ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika And Vijay: ಕೊಡಗಿನ ಕುವರಿ ರಶ್ಮಿಕ ಮದುವೆ ದಿನಾಂಕ ಫಿಕ್ಸ್‌; ವಿವಾಹ ನಡೆಯುವ ಪ್ಲೇಸ್‌ ಎಲ್ಲಿ ಗೊತ್ತಾ?

Rashmika And Vijay: ಟಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಬ್ಬರಾಗಿದ್ದಾರೆ. ಸದ್ಯ ಈ ಜೋಡಿ ಶೀಘ್ರದಲ್ಲೆ ಮದುವೆಯಾಗಲಿದೆ ಎನ್ನುವ ಸುದ್ದಿ ಹಬ್ಬಿದೆ.‌ ನಾಲ್ಕು ತಿಂಗಳ ಹಿಂದೆ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಇದೀಗ ಮದುವೆ ದಿನಾಂಕ ಕೂಡ ಫಿಕ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ

ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಮದುವೆ ಡೇಟ್‌ ರಿವೀಲ್‌!

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ -

Profile
Pushpa Kumari Nov 6, 2025 8:35 PM

ನವದೆಹಲಿ: ಟಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಒಬ್ಬರಾಗಿದ್ದಾರೆ. ಸದ್ಯ ಈ ಜೋಡಿ ಶೀಘ್ರದಲ್ಲೆ ಮದುವೆಯಾಗಲಿದೆ ಎನ್ನುವ ಸುದ್ದಿ ಹಬ್ಬಿದೆ.‌ ನಾಲ್ಕು ತಿಂಗಳ ಹಿಂದೆ ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಇದೀಗ ಮದುವೆ ದಿನಾಂಕ ಕೂಡ ಫಿಕ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಜೋಡಿ ಇನ್ನೂ ಅಧಿಕೃತವಾಗಿ ಈ ವಿಚಾರವನ್ನು ದೃಢೀಕರಿಸದಿದ್ದರೂ ಈಗಾಗಲೇ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ. ಹೌದು ಟಾಲಿವುಡ್‌ನ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮುಂಬರುವ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ರಶ್ಮಿಕಾ- ವಿಜಯ್ ಮದುವೆಯೂ ಫೆಬ್ರವರಿ 26, 2026 ರಂದು ನಡೆಯಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಈ ಜೋಡಿ ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣವಾದ ಉದಯಪುರದಲ್ಲಿ ಅದ್ದೂರಿ 'ರಾಯಲ್ ವೆಡ್ಡಿಂಗ್'ಗೆ ಪ್ಲಾನ್ ಕೂಡ ಮಾಡಿ ಕೊಂಡಿದ್ದಾರಂತೆ. ಕಳೆದ ತಿಂಗಳು, ಅಂದರೆ ಅಕ್ಟೋಬರ್ 3, 2025 ರಂದು ವಿಜಯ್ ಅವರ ಹೈದರಾಬಾದ್ ನಿವಾಸದಲ್ಲಿ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಖಾಸಗಿ ನಿಶ್ಚಿತಾರ್ಥ ನಡೆದಿದೆ. ಇತ್ತೀಚೆಗೆ ರಶ್ಮಿಕಾ ಅವರು ಥಾಮಾ ಸಿನಿಮಾ ರಿಲೀಸ್‌ ಸಂದರ್ಭ ದಲ್ಲಿ ಎಂಗೆಜ್ ಮೆಂಟ್ ಬಗ್ಗೆ ಸ್ಪಷ್ಟನೆ ನೀಡಿದ್ದರು. ಚಿತ್ರದ ಪ್ರಮೋಷನಲ್‌ ಈವೆಂಟ್‌ ವೇಳೆ ರಶ್ಮಿಕಾ ಬಳಿ ನಿಶ್ಚಿತಾರ್ಥದ ರೂಮರ್‌ ಬಗ್ಗೆ ಕೇಳ ಲಾಯಿತು.ಆಗ ಉತ್ತರಿಸಿದ ರಶ್ಮಿಕಾ ಮಂದಣ್ಣ ʼಎಲ್ಲರಿಗೂ ಈ ಬಗ್ಗೆ ಗೊತ್ತಿದೆʼ ಎಂದಷ್ಟೇ ಎಂದು ನಾಚಿಕೊಂಡಿದ್ದರು.

ಇದನ್ನು ಓದಿ:BRAT Movie: ಯಶಸ್ಸಿನ ಹಾದಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರ

ರಶ್ಮೀಕಾ ಹಾಗೂ ವಿಜಯ್ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಈ ಜೋಡಿಯ ಕೆಮಿಸ್ಟ್ರಿ ಇಷ್ಟವಾಗಿತ್ತು. ಸದ್ಯ ಅವರ ಆಫ್-ಸ್ಕ್ರೀನ್ ಪ್ರೀತಿಯು ಈಗ ಮದುವೆಯ ಹಂತಕ್ಕೆ ತಲುಪಿದ್ದು ಈ ಸುದ್ದಿಗಾಗಿ ಅಭಿಮಾನಿಗಳು ಕಾತರದಿಂದ ಕಾಯು ತ್ತಿದ್ದಾರೆ. ಸದ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಶ್ಮಿಕಾ ಅವರ ನಟನೆಯ ದಿ ಗರ್ಲ್‌ ಫ್ರೆಂಡ್‌ ಸಿನಿಮಾವು ನವೆಂಬರ್‌ 7ಕ್ಕೆ ರಿಲೀಸ್‌ ಆಗಲಿದ್ದು ಸಿನಿಪ್ರಿಯರು ಕಾತುರರಾಗಿದ್ದಾರೆ.

ಈ ವರ್ಷ ರಶ್ಮಿಕಾ ಅವರ ಹಿಂದಿಯ ʼಛಾವಾʼ, ʼಸಿಕಂದರ್‌ʼ ಚಿತ್ರ ತೆರೆಕಂಡಿವೆ. ಈ ಪೈಕಿ ʼಛಾವಾʼ ಜಾಗತಿಕವಾಗಿ 800 ಕೋಟಿ ರೂ. ಕಲೆಕ್ಷನ್‌ ಮಾಡಿ ಸೂಪರ್‌ ಹಿಟ್‌ ಎನಿಸಿಕೊಂಡರೆ ʼಸಿಕಂದರ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಇದೀಗ ʼಥಮ್ಮ ಕೂಡ ಅಷ್ಟೇನು ಸದ್ದು ಮಾಡಿಲ್ಲ. ಮುಂಬರುವ ಚಿತ್ರಕ್ಕೆ ಪ್ರೇಕ್ಷಕ ಏನು ಹೇಳುತ್ತಾನೆ ಎಂದು ಕಾದು ನೋಡಬೇಕಿದೆ.