜಲ್ ಅಗರ್ವಾಲ್
‘ಗೌರಿ ಶಂಕರ’ ಧಾರಾವಾಹಿ ಪ್ರಾರಂಭದ ದಿನದಲ್ಲಿದ್ದ ನಿರ್ದೇಶಕರು ಬದಲಾದರು. ಗಿರೀಶ(ವಿಷ್ಣು) ಅರೆಕಟ್ಟೆದೊಡ್ಡಿ. ಸದ್ಯ ಕಲರ್ಸ್ ಕನ್ನಡ ವಾಹಿನಿಯ ‘ಪವಿತ್ರ ಬಂಧನ’ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಇವರ ನಂತರ ಬಂದವರು ಅಮರೇಶ್ ಮೂಲಿಮನೆ. ಸದ್ಯ ಇವರೇ ‘ಗೌರಿ ಶಂಕರ’ ಧಾರಾವಾಹಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಗಿರೀಶ(ವಿಷ್ಣು) ಅರೆಕಟ್ಟೆದೊಡ್ಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ ಗೌರಿ ಶಂಕರ ನನ್ನ ಬದುಕಿನ ಹೊಸ ಅಧ್ಯಾಯ ಸೃಷ್ಟಿಸಿದ ಧಾರಾವಾಹಿ. ಒಬ್ಬ ಪರಿಪೂರ್ಣ ನಿರ್ದೇಶಕನಾಗಿ ಮಾಡಿದ ಧಾರಾವಾಹಿ. ಇದರಿಂದ ನಾನು ಕಲಿತದ್ದು ಸಾಕಷ್ಟಿದೆ. ಯಾರೋ ಹುಡುಗನಂತೆ ಏನು ಮಾಡುತ್ತಾನೆ? ನೋಡೋಣ ಅಂದೋರು ಶಬ್ಬಾಸ್ ಗಿರಿ ಕೊಟ್ಟಿದ್ದು ಇದೆ. ಒಂದಷ್ಟು ಜನ ನನ್ನ ಪ್ರತಿಭೆಗೆ ಕನ್ನಡಿ ಆದ್ರೆ ಒಂದಷ್ಟು ಜನ ಕನ್ನಡಿ ಹೇಗೇ ಹೊಡಿಯೋದು ಅಂತ ಸಂಚು ರೂಪಿಸಿದ್ರು .18 ಸಂಚಿಕೆ ಇಂದ 518 ಸಂಚಿಕೆ ಪ್ರಯಾಣದಲ್ಲಿ ನನಗೆ ಸಿಕ್ಕ ಅದ್ಭುತ ವ್ಯಕ್ತಿಗಳು ನನ್ನ ತಾಂತ್ರಿಕ ವರ್ಗದವರು.
ಪ್ರಸನ್ನ ಸರ್ ಮತ್ತು ಸಿಸಿಎಸ್ (CCS) ಹುಡುಗರು, ಎಸ್ ಎಂ ಕೆ ಜಿ ಕ್ಯಾಮೆರಾ ಹುಡುಗರು,Editor ಕಿರಣ್ ಸರ್, ಗೌತಮ್ ನನ್ನ ಬೆನ್ನಿಗೇ ನಿಂತ ಶಕ್ತಿಗಳ. ಇನ್ನೂ ಕಲಾವಿದರು ಗೌರಿ, ಶಂಕರ, ಶಿವರುದ್ರಪ್ಪ, ಪಾರ್ವತಿ , ನಂಜಮ್ಮ, ರುದ್ರ, ಸುನಂದಾ, ಕೋಲಿ, ಚಿರುಮುರಿ, ಪಂಕಜ, ಆದಿ, ಐಶು, ಶ್ರೀನಿವಾಸ ಮೇಷ್ಟ್ರು, ಗ್ರೀಷ್ಮಾ, ಮೀರಾ, ವಿದ್ಯಾಮ್ಮ, ಮನೋಜ್ ಎಲ್ಲರೂ ಪಾತ್ರಕ್ಕೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜೀವ ತುಂಬಿದರು.
ಇದನ್ನೂ ಓದಿ: Amitabh Bachchan: ಅಮಿತಾಭ್ ಬಚ್ಚನ್ಗೆ ಸರ್ಜರಿ? ಕೊನೆಗೂ ಸ್ಪಷ್ಟನೆ ಕೊಟ್ಟ ನಟ
ಇದಕ್ಕೆಲ್ಲಾ ಕಾರಣ ಎಸ್ಟ್ರೆಲ್ಲಾ production house, ಸ್ಟಾರ್ ಸುವರ್ಣ. ನಾನು ಅವರಿಗೆ ಸದಾ ಚಿರಋಣಿ. ಪ್ರತಿ ಅಂತ್ಯದ ಹಿಂದೆ ಹೊಸದೊಂದು ಆರಂಭ ಇದೆ. ಎಲ್ಲರಿಗೂ ಒಳ್ಳೆಯದಾಗಲಿ. ಚಿತ್ರಕರಣದ ಪ್ರತಿ ಹಂತವನ್ನು ಒಮ್ಮೆ ಮರುಕಳಿಸಿದರೆ ಕಣ್ಣೀರ ಹನಿಗಳು ನಿಲ್ಲಲು ಹಠ ಮಾಡುತ್ತವೆ . ಗೌರಿ ಶಂಕರ. ಶ್ರೀನಾಥ್ ಸರ್, ಪದ್ದಮ್ಮ ಭುವಿ I LOVE YOU. ಎಂದು ಬರೆದುಕೊಂಡಿದ್ದಾರೆ.