Bigg Boss Kannada 13: ಬಿಗ್ ಬಾಸ್ ಮನೆ ಒಳಗೆ Survive ಆಗೋದು ಹೇಗೆ? ಚಂದನ್ ಶೆಟ್ಟಿ ಟಿಪ್ಸ್ ಇದು
Bigg Boss Kannada 13: ಬಿಗ್ ಬಾಸ್ ಕನ್ನಡ’ 13ನೇ ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ ಬಾರಿಯ ಕಾರ್ಯಕ್ರಮದ ಅದ್ಧೂರಿ ಆರಂಭ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಸ್ಪರ್ಧಿಸಲಿದ್ದು, 'ಅಗ್ನಿ ಪರೀಕ್ಷೆ' ಮೂಲಕ ಮೂವರು ಆಯ್ಕೆಯಾಗಲಿದ್ದಾರೆ. , ಮಾಜಿ ವಿನ್ನರ್ ಚಂದನ್ ಶೆಟ್ಟಿ ಅವರು ಸ್ಪರ್ಧಿಗಳಿಗೆ ಮನೆಯಲ್ಲಿ 100 ದಿನ ಉಳಿದುಕೊಳ್ಳಲು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಚಂದನ್ ಶೆಟ್ಟಿ -
‘ಬಿಗ್ ಬಾಸ್ ಕನ್ನಡ’ 13ನೇ (Bigg Boss kannada 13) ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ ಬಾರಿಯ ಕಾರ್ಯಕ್ರಮದ ಅದ್ಧೂರಿ ಆರಂಭ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ (Colors Kannada) ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ. ‘ಬಿಗ್ ಬಾಸ್ ಕನ್ನಡ’ 13ನೇ ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ ಬಾರಿಯ ಕಾರ್ಯಕ್ರಮದ ಅದ್ಧೂರಿ ಆರಂಭ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಸ್ಪರ್ಧಿಸಲಿದ್ದು, 'ಅಗ್ನಿ ಪರೀಕ್ಷೆ' ಮೂಲಕ ಮೂವರು ಆಯ್ಕೆಯಾಗಲಿದ್ದಾರೆ. , ಮಾಜಿ ವಿನ್ನರ್ ಚಂದನ್ ಶೆಟ್ಟಿ (Chandan shetty) ಅವರು ಸ್ಪರ್ಧಿಗಳಿಗೆ ಮನೆಯಲ್ಲಿ 100 ದಿನ ಉಳಿದುಕೊಳ್ಳಲು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ಉತ್ತಮ ಬಾಂಧವ್ಯ
ಬಿಗ್ ಬಾಸ್ ಮನೆಗೆ ಹೋದ ತಕ್ಷಣ ಎಲ್ಲರ ಜೊತೆ ಮೊದಲು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ವಾರಗಳಲ್ಲೇ ನಾಮಿನೇಟ್ ಆಗಿಬಿಟ್ಟರೆ ಉಳಿದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಆರಂಭದ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಿರಬೇಕೆಂದರೆ ಮೊದಲು ಮನೆಯ ಸದಸ್ಯರ ವಿಶ್ವಾಸ ಗೆಲ್ಲಬೇಕು ಸದಸ್ಯರ ಜೊತೆ ಸ್ನೇಹ ಬೆಳೆಸಿದರೆ ನೀವು ನಾಮಿನೇಟ್ ಆಗುವ ಅಪಾಯ ತಪ್ಪುತ್ತದೆ.
ಇದನ್ನೂ ಓದಿ: Hanuman Ansh : ಬಾಲಿವುಡ್‌ನಿಂದ ಸಹಾಯ ಕೋರಿದೆ ಆದರೆ ಬೆಂಬಲ ಸಿಗಲಿಲ್ಲ; ಹನುಮಾನ್ ಅಂಶ್ ನಿರ್ದೇಶಕ
ಚಂದನ್ ಶೆಟ್ಟಿ ಹೇಳಿದ್ದಾರೆ. ಈಗಾಗಲೇ ಕಠಿಣ ಟಾಸ್ಕ್‌ಗಳನ್ನು ಪಾಸು ಮಾಡಿ ಅಂತಿಮವಾಗಿ 10 ಸ್ಪರ್ಧಿಗಳು ಫಿನಾಲೆ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ. ಟಾಪ್-3 ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ಮನೆಯೊಳಗೆ ಅಧಿಕೃತ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಆರಂಭವಾಗಲಿದೆ. ಬಳಿಕ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಅತ್ತ ಸೋಷಿಯಲ್ ಮೀಡಿಯಾದಲ್ಲಿ ಭಾರತದ ವಿವಿಧ ಭಾಷೆಗಳ ಬಿಗ್ ಬಾಸ್ ನಿರೂಪಕರ (Hosts) ಸಂಭಾವನೆಯ ಪೋಸ್ಟರ್‌ವೊಂದು ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Ananthan Kaadu OTT: ನಟ ಆರ್ಯ ನಟನೆಯ 'ಅನಂತನ್ ಕಾಡು' ಈ ಒಟಿಟಿಗೆ ಎಂಟ್ರಿ!
ಪ್ರಸ್ತುತ ಭಾರತದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಒಟ್ಟು 7 ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಏಕಕಾಲದಲ್ಲಿ ಜಿಯೋ-ಹಾಟ್‌ಸ್ಟಾರ್ (JioHotstar) ಹಾಗೂ ಆಯಾ ಪ್ರಾದೇಶಿಕ ಚಾನೆಲ್‌ಗಳಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ. ಮುಂದಿನ ದಿನಗಳಲ್ಲಿ ಭೋಜ್‌ಪುರಿ ಮತ್ತು ಪಂಜಾಬಿ ಭಾಷೆಗಳಿಗೂ ಈ ಶೋ ವಿಸ್ತರಣೆಯಾಗುವ ಸಾಧ್ಯತೆಯಿದೆ.