ಈ ವಾರದ ಕಿರುತೆರೆ TRP ಲೆಕ್ಕಾಚಾರ ಉಲ್ಟಾ ಪಲ್ಟಾ; ಅಬ್ಬರಿಸಿದ ʻಕಲರ್ಸ್ ಕನ್ನಡʼ ಧಾರಾವಾಹಿಗಳು
ಕನ್ನಡ ಕಿರುತೆರೆಯ ಟಿಆರ್‌ಪಿ ರೇಟಿಂಗ್ ಪಟ್ಟಿಯಲ್ಲಿ ಇಷ್ಟು ದಿನ ಏಕಸ್ವಾಮ್ಯ ಹೊಂದಿದ್ದ ಜೀ ಕನ್ನಡ ವಾಹಿನಿಗೆ ಈಗ ಕಲರ್ಸ್ ಕನ್ನಡದಿಂದ ಅನಿರೀಕ್ಷಿತ ಆಘಾತ ಎದುರಾಗಿದೆ. ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯು 6.6 ರೇಟಿಂಗ್‌ನೊಂದಿಗೆ ಇಡೀ ಪ್ರಥಮ ಸ್ಥಾನ ಉಳಿಸಿಕೊಂಡಿದ್ದರೂ, ಕಲರ್ಸ್ ಕನ್ನಡದ 'ನಂದಗೋಕುಲ', 'ಶ್ರೀಗಂಧದ ಗುಡಿ' ಸೇರಿದಂತೆ 5 ಪ್ರಮುಖ ಧಾರಾವಾಹಿಗಳು ಭರ್ಜರಿ ರೇಟಿಂಗ್ ಪಡೆದುಕೊಂಡು, ತೀವ್ರ ಪೈಪೋಟಿ ನೀಡಿವೆ.
-
ಕನ್ನಡ ಕಿರುತೆರೆಯ ಟಿಆರ್‌ಪಿ (TRP) ರೇಟಿಂಗ್ ಪಟ್ಟಿಯಲ್ಲಿ ಇಷ್ಟು ದಿನ ಏಕಸ್ವಾಮ್ಯ ಹೊಂದಿದ್ದ ಜೀ ಕನ್ನಡ ವಾಹಿನಿಗೆ ಈಗ ಅನಿರೀಕ್ಷಿತ ಆಘಾತ ಎದುರಾಗಿದೆ. ಈ ವಾರ ಟಿಆರ್‌ಪಿ ಚಿತ್ರಣವೇ ಸಂಪೂರ್ಣವಾಗಿ ಉಲ್ಟಾ ಪಲ್ಟಾ ಆಗಿದೆ! ಯಾವಾಗಲೂ ಟಾಪ್ 5 ಸ್ಥಾನಗಳು ಜೀ ಕನ್ನಡದ ಧಾರಾವಾಹಿಗಳಿಗೆ ಮೀಸಲಾಗಿರುತ್ತಿತ್ತು. ಆದರೆ, ಈಗ ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್‌ಗಳು ತೀವ್ರ ಪೈಪೋಟಿ ನೀಡುತ್ತಿವೆ. ಯಾವ ಮಟ್ಟಿಗೆಂದರೆ, ಮೊದಲ ಟಾಪ್ 4ರಲ್ಲಿ ಕಲರ್ಸ್ ಕನ್ನಡ ವಾಹಿನಿಯ 5 ಧಾರಾವಾಹಿಗಳು ಆಕ್ರಮಿಸಿಕೊಂಡಿವೆ. ಅದು ಹೇಗೆ? ಇಲ್ಲಿದೆ ನೋಡಿ ಈ ವಾರದ ಟಿಆರ್‌ಪಿ ಸಂಪೂರ್ಣ ಮಾಹಿತಿ.
