ಲಂಡನ್ ಮೂಲದ ಸಂಗೀತಾ ಜೊತೆಗೆ ನಟ ವಿಜಯ್ ಮದುವೆ ಫಿಕ್ಸ್ ಆಗಿದ್ದೇಗೆ? ಅಸಲಿ ವಿಚಾರವನ್ನ ಬಾಯಿಬಿಟ್ಟಿದ್ದ ʻದಳಪತಿʼ
Vijay-Sangeetha Marriage Story: ದಳಪತಿ ವಿಜಯ್ ಮತ್ತು ಸಂಗೀತಾ ಅವರ ಮದುವೆಯನ್ನು ವಿಜಯ್ ತಂದೆ ಎಸ್. ಎ. ಚಂದ್ರಶೇಖರ್ ಅವರೇ ನಿಶ್ಚಯಿಸಿದ್ದರು. ಸಂಗೀತಾ ಅವರ ಓದು ಮತ್ತು ಸಂಸ್ಕಾರ ಮೆಚ್ಚಿದ್ದ ವಿಜಯ್ ಪೋಷಕರು, ಮಗನನ್ನು ಲಂಡನ್‌ಗೆ ಕಳುಹಿಸಿ ಮದುವೆಗೆ ಒಪ್ಪಿಸಿದ್ದರು. ಈ ಬಗ್ಗೆ ವಿಜಯ್ ಹಲವು ವರ್ಷಗಳ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
-
ತಮಿಳು ನಟ ದಳಪತಿ ವಿಜಯ್ ಅವರು ಸದ್ಯ ದಾಂಪತ್ಯದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಒಂದು ಕಡೆ ರಾಜಕೀಯ ಎಂಟ್ರಿ ಕೊಟ್ಟಿರುವ ಅವರು, ಮುಂಬರುವ ತಮಿಳುನಾಡು ವಿಧಾನ ಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಮಧ್ಯೆ ಅವರ ಕೊನೆಯ ಸಿನಿಮಾ ಜನ ನಾಯಗನ್‌ಗೆ ಹಲವು ತೊಡಕುಗಳು ಎದುರಾಗಿವೆ. ಇದೆಲ್ಲದರ ಮಧ್ಯೆ ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ದೊಡ್ಡ ಶಾಕ್ ನೀಡಿದೆ. ಅಷ್ಟಕ್ಕೂ ವಿಜಯ ಮತ್ತು ಸಂಗೀತಾ ಮದುವೆ ಆಗಿದ್ದು ಹೇಗೆ? ಇದು ಲವ್ ಮ್ಯಾರೇಜಾ ಅಥವಾ ಅರೆಂಜ್ ಮ್ಯಾರೇಜಾ? ಇಲ್ಲಿದೆ ಮಾಹಿತಿ.
ಸಂದರ್ಶನದಲ್ಲಿ ಮಾತನಾಡಿದ್ದ ವಿಜಯ್
ಹಲವು ವರ್ಷಗಳ ಹಿಂದೆ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ನಟ ವಿಜಯ್, ಸಂಗೀತಾ ಅವರನ್ನು ಮದುವೆ ಆಗಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಸಂಪೂರ್ಣವಾಗಿ ಅರೆಂಜ್ ಮ್ಯಾರೇಜ್ ಆಗಿದ್ದು, ವಿಜಯ್ ತಂದೆ ಚಂದ್ರಶೇಖರ್ ಅವರೇ ಸಂಗೀತಾ ಅವರನ್ನು ಮದುವೆ ಆಗುವಂತೆ ಸೂಚಿಸಿದ್ದರಂತೆ. "ಒಮ್ಮ ನಮ್ಮ ತಂದೆ ನನ್ನ ಬಳಿ ಬಂದು, ಸಂಗೀತಾ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಕೇಳಿದರು. ಅದಕ್ಕೆ ನಾನು, ಒಳ್ಳೆಯ ಹುಡುಗಿ ಎಂದು ಹೇಳಿದೆ. ನಂತರ, ಅವರ ಫ್ಯಾಮಿಲಿ ಬಗ್ಗೆ ಎಂದು ಪ್ರಶ್ನೆ ಬಂತು. ಆಗಲೂ ನಾನು, ʻಒಳ್ಳೆಯ ಕುಟುಂಬ, ಸಂಗೀತಾ ಕೂಡ ಒಳ್ಳೆಯ ಹುಡುಗಿ, ಚೆನ್ನಾಗಿ ಓದಿಕೊಂಡಿದ್ದಾಳೆʼ ಎಂದು ಹೇಳಿದೆ" ಅಂತ ವಿಜಯ್ ಹೇಳಿದ್ದರು.
Vijay wife Sangeetha: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ-ರಾಜಕಾರಣಿ ವಿಜಯ್ ದಳಪತಿ ಪತ್ನಿ ಸಂಗೀತಾ
ನೀನು ಅವಳನ್ನು ಮದುವೆ ಆಗುವೆಯಾ?
