ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ‘ಹನುಮಾನ್ ಅಂಶ್’ ಅಬ್ಬರ; ಕೇವಲ 12 ದಿನಗಳಲ್ಲಿ 33 ಕೋಟಿ ರೂ. ಕಲೆಕ್ಷನ್; ವಿತರಣೆಯಲ್ಲಿ ಹೊಂಬಾಳೆ ಮೈಲಿಗಲ್ಲು!

‘ಹನುಮಾನ್ ಅಂಶ್’ ಸಿನಿಮಾವು ವಿದೇಶಿ ಮಾರುಕಟ್ಟೆಯಲ್ಲಿ ಅಪಾರ ಯಶಸ್ಸು ಕಂಡಿದೆ. ಕೇವಲ 12 ದಿನಗಳಲ್ಲೇ 33+ ಕೋಟಿ ರೂಪಾಯಿ ಗಳಿಸಿ 2026ರ ಸಾಲಿನಲ್ಲಿ ದಾಖಲೆ ಬರೆದಿದೆ. ಮಹಾರಾಜ್‌ಜಿಯ ಭಕ್ತಿ ಸಂದೇಶ ಅನಿವಾಸಿ ಭಾರತೀಯರ ಮನಗೆದ್ದಿದೆ. ಹೊಂಬಾಳೆ ಸಂಸ್ಥೆಯ ಜಾಗತಿಕ ವಿತರಣೆಯು ಚಿತ್ರದ ಗೆಲುವಿಗೆ ಪ್ರಮುಖ ಶಕ್ತಿಯಾಗಿದೆ.

ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ‘ಹನುಮಾನ್ ಅಂಶ್’ ಅಬ್ಬರ; 33 ಕೋಟಿ ಕಲೆಕ್ಷನ್!

-

Avinash GR
Avinash GR Sep 23, 2026 1:40 PM

ಭಕ್ತಿ, ನಂಬಿಕೆ ಹಾಗೂ ಮಹಾರಾಜ್‌ಜಿಯ ಸಂದೇಶವನ್ನು ಸಾರುವ ‘ಹನುಮಾನ್ ಅಂಶ್’ ಸಿನಿಮಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಸೆಪ್ಟೆಂಬರ್ 11ರಂದು ವಿದೇಶಿ ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಚಿತ್ರವು ಕೇವಲ 12 ದಿನಗಳಲ್ಲೇ ಭರ್ಜರಿ 3.50 ಮಿಲಿಯನ್ ಡಾಲರ್‌ಗೂ ಅಧಿಕ (ಅಂದಾಜು 33 ಕೋಟಿ ರೂಪಾಯಿ) ಗಳಿಕೆ ಮಾಡಿದೆ. ಈ ಮೂಲಕ 2026ನೇ ಸಾಲಿನಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳ ಪೈಕಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ.

ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಳ

ಮೊದಲ ದಿನದಿಂದಲೇ ಹೊರದೇಶಗಳ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಿನದಿಂದ ದಿನಕ್ಕೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಕಥೆಯಲ್ಲಿರುವ ಭಕ್ತಿ, ನಂಬಿಕೆ ಹಾಗೂ ಮಹಾರಾಜ್‌ಜಿಯ ಜೀವನ ಮೌಲ್ಯಗಳು ಗಡಿ ಹಾಗೂ ಭಾಷೆಗಳನ್ನು ಮೀರಿ ಅನಿವಾಸಿ ಭಾರತೀಯರು ಸೇರಿದಂತೆ ವಿದೇಶಿ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಭಾರತೀಯ ನೆಲದ ಸಂಸ್ಕೃತಿ ಆಧಾರಿತ ಕಥೆಯೊಂದು ಜಾಗತಿಕ ಮಟ್ಟದಲ್ಲಿ ಇಷ್ಟು ದೊಡ್ಡ ಪ್ರಮಾಣದ ಸ್ವೀಕಾರಾರ್ಹತೆ ಪಡೆದಿರುವುದು ಚಿತ್ರದ ಗುಣಮಟ್ಟ ಮತ್ತು ವಿಷಯದ ಮೇಲಿನ ನಂಬಿಕೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

