ಪತ್ನಿ ಸಂಗೀತಾಗೆ 250 ಕೋಟಿ ರೂ. ಜೀವನಾಂಶ ಕೊಟ್ಟು ಸೆಟ್ಲ್‌ಮೆಂಟ್ ಮಾಡ್ಕೊಳ್ಳೋಕೆ ರೆಡಿಯಾದ್ರಾ ʻದಳಪತಿʼ ವಿಜಯ್? ಏನಿದು ಹೊಸ ವಿಷ್ಯ?
ತಮಿಳು ನಟ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದು ಗೊತ್ತೇ ಇದೆ. ಸದ್ಯ ಸಂಗೀತಾಗೆ ಸಿಗುವ ಜೀವನಾಂಶದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ವಿಜಯ್ ಅವರು ಪತ್ನಿಗೆ 250 ಕೋಟಿ ರೂ. ಜೀವನಾಂಶ ನೀಡಿ, ಕೋರ್ಟ್‌ನ ಆಚೆಗೆ ಈ ಕೇಸ್ ಅನ್ನು ಇತ್ಯರ್ಥ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರಂತೆ.
-
ಸಿನಿಮಾಗಳಲ್ಲಿ ಸಕ್ರಿಯವಾಗಿದ್ದ ನಟ ವಿಜಯ್ ರಾಜಕೀಯಕ್ಕೆ ಕಾಲಿಟ್ಟು ಮತ್ತಷ್ಟು ಬ್ಯುಸಿಯಾಗಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಪಕ್ಷದ ಮುಖೇನ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣಾ ಕಣದಲ್ಲಿ ತಮ್ಮ ಆರ್ಭಟ ತೋರಿಸಲಿದ್ದಾರೆ. ಆದರೆ ಈ ಮಧ್ಯೆ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದು ದೊಡ್ಡ ಚರ್ಚೆಯ ವಿಷಯವಾಗಿದೆ.
ಈಗಾಗಲೇ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಕೆ ಆಗಿದ್ದು, ವಿಜಯ್ ಜೊತೆ ದಾಂಪತ್ಯ ಜೀವನ ಮುಂದುವರಿಸಲು ಸಾಧ್ಯವಿಲ್ಲ ಎಂದು ಸಂಗೀತಾ ಅರ್ಜಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಈ ನಡುವೆ ಮತ್ತೊಂದು ಸುದ್ದಿ ಕೇಳಿಬಂದಿದ್ದು, ಪತ್ನಿಗೆ ಜೀವನಾಂಶ ನೀಡಿ, ಈ ಕೇಸ್ ಅನ್ನು ಇತ್ಯರ್ಥಗೊಳಿಸಲು ವಿಜಯ್ ಮುಂದಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಲಂಡನ್ ಮೂಲದ ಸಂಗೀತಾ ಜೊತೆಗೆ ನಟ ವಿಜಯ್ ಮದುವೆ ಫಿಕ್ಸ್ ಆಗಿದ್ದೇಗೆ? ಅಸಲಿ ವಿಚಾರವನ್ನ ಬಾಯಿಬಿಟ್ಟಿದ್ದ ʻದಳಪತಿʼ
ಆಸ್ತಿಯಲ್ಲಿ ಶೇ. 50 ರಷ್ಟು ಪಾಲು ಕೇಳಿದ್ರಾ ಸಂಗೀತಾ?
ವಿಚ್ಛೇದನದ ಭಾಗವಾಗಿ ತಮ್ಮ ಕುಟುಂಬದ ನಿರ್ವಹಣೆಗಾಗಿ ವಿಜಯ್ ಅವರ ಆಸ್ತಿಯಲ್ಲಿ ಶೇ. 50 ರಷ್ಟು ಪಾಲನ್ನು ನೀಡಬೇಕೆಂದು ಸಂಗೀತಾ ನ್ಯಾಯಾಲಯವನ್ನು ಕೋರಿದ್ದಾರೆ ಎನ್ನಲಾಗಿದೆ. ಸದ್ಯ ವಿಜಯ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 600 ಕೋಟಿ ರೂ.ಗಳೂ ಇರಬಹುದು ಎಂಬ ಮಾಹಿತಿ ಇದೆ. ಒಂದು ವೇಳೆ ನ್ಯಾಯಾಲಯದ ತೀರ್ಪು ಸಂಗೀತಾ ಅವರ ಪರವಾಗಿ ಬಂದರೆ, ವಿಜಯ್ ತಮ್ಮ ಆಸ್ತಿಯಲ್ಲಿ ಅರ್ಧದಷ್ಟು ಅಂದರೆ ಸುಮಾರು 300 ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿಯನ್ನು ನೀಡಬೇಕಾಗುತ್ತದೆ ಎನ್ನಲಾಗುತ್ತಿದೆ.
ವಿಜಯ್ ಆಲೋಚನೆಯೇ ಬೇರೆ!
ಈ ಮಧ್ಯೆ ವಿಚ್ಛೇದನ ಪ್ರಕರಣದಿಂದ ಆದಷ್ಟು ಬೇಗ ಹೊರಬರಲು ತೀರ್ಮಾನಿಸಿರುವ ವಿಜಯ್, ಜೀವನಾಂಶವಾಗಿ ಪತ್ನಿ ಸಂಗೀತ ಅವರಿಗೆ ಸುಮಾರು 250 ಕೋಟಿ ರೂ. ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣೆ ಹತ್ತಿರವಿರುವ ಸಮಯದಲ್ಲಿ ಈ ವಿಚ್ಛೇದನ ವಿಷಯ ದೊಡ್ಡ ರಾದ್ಧಾಂತವಾಗಬಾರದು ಎಂಬ ಉದ್ದೇಶದಿಂದ ಸಂಗೀತ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅವರು ಈ ಮೊತ್ತವನ್ನು ಆಫರ್ ಮಾಡಿದ್ದಾರೆ ಎಂಬುದು ಸದ್ಯದ ಟ್ರೆಂಡಿಂಗ್ ಟಾಪಿಕ್.
ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಒಟ್ಟಾರೆಯಾಗಿ, ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ನಟ ವಿಜಯ್ ಅವರ ವೈಯಕ್ತಿಕ ಜೀವನದ ಈ ಬೆಳವಣಿಗೆಗಳು ಈಗ ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲವನ್ನಂತೂ ಕೆರಳಿಸಿರುವುದು ಸತ್ಯ.