ಕನ್ನಡದ ಟಾಪ್ ವಾಹಿನಿಗಳು ಮತ್ತು ರಿಯಾಲಿಟಿ ಶೋಗಳು
ಕರ್ನಾಟಕದ ಕಿರುತೆರೆ ಲೋಕದಲ್ಲಿ ಜೀ ಕನ್ನಡ ವಾಹಿನಿಯು 1127.17 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ 835.37 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸ್ಟಾರ್ ಸುವರ್ಣ (601.56), ಸನ್ ಉದಯ (550.1) ಮತ್ತು ಸನ್ ಉದಯ ಮೂವೀಸ್ (340.32) ಕ್ರಮವಾಗಿ ಮುಂದಿನ ಸ್ಥಾನಗಳನ್ನು ಹಂಚಿಕೊಂಡಿವೆ. ಇನ್ನು ರಿಯಾಲಿಟಿ ಶೋಗಳ ವಿಭಾಗದಲ್ಲಿ ಜೀ ಕನ್ನಡದ ಜನಪ್ರಿಯ 'ಸರಿಗಮಪ' 6.9 ರೇಟಿಂಗ್ ಪಡೆಯುವ ಮೂಲಕ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದೆ. ಇದರೊಂದಿಗೆ 'ಜೋಡಿ ನಂ 1' ಶೋ ಶನಿವಾರ 5.5 ಹಾಗೂ ಭಾನುವಾರ 5.0 ರೇಟಿಂಗ್ ಗಳಿಸಿದ್ದರೆ, 'ಕ್ವಾಟ್ಲೆ ಕಿಚನ್' ರಿಯಾಲಿಟಿ ಶೋ 4.2 ರೇಟಿಂಗ್ ಪಡೆದುಕೊಂಡಿದೆ.
ವಾಹಿನಿಗಳ ಧಾರಾವಾಹಿಗಳ ಟಿವಿಆರ್
ಜೀ ಕನ್ನಡ ವಾಹಿನಿ: ಈ ವಾಹಿನಿಯಲ್ಲಿ ಸದ್ಯ 'ಅಣ್ಣಯ್ಯ' ಧಾರಾವಾಹಿಯು 6.6 ರೇಟಿಂಗ್‌ನೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಉಳಿದಂತೆ 'ಲಕ್ಷ್ಮೀ ನಿವಾಸ' (6.0), 'ಕೃಷ್ಣ ರುಕ್ಕು' (5.9), 'ಕರ್ಣ' (5.8) ಮತ್ತು 'ಆದಿಲಕ್ಷ್ಮಿ ಪುರಾಣ' (5.3) ಧಾರಾವಾಹಿಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಇವುಗಳ ನಂತರದ ಸ್ಥಾನದಲ್ಲಿ 'ನಾ ನಿನ್ನ ಬಿಡಲಾರೆ' (4.8), 'ಬ್ರಹ್ಮಗಂಟು' (4.3), 'ಶ್ರೀ ರಾಘವೇಂದ್ರ ಮಹಾತ್ಮೆ' (2.0) ಹಾಗೂ 'ಶ್ರಾವಣಿ ಸುಬ್ರಹ್ಮಣ್ಯ' (1.6) ಧಾರಾವಾಹಿಗಳಿವೆ.
ಕಲರ್ಸ್ ಕನ್ನಡದಲ್ಲಿ ದೊಡ್ಮನೆ ಹಬ್ಬದ ಮೆರುಗು; ಭರ್ಜರಿ ಮನರಂಜನೆ ನೀಡಲು ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳು ರೆಡಿ
ಇನ್ನು, ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳ ಪೈಕಿ 'ನಂದಗೋಕುಲ' 6.4 ರೇಟಿಂಗ್‌ನೊಂದಿಗೆ ಮುಂಚೂಣಿಯಲ್ಲಿದೆ. ಇದರ ನಂತರ 'ಶ್ರೀ ಗಂಧದ ಗುಡಿ' 6.2 ರೇಟಿಂಗ್ ಪಡೆದಿದೆ. 'ಮುದ್ದು ಸೊಸೆ', 'ಪವಿತ್ರ ಬಂಧನ' ಮತ್ತು 'ಗೌರಿ ಕಲ್ಯಾಣ' ಮೂರೂ ಧಾರಾವಾಹಿಗಳು ತಲಾ 6.1 ರೇಟಿಂಗ್‌ನೊಂದಿಗೆ ಭರ್ಜರಿ ಪೈಪೋಟಿ ನೀಡುತ್ತಿವೆ. ಇನ್ನುಳಿದಂತೆ 'ಭಾರ್ಗವಿ ಎಲ್‌ಎಲ್‌ಬಿ' (4.2), 'ಅಗ್ನಿಸಾಕ್ಷಿ' (3.3), 'ಪ್ರೇಮಕಾವ್ಯ' (2.3) ಮತ್ತು 'ರಾಣಿ' (1.9) ರೇಟಿಂಗ್ ಪಡೆದುಕೊಂಡಿವೆ.