"ನನ್ನ ತಂದೆಗೆ, ಏನಕ್ಕೆ ಇದನ್ನೆಲ್ಲಾ ಕೇಳುತ್ತಿದ್ದೀರಿ ಎಂದು ನಾನು ಪ್ರಶ್ನಿಸಿದೆ. ಆಗ ಅವರು, ʻಅವಳನ್ನು ಮದುವೆ ಆಗುತ್ತೀಯಾʼ ಎಂದು ಕೇಳಿದರು. ನಾನು ಇದನ್ನು ನಿರೀಕ್ಷೆಯೇ ಮಾಡಿರಲಿಲ್ಲ. ನಿಜಕ್ಕೂ ನಾನು ಶಾಕ್ ಆಗಿಬಿಟ್ಟೆ. ಏನಪ್ಪಾ, ಹೀಗೆ ಕೇಳ್ತಿದ್ದೀರಿ ಅಂದೆ. ಅದಕ್ಕೆ ಅವರು, ʻಇಲ್ಲಪ್ಪ, ನಂಗೂ ನಿಮ್ಮಮ್ಮಂಗೂ ಸಂಗೀತಾ ಇಷ್ಟವಾಗಿದ್ದಾಳೆ. ನೀನು ಒಮ್ಮೆ ಲಂಡನ್‌ಗೆ ಹೋಗಿ ಮೀಟ್ ಮಾಡಿಕೊಂಡು ಬಾʼ ಎಂದರು. ಅಲ್ಲಿಗೆ ಹೋದಮೇಲೆ ಸಂಗೀತಾ ಜೊತೆ ಮದುವೆ ನಿಶ್ಚಯ ಮಾಡೋಣ್ವ ಅಂತ ಅಪ್ಪ ಕೇಳಿದರು. ಆಗಲೂ ನಾನು ʻನಿಮ್ಮಿಷ್ಟ ಅಪ್ಪʼ ಅಂತ ಹೇಳಿದ್ದೆ" ಎಂದು ವಿಜಯ್ ಹೇಳಿಕೊಂಡಿದ್ದರು.
ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!
"ಲಂಡನ್‌ಗೆ ಹೋದಮೇಲೆ ಅವರ ಕುಟುಂಬದ ಜೊತೆ ಮಾತನಾಡಿ, ನನ್ನ ಕುಟುಂಬ ಮತ್ತು ಅವರ ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥವಾಯಿತು. ನೀನು ಸಂಗೀತಾಳನ್ನು ಮದುವೆ ಆಗುತ್ತದ್ದೀಯಾ ಎಂದು ತೀರ್ಮಾನವಾದ ದಿನದಿಂದ ಇಲ್ಲಿವರೆಗೂ ನಾನು ಅವಳನ್ನೇ ಪ್ರೀತಿಸುತ್ತಿದ್ದೇನೆ. ಆ ಫೀಲಿಂಗ್ ತುಂಬಾ ಚೆನ್ನಾಗಿದೆ. ಪ್ರೀತಿ ಎಂಬುದು ಎಲ್ಲರ ಬದುಕಿನಲ್ಲೂ ಬರುತ್ತದೆ. ನನಗೆ ರಿಯಲ್ ಲೈಫ್‌ನಲ್ಲಿ ಈಗ ಬಂದಿದೆ" ಎಂದು ವಿಜಯ್ ಹೇಳಿದ್ದರು.
ವಿಜಯ್ ಹಳೆಯ ಸಂದರ್ಶನದ ವಿಡಿಯೋ
I got Sangeetha married because of my father - TVK leader Vijay pic.twitter.com/KnOOCO89vk
— ராஜேஷ் (@r4jjesh) March 4, 2026
ಅಂದಹಾಗೆ, ವಿಜಯ್ ಮತ್ತು ಸಂಗೀತಾ ಅವರ ವಿವಾಹ 1999ರ ಆಗಸ್ಟ್ 25 ರಂದು ನಡೆದಿತ್ತು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ಧೂರಿಯಾಗಿ ನೆರವೇರಿತ್ತು. ಆದರೆ ಇದೀಗ 27 ವರ್ಷಗಳ ನಂತರ ಪತಿಯಿಂದ ವಿಚ್ಛೇದನ ಪಡೆಯಲು ಸಂಗೀತ ನಿರ್ಧರಿಸಿದ್ದಾರೆ. ಅಂದಹಾಗೆ, ಲಂಡನ್‌ನಲ್ಲಿ ವಾಸಿ ಶ್ರೀಲಂಕಾದ ತಮಿಳು ಕೈಗಾರಿಕೋದ್ಯಮಿ ಸೊರ್ನಲಿಂಗಂ ಅವರ ಪುತ್ರಿಯಾಗಿರುವ ಸಂಗೀತಾ ಮದುವೆಯಾದ ಮೇಲೆ ಚೆನ್ನೈಗೆ ಬಂದಿದ್ದರು. ಸದ್ಯ ವಿಜಯ್ ಅವರಿಂದ ದೂರ ಇರುವ ಸಂಗೀತಾ ಅವರು, ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.