Yash: ಹರೀಶ್ ರಾಯ್ ಅಂತಿಮ ದರ್ಶನ ಪಡೆದ ಯಶ್: ನಟನ ಪುತ್ರನಿಗೆ ಹಣ ಸಹಾಯ ಮಾಡಿದ ರಾಕಿಂಗ್ ಸ್ಟಾರ್
ಹರೀಶ್ ರಾಯ್ ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಜಿಎಫ್ (KGF Movie) ಚಿತ್ರದ ನಂತರ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವರ್ಷದಿಂದ ಕ್ಯಾನ್ಸರ್‌ಗೆ (Cancer) ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಯಶ್ ಅವರು ಚಾಚಾ ಹರೀಶ್ ರಾಯ್ (Harish Rai) ಅಂತಿಮ ದರ್ಶನ ಪಡೆದಿದ್ದಾರೆ.
harish Rai -
ʼಕೆಜಿಎಫ್ ಚಾಚಾʼ ಎಂದೇ ಖ್ಯಾತರಾಗಿದ್ದ ಕನ್ನಡದ ಖಳನಟ ಹರೀಶ್ ರಾಯ್ (harish rai) ನಿಧನರಾಗಿದ್ದಾರೆ. ʼಓಂʼ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದ ಹರೀಶ್ ರಾಯ್, ಜೋಡಿ ಹಕ್ಕಿ, ಚಕ್ರವರ್ತಿ, ಕಾಶಿ, ಸಂಜು ವೆಡ್ಸ್ ಗೀತ, ನಲ್ಲ,ತಾಯವ್ವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಜಿಎಫ್ ಚಿತ್ರದ ನಂತರ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವರ್ಷದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಯಶ್ ಅವರು ಚಾಚಾ ಹರೀಶ್ ರಾಯ್ (Harish Rai) ಅಂತಿಮ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: BBK 12: ʻಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆʼ; ಮಾಳು ಖಡಕ್ ಮಾತು!
ಯಶ್ ಅವರು ಈ ಹಿಂದೆ ಹರೀಶ್ ರಾಯ್ ಅವರಿಗೆ ಆರ್ಥಿಕ ನೆರವು ನೀಡಿದ್ದರು. ಅದನ್ನ ಯಾರಿಗೂ ಹೇಳ್ಬೇಡಿ ಅನ್ನೋದನ್ನ ತಿಳಿಸಿದ್ದರು. ಆದರೀಗ ಹರೀಶ್ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನು ಈ ವಿಷಯ ತಿಳಿದ ರಾಕಿಂಗ್ ಸ್ಟಾರ್ ಯಶ್, ಹರೀಶ್ ರಾಯ್ ಅಂತಿಮ ದರ್ಶನಕ್ಕೆ ಬಂದಿದ್ದಾರೆ. ಇದೇ ಸಮಯದಲ್ಲಿಯೇ ಹರೀಶ್ ರಾಯ್ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ್ದಾರುವುದಾಗಿ ವರದಿಯಾಗಿದೆ. ನಟ ಹರೀಶ್ ಪುತ್ರನ ಕರೆಸಿ, ಹಣಕಾಸಿನ ಸಹಾಯ ಮಾಡಿರುವುದಾಗಿ ವರದಿಯಾಗಿದೆ.
ಕಿರಿಯ ಪುತ್ರ ರೋಷನ್ನನ್ನು ತಮ್ಮ ಕಾರಿನ ಒಳಗೆ ಕರೆಸಿ, ಮಾತನಾಡಿಸಿದ ಯಶ್, ಹಣ ಸಹಾಯ ಮಾಡಿದ್ದು, ಈ ಬಗ್ಗೆ ಎಲ್ಲೂ ಹೇಳಬೇಡ ಎಂದಿದ್ದಾರೆ ಎನ್ನಲಾಗಿದೆ.
ಕನ್ನಡ ಹಾಗೂ ತಮಿಳಿನಲ್ಲೂ ನಟನೆ
ತಮಿಳಿನಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂಡರ್ ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಹಾಗೂ ಸ್ಯಾಂಡಲ್ವುಡ್ನ ಟಾಪ್ ಸಿನಿಮಾ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2ರಲ್ಲಿ ಅಭಿನಯಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಸಹಾಯದ ಅಗತ್ಯವಿದ್ದ ಅವರಿಗೆ ಶಿವಣ್ಣ, ಧ್ರುವ, ದರ್ಶನ್, ಯಶ್ ಸೇರಿದಂತೆ ಅನೇಕ ನಟರು ಹಣ ಸಹಾಯ ಮಾಡಿದ್ದರು. ಅವರು 17 ಕೀಮೋಥೆರಪಿ ಇಂಜೆಕ್ಷನ್ ಪಡೆಯಬೇಕಿತ್ತು.
ಒಂದು ಇಂಜೆಕ್ಷನ್ ಬೆಲೆ 3.5 ಲಕ್ಷ ರೂ. ಆಗುತ್ತಿತ್ತು. ಹಣ ಸಂಗ್ರಹ ಆಗುತ್ತಿದ್ದಂತೆ ಹಾಸ್ಪಿಟಲ್‌ಗೆ ಅಡ್ಮಿಟ್ ಆಗಿ ಒಂದು ಇಂಜೆಕ್ಷನ್ ಹಾಕಲಾಗಿತ್ತು. ಆದರೆ ಇಂಜೆಕ್ಷನ್‌ಗೆ ಸಹಕರಿಸದ ದೇಹದಲ್ಲಿ ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ನಿಶ್ಯಕ್ತಿಯಿಂದ ಐಸಿಯುನಲ್ಲಿ ಸುಮಾರು ದಿನಗಳಿಂದ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ
ಯಶ್ ಸಿನಿಮಾ ಅಪ್‌ಡೇಟ್
ಸದ್ಯ ಯಶ್ ಬಹು ನಿರೀಕ್ಷಿತ ಚಿತ್ರಗಳಾದ ʼಟಾಕ್ಸಿಕ್ʼ ಮತ್ತು ʼರಾಮಾಯಣʼದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 2022ರಲ್ಲಿ ತೆರೆಕಂಡ ʼಕೆಜಿಎಫ್ 2' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಳಿಕ ಯಶ್ ಒಪ್ಪಿಕೊಂಡ ಚಿತ್ರಗಳಿವು ಎನ್ನುವುದು ವಿಶೇಷ. ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಟಾಕ್ಸಿಕ್ʼ ಕನ್ನಡ ಜತೆ ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಬಳಿಕ ವಿವಿಧ ಭಾಷೆಗಳಿಗೆ ಡಬ್ ಆಗಲಿದೆ. ಇನ್ನು ನಿತೇಶ್ ತಿವಾರಿ ನಿರ್ದೇಶನದ ʼರಾಮಾಯಣʼದಲ್ಲಿ ಯಶ್ ರಾವಣನ ಪಾತ್ರ ನಿರ್ವಹಿಸುತ್ತಿದ್ದು, ರಣಬೀರ್ ಕಪೂರ್, ಸಾಯಿ ಪಲ್ಲವಿ ರಾಮ ಮತ್ತು ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.