ಅರ್ಬನ್ ಮಾರ್ಕೆಟ್‌ನ ಟಾಪ್ 3 ಸೀರಿಯಲ್
ಇಡೀ ಕರ್ನಾಟಕದ ಅರ್ಬನ್ (ನಗರ) ಮತ್ತು ಅರ್ಬನ್+ರೂರಲ್ (ನಗರ ಮತ್ತು ಗ್ರಾಮೀಣ) ಎರಡೂ ಮಾರುಕಟ್ಟೆಗಳನ್ನು ಒಟ್ಟಾಗಿ ನೋಡಿದಾಗ, ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯು ಕ್ರಮವಾಗಿ 6.7 ಮತ್ತು 6.6 ರೇಟಿಂಗ್ ಪಡೆದು ಕರ್ನಾಟಕದ ನಂ. 1 ಧಾರಾವಾಹಿಯಾಗಿ ಹೊರಹೊಮ್ಮಿದೆ. ಕೇವಲ ಅರ್ಬನ್ (ನಗರ) ಮಾರುಕಟ್ಟೆಯ ಟಾಪ್ 3 ಧಾರಾವಾಹಿಗಳನ್ನು ಗಮನಿಸಿದರೆ, 'ಅಣ್ಣಯ್ಯ' (6.7) ಮೊದಲ ಸ್ಥಾನದಲ್ಲಿದ್ದರೆ, 'ಅಮೃತಧಾರೆ' (6.5) ಎರಡನೇ ಸ್ಥಾನ ಹಾಗೂ 'ಲಕ್ಷ್ಮೀ ನಿವಾಸ' (6.3) ಮೂರನೇ ಸ್ಥಾನದಲ್ಲಿವೆ.
ಕಲರ್ಸ್ ಕನ್ನಡ ಧಾರಾವಾಹಿಗಳ ಅಬ್ಬರ
ಅದೇ ರೀತಿ, ಅರ್ಬನ್+ರೂರಲ್ ಮಾರುಕಟ್ಟೆಯ ಟಾಪ್ 4 ರೇಟಿಂಗ್‌ನಲ್ಲಿ 'ಅಣ್ಣಯ್ಯ' (6.6) ಮೊದಲ ಸ್ಥಾನದಲ್ಲಿದ್ದರೆ, ಕಲರ್ಸ್ ಕನ್ನಡದ 'ನಂದಗೋಕುಲ' (6.4) ಎರಡನೇ ಸ್ಥಾನದಲ್ಲಿದೆ ಹಾಗೂ 'ಶ್ರೀಗಂಧದ ಗುಡಿ' (6.2) ಮೂರನೇ ಸ್ಥಾನದಲ್ಲಿದೆ. ಅದೇ ರೀತಿ ಕಲರ್ಸ್ ಕನ್ನಡದ ಮೂರು ಪ್ರಮುಖ ಧಾರಾವಾಹಿಗಳಾದ 'ಮುದ್ದು ಸೊಸೆ', 'ಪವಿತ್ರ ಬಂಧನ' ಮತ್ತು 'ಗೌರಿ ಕಲ್ಯಾಣ' (ತಲಾ 6.1 ರೇಟಿಂಗ್) ಸಮನಾಗಿ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿವೆ.