ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rashmika Mandanna: ವಿಜಯ್-ರಶ್ಮಿಕಾ ಮಂದಣ್ಣಗೆ ಆನ್‌ಲೈನ್ ಕಿರುಕುಳ: ಸೈಬರ್ ಕ್ರೈಂ ಪೊಲೀಸರಿಗೆ ದೂರು

Rashmika Mandanna:ವಿಜಯ್ ದೇವರಕೊಂಡ (Vijay Devarkonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಹಾಗೂ ದಾರಿತಪ್ಪಿಸುವ ಮಾಹಿತಿಯ ವಿರುದ್ಧ ಅವರ ತಂಡ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ.ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಳ್ಳಲಾಗುತ್ತಿರುವ ಕೆಲವು ವಿಷಯಗಳು ಕೇವಲ ಟೀಕೆಗೆ ಸೀಮಿತವಾಗಿಲ್ಲ. ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ತಂಡ ಆರೋಪಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರನ್ನು ಕೋರಿದೆ.

ವಿಜಯ್-ರಶ್ಮಿಕಾಗೆ ಆನ್‌ಲೈನ್ ಕಿರುಕುಳ: ಸೈಬರ್ ಕ್ರೈಂ ಪೊಲೀಸರಿಗೆ ದೂರು

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Oct 26, 2026 8:35 PM

ವಿಜಯ್ ದೇವರಕೊಂಡ (Vijay Devarkonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಹಾಗೂ ದಾರಿತಪ್ಪಿಸುವ ಮಾಹಿತಿಯ ವಿರುದ್ಧ ಅವರ ತಂಡ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ.ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಳ್ಳಲಾಗುತ್ತಿರುವ ಕೆಲವು ವಿಷಯಗಳು ಕೇವಲ ಟೀಕೆಗೆ ಸೀಮಿತವಾಗಿಲ್ಲ. ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ತಂಡ ಆರೋಪಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರನ್ನು ಕೋರಿದೆ.

ತಂಡದ ಪ್ರತಿನಿಧಿಯೊಬ್ಬರು ಖುದ್ದಾಗಿ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುಳ್ಳು ಆರೋಪಗಳು, ತಿರುಚಿದ ಸ್ಕ್ರೀನ್‌ಶಾಟ್‌ಗಳು, ಉದ್ದೇಶಪೂರ್ವಕವಾಗಿ ಕಿರುಕುಳ ನೀಡುವಂತಹ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನಿಖೆಗೆ ಸಹಾಯವಾಗುವಂತೆ ಸಂಬಂಧಿತ ಲಿಂಕ್‌ಗಳು ಮತ್ತು ದಾಖಲೆಗಳನ್ನೂ ತಂಡ ಒದಗಿಸಿದೆ.

ಇತ್ತೀಚೆಗೆ ಜನಪ್ರಿಯ ಸೆಲೆಬ್ರಿಟಿ ಟಾಕ್ ಶೋವೊಂದರಲ್ಲಿ ಈ ಜೋಡಿ ಕಾಣಿಸಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಈ ದೂರು ಸಲ್ಲಿಸಲಾಗಿದೆ.

ಇದನ್ನೂ ಓದಿ: Bigg Boss Kannada 13: ಸಿಂಪತಿ ಕಾರ್ಡ್ ವರ್ಕೌಟ್‌ ಆಗ್ತಾ ಇಲ್ವಾ? ಕುಮಾರಿ ಅಣಕಿಸಿದ ಸೌಂದರ್ಯ!

ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಟೀಕೆ ಮಾಡುವ ಹಕ್ಕನ್ನು ಗೌರವಿಸುವುದಾಗಿ ತಂಡ ಹೇಳಿದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪರಿಶೀಲಿಸದ ಅಥವಾ ತಿರುಚಿದ ಮಾಹಿತಿಯನ್ನು ಸತ್ಯವೆಂದು ಬಿಂಬಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.

ತಂಡದ ಹೇಳಿಕೆಯಲ್ಲಿ, “ಅಭಿವ್ಯಕ್ತಿ ಸ್ವಾತಂತ್ರ್ಯ, ವೈಯಕ್ತಿಕ ಅಭಿಪ್ರಾಯಗಳು ಮತ್ತು ಟೀಕೆ ಮಾಡುವ ಹಕ್ಕನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ. ಆದರೆ, ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಸುಳ್ಳು, ತಿರುಚಿದ ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ಸತ್ಯವೆಂದು ಬಿಂಬಿಸುವುದಕ್ಕೂ ಸ್ಪಷ್ಟವಾದ ವ್ಯತ್ಯಾಸವಿದೆ” ಎಂದು ತಿಳಿಸಲಾಗಿದೆ.

ಟೀಕೆ ಮಾಡಿದವರಿಗೆ ರಶ್ಮಿಕಾ ತಿರುಗೇಟು

ಇದೇ ದಿನ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆಗಿನ ಸಂದರ್ಶನದ ಬಗ್ಗೆ ವ್ಯಕ್ತವಾಗಿದ್ದ ಟೀಕೆಗಳಿಗೆ ಎಂಟು ಪುಟಗಳ ಹೇಳಿಕೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮದುವೆಗೆ ಮುನ್ನ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ವಿಜಯ್ ಸಮಯ ತೆಗೆದುಕೊಂಡ ನಿರ್ಧಾರದ ಹಿಂದಿನ ಕಾರಣವನ್ನೂ ಅವರು ವಿವರಿಸಿದ್ದಾರೆ.

ವಿಜಯ್ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ರಶ್ಮಿಕಾ, “ನನ್ನ ಸಂಗಾತಿಯ ಬಗ್ಗೆ ನನಗೆ ಅಪಾರ ಪ್ರೀತಿ ಇದೆ. ಅದರಲ್ಲಿ ತಪ್ಪೇನಿದೆ?” ಎಂಬ ಅರ್ಥ ಬರುವಂತೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ಮನೆಯಿಂದ ಲಕ್ಷ್ಮೀ ಗೌಡ ಎಲಿಮಿನೇಟ್‌!

ಕಷ್ಟದ ಸಮಯದಲ್ಲಿ ವಿಜಯ್ ತಮ್ಮ ಬೆಂಬಲಕ್ಕೆ ನಿಂತಿದ್ದನ್ನೂ ಅವರು ಸ್ಮರಿಸಿದ್ದಾರೆ. ಅಲ್ಲದೆ, ತಮ್ಮ ಕುಟುಂಬದವರನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿರುವವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವರ್ತನೆಯನ್ನು ಸ್ತ್ರೀವಾದದ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ ಎಂದು ಅವರು ಟೀಕಿಸಿದ್ದಾರೆ.