ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ತೆರೆಮೇಲೆ ಮತ್ತೊಮ್ಮೆ ದೈವ ದರ್ಶನ ಮಾಡಿಸಿದ ರಿಷಬ್‌ ಶೆಟ್ಟಿ; ʼಕಾಂತಾರ: ಚಾಪ್ಟರ್‌ 1' ನೋಡಿದವರು ಏನಂದ್ರು?

Rishab Shetty: ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಪ್ಯಾನ್‌ ಇಂಡಿಯಾ ಚಿತ್ರ ʼಕಾಂತಾರ: ಚಾಪ್ಟರ್‌ 1' ತೆರೆಕಂಡಿದೆ. ಕಾಂತಾರದ ಹೊಸದೊಂದು ಲೋಕವನ್ನು ಕಟ್ಟಿಕೊಟ್ಟ ರಿಷಬ್‌ ಶೆಟ್ಟಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಚಿತ್ರ ನೋಡಿದವರೆಲ್ಲ ಪಾಸಿಟಿವ್‌ ಪ್ರತಿಕ್ರಿಯೆ ನೀಡಿದ್ದಾರೆ.

ʼಕಾಂತಾರ: ಚಾಪ್ಟರ್‌ 1' ಚಿತ್ರ ನೋಡಿದವರು ಏನಂದ್ರು?

-

Ramesh B Ramesh B Oct 2, 2025 3:02 PM

ಬೆಂಗಳೂರು: 2022ರಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಸ್ಯಾಂಡಲ್‌ವುಡ್‌ ʼಕಾಂತಾರʼದ (Kantara) ಮೂಲಕ ಹೊಸದೊಂದು ಇತಿಹಾಸ ಸೃಷ್ಟಿಸಿತ್ತು. ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದಲ್ಲಿ ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಲ್ಲದೆ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಇದರ ಯಶಸ್ಸಿನ ಬೆನ್ನಲ್ಲೇ ರಿಷಬ್‌ ಶೆಟ್ಟಿ ಚಿತ್ರದ ಪ್ರೀಕ್ವೆಲ್‌ ಘೋಷಿಸಿದ್ದರು. ಅಂದಿನಿಂದಲೇ ಭಾರಿ ನಿರೀಕ್ಷೆ ಮೂಡಿಸಿದ್ದ, ಕುತೂಹಲ ಕೆರಳಿಸಿದ್ದ ʼಕಾಂತಾರ: ಚಾಪ್ಟರ್‌ 1' 3 ವರ್ಷಗಳ ಬಳಿಕ ತೆರೆಕಂಡಿದೆ. ಕಾಂತಾರದ ಹೊಸದೊಂದು ಲೋಕವನ್ನು ಕಟ್ಟಿಕೊಟ್ಟ ರಿಷಬ್‌ ಶೆಟ್ಟಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಚಿತ್ರ ನೋಡಿದವರೆಲ್ಲ ಪಾಸಿಟಿವ್‌ ಪ್ರತಿಕ್ರಿಯೆ ನೀಡಿದ್ದಾರೆ.

'ಕಾಂತಾರʼ ಚಿತ್ರದಂತೆ ನಿರ್ದೇಶಕನಾಗಿಯೂ, ನಟನಾಗಿಯೂ ರಿಷಬ್‌ ಮತ್ತೊಮ್ಮೆ ಗೆದ್ದಿದ್ದಾರೆ. ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಹ್ಯಾಟ್ಸಾಫ್‌ ಹೇಳಿದ್ದಾರೆ. 4-5 ಶತಮಾನದ ಜನ-ಜೀವನವನ್ನು ರಿಷಬ್‌ ತೆರೆಮೇಲೆ ಮೇಲೆ ಮೂಡಿದ್ದ ಅವರ ಶ್ರಮ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ದಂತಕಥೆಯಾಗಿ ಉಳಿದಿರುವ 'ಬಾಹುಬಲಿ'ಗೆ ಇದೀಗ ಪ್ರೇಕ್ಷಕರು 'ಕಾಂತಾರ: ಚಾಪ್ಟರ್‌ 1' ಹೋಲಿಸುತ್ತಿದ್ದಾರೆ. ಆ ಮಟ್ಟಿಗೆ ಇದು ಪರಿಣಾಮಕಾರಿಯಾಗಿ ಮೂಡಿಬಂದಿದೆ.