Hanuman Ansh : 100 ಕೋಟಿ ರೂ‌ OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

ಹೊಂಬಾಳೆ ಸಂಸ್ಥೆಗೆ ದೊಡ್ಡ ಗೆಲುವು

ಈ ಅಭೂತಪೂರ್ವ ಯಶಸ್ಸು ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ವಿದೇಶಿ ವಿತರಣಾ ವಿಭಾಗವಾದ ‘ಹೊಂಬಾಳೆ ಓವರ್‌ಸೀಸ್’ ಪಾಲಿಗೆ ಮತ್ತೊಂದು ಬಹುದೊಡ್ಡ ಹೆಗ್ಗುರುತಾಗಿದೆ. ಭಾರತೀಯ ಮೂಲದ ಕಥೆಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಜಗತ್ತಿನ ಮೂಲೆ ಮೂಲೆಗೂ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ವಿತರಣಾ ಜಾಲಕ್ಕೆ ‘ಹನುಮಾನ್ ಅಂಶ್’ ಸಿನಿಮಾದ ಗಲ್ಲಾಪೆಟ್ಟಿಗೆ ಯಶಸ್ಸು ಹೊಸ ಚೈತನ್ಯ ಹಾಗೂ ಬಲ ತುಂಬಿದೆ.

ಹನುಮಾನ್‌ಜಿಯ ದೂತರಂತೆ ಬಂದ ಹೊಂಬಾಳೆ

ಚಿತ್ರದ ಈ ಭರ್ಜರಿ ಯಶಸ್ಸಿನ ಕುರಿತು ಕೃತಜ್ಞತೆ ವ್ಯಕ್ತಪಡಿಸಿರುವ ‘ಹನುಮಾನ್ ಅಂಶ್’ ಚಿತ್ರದ ನಿರ್ಮಾಪಕರು, "ಹನುಮಾನ್‌ಜಿಯ ದೂತರಂತೆ ಹೊಂಬಾಳೆ ಓವರ್‌ಸೀಸ್ ನಮ್ಮ ಕೈಹಿಡಿದು ನಿಂತಿದೆ. ಅವರ ಬೃಹತ್ ವಿತರಣಾ ಜಾಲದ ಮೂಲಕ ನಮಗೆ ಜಾಗತಿಕ ಸಿನಿರಂಗದ ಬಾಗಿಲು ತೆರೆದುಕೊಂಡಿದೆ. ಮಹಾರಾಜ್‌ಜಿಯ ಉನ್ನತ ಮೌಲ್ಯಗಳನ್ನು ವಿಶ್ವಾದ್ಯಂತ ತಲುಪಿಸಲು ವೇದಿಕೆ ಕಲ್ಪಿಸಿಕೊಟ್ಟ ಅವರಿಗೆ ನಮ್ಮ ಧನ್ಯವಾದಗಳು. ‘ವಿಶ್ವವೇ ನಮ್ಮತ್ತ ಮುಖ ಮಾಡಲಿದೆ’ ಎಂದು ಮಹಾರಾಜ್‌ಜಿ ಅಂದು ನುಡಿದಿದ್ದ ಮಾತು ಇಂದು ನನಸಾಗುತ್ತಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ" ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.

ಕೇವಲ 12 ದಿನಗಳಲ್ಲಿ 33 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಭಕ್ತಿ ಪ್ರಧಾನ ಕಥಾವಸ್ತುವು ವಿಶ್ವಮಟ್ಟದಲ್ಲಿ ಅಧಿಪತ್ಯ ಸಾಧಿಸಬಲ್ಲದು ಎಂಬುದನ್ನು ‘ಹನುಮಾನ್ ಅಂಶ್’ ಮತ್ತೊಮ್ಮೆ ಸಾಬೀತುಪಡಿಸಿದೆ.