ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ramayana trailer: ʼರಾಮಾಯಣʼ ಟ್ರೇಲರ್ ನೋಡಿ ಅಟ್ಲೀ ಫಿದಾ! ಯಶ್‌ ಬಗ್ಗೆ ಏನಂದ್ರು?

Ramayana trailer: ನಿರ್ದೇಶಕ ಅಟ್ಲೀ ಟ್ರೈಲರ್‌ ಅನ್ನು ಆಗಲೇ ವೀಕ್ಷಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಾಮಾಯಣ: ಭಾಗ 1 ದೀಪಾವಳಿ ಹಬ್ಬದಂದು ನವೆಂಬರ್ 8, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ (theatre) ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಸುಮಾರು ₹4,000 ಕೋಟಿ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದೆ.

ʼರಾಮಾಯಣʼ ಟ್ರೇಲರ್ ನೋಡಿ ಅಟ್ಲೀ  ಫಿದಾ! ಯಶ್‌ ಬಗ್ಗೆ ಏನಂದ್ರು?

ಯಶ್‌ ರಾಮಾಯಣ -

Yashaswi Devadiga
Yashaswi Devadiga Jul 20, 2026 8:18 PM

ಜುಲೈ 24 ರಂದು ರಣಬೀರ್ ಕಪೂರ್ (ranbir Kapoor) ನಟನೆಯ ರಾಮಾಯಣ ಟ್ರೇಲರ್ (ramayana trailer) ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ನಿರ್ದೇಶಕ ಅಟ್ಲೀ ಟ್ರೈಲರ್‌ ಅನ್ನು ಆಗಲೇ ವೀಕ್ಷಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಾಮಾಯಣ: ಭಾಗ 1 ದೀಪಾವಳಿ ಹಬ್ಬದಂದು ನವೆಂಬರ್ 8, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ (theatre) ಬಿಡುಗಡೆಯಾಗಲಿದೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ.

ಅಟ್ಲೀ ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಟ್ಲೀ, ಟ್ರೇಲರ್ ಬಗ್ಗೆ ತಮ್ಮ ವಿಮರ್ಶೆಯನ್ನು ಹಂಚಿಕೊಂಡರು. ರಾಮಾಯಣ ಟ್ರೇಲರ್ ನೋಡಿ ನಿಜಕ್ಕೂ ಬೆರಗಾದೆ. ನಮಿತ್‌ ಸರ್ ಅವರ ಈ ಅದ್ಭುತ ದೃಶ್ಯ ಮತ್ತು ನಿತೇಶ್‌ ತಿವಾರಿ ಸರ್ ಅವರ ಅದ್ಭುತ ಕರಕುಶಲತೆ. ಯಶ್ ಬ್ರೋ ನಂಬಲಾಗದಷ್ಟು ಅದ್ಭುತವಾಗಿ ಕಾಣುತ್ತಾರೆ, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಕೂಡ. ಪ್ರತಿ ಫ್ರೇಮ್ ಭವ್ಯ, ತಾಜಾ ಮತ್ತು ಮಾಂತ್ರಿಕವಾಗಿ ಭಾಸವಾಗುತ್ತದೆ. ಇಡೀ ತಂಡದ ಬ್ಲಾಕ್‌ಬಸ್ಟರ್‌ಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ; Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌; ಭೂಮಿ ಒಡಲ ಗುಟ್ಟು ಗೌತಮ್ ಎದುರು ಬಯಲು

ಶನಿವಾರ ನವದೆಹಲಿಯ ಭಾರತ್ ಮಂಟಪದಲ್ಲಿ ನಿರ್ಮಾಪಕರು ಪ್ರಥಮ್ ಸಂಕಲ್ಪ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ರಣಬೀರ್ ಕಪೂರ್; ರಾವಣನ ಪಾತ್ರದಲ್ಲಿ ನಟಿಸಿರುವ ಯಶ್; ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ; ಹನುಮನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್; ಮತ್ತು ಲಕ್ಷ್ಮಣನ ಪಾತ್ರದಲ್ಲಿ ನಟಿಸಿರುವ ರವಿ ದುಬೆ ಸೇರಿದಂತೆ ಚಿತ್ರದ ಹಲವಾರು ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಅಜಿಂಕ್ಯ ಡಿಯೋ, ಅರುಣ್ ಗೋವಿಲ್ ಮತ್ತು ಕುನಾಲ್ ಕಪೂರ್ ಸೇರಿದಂತೆ ಇತರ ನಟರು ಉಪಸ್ಥಿತರಿದ್ದರು.



ಸುಮಾರು ₹4,000 ಕೋಟಿ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ, ರಣಬೀರ್ ಕಪೂರ್ ಶ್ರೀರಾಮನಾಗಿ, ನಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ.

ಇದನ್ನೂ ಓದಿ: Arjun Kapoor: ಅರ್ಜುನ್ ಕಪೂರ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ಸಾಹಿಬಾ ಬಾಲಿ

ಇನ್ನು, ಬಾಲಿವುಡ್‌ನ ಆ್ಯಕ್ಷನ್ ಸ್ಟಾರ್ ಸನ್ನಿ ಡಿಯೋಲ್ ಹನುಮನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ ಹಿರಿಯ ನಟ ಅರುಣ್ ಗೋವಿಲ್ ದಶರಥ ನಿರ್ವಹಿಸುತ್ತಿದ್ದಾರೆ. ಜೊತೆಗೆ, ಕೈಕೇಯಿಯಾಗಿ ಲಾರಾ ದತ್ತಾ, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಮತ್ತು ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.