'ಕಾಂತಾರ'ದಲ್ಲಿ ಕಥೆಗೆ ಒತ್ತು ನೀಡಿದ್ದ ರಿಷಬ್‌ ಈ ಬಾರಿ ಮೇಕಿಂಗ್‌ಗೆ ಗಮನ ಹರಿಸಿದ್ದಾರೆ. ಗ್ರಾಫಿಕ್ಸ್‌ ಕೂಡ ಹೈಲೈಟ್‌ ಆಗಿದ್ದು, ಸಹಜವಾಗಿ ಮೂಡಿಬಂದಿದೆ. ಅದರಲ್ಲಿಯೂ ಕ್ಲೈಮ್ಯಾಕ್ಸ್‌ ನೋಡಿ ಬಹುತೇಕರು ರೋಮಾಂಚನಗೊಂಡಿದ್ದು, ತೆರೆಮೇಲೆ ಮತ್ತೊಮ್ಮೆ ದೈವ ದರ್ಶನವಾಗಿದೆ.



ಈ ಸುದ್ದಿಯನ್ನೂ ಓದಿ: Rebel Song Out: ʼʼಕಾಡ ಬೆಂಕಿಯು ಊರ ನೋಡ ಬಂದಿದೆ...ʼʼ: ʼಕಾಂತಾರ: ಚಾಪ್ಟರ್‌ 1' ಚಿತ್ರದ ರೆಬೆಲ್‌ ಸಾಂಗ್‌ ಔಟ್‌

ಕಲಾವಿದರ ನಟನೆ ಹೇಗಿದೆ?

ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌ ಕಲಾವಿದರ ನಟನೆ. ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್‌ ಜತೆಗೆ ಜಯರಾಮ್‌, ಗುಲ್ಶನ್‌ ದೇವಯ್ಯ, ರಾಕೇಶ್‌ ಪೂಜಾರಿ ಮತ್ತಿತರರು ಸಹಜವಾಗಿ ನಟಿಸಿದ್ದು, ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದರಲ್ಲಿಯೂ ರಿಷಬ್‌ ಶೆಟ್ಟಿ ಅಭಿನಯಕ್ಕೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಪಕ್ಕ ಎನ್ನುವ ಮಾತು ಕೇಳಿ ಬರುತ್ತಿದೆ. ದೈವ ಆವಾಹನೆಯಾಗುವ ದೃಶ್ಯದಲ್ಲಂತೂ ಅವರ ನಟನೆ ಮತ್ತೊಂದು ಹಂತಕ್ಕೆ ತಲುಪಿದೆ. ಇನ್ನು ನಾಯಕಿಯಾಗಿ ರುಕ್ಮಿಣಿ ವಸಂತ್‌ ಚೆಲುವಿನಿಂದ ಮೋಡಿ ಮಾಡಿದ್ದಲ್ಲದೇ ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲೂ ಸಂಚಲನ

ಕನ್ನಡ ಮಾತ್ರವಲ್ಲದೆ ರಿಲೀಸ್‌ ಆದ ಎಲ್ಲ ಭಾಷೆಗಳಲ್ಲೂ ʼಕಾಂತಾರ: ಚಾಪ್ಟರ್‌ 1ʼ ಮೋಡಿ ಮಾಡಿದೆ. ತಮಿಳು, ಹಿಂದಿ, ತೆಲುಗು, ಮಲಯಾಳಂನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕರು ಮೇಕಿಂಗ್‌ ಮೆಚ್ಚಿಕೊಂಡಿದ್ದು, ಫಸ್ಟ್‌ ಹಾಫ್‌ಗಿಂತ ಸೆಕೆಂಡ್‌ ಹಾಫ್‌ಗೆ ಜೈ ಎಂದಿದ್ದಾರೆ. ಇನ್ನು ಕಥೆಗೆ ಮತ್ತಷ್ಟು ಒತ್ತು ನೀಡಬೇಕಾಗಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಹುತೇಕರು ಚಿತ್ರ ನಿರೀಕ್ಷೆಗೆ ತಕ್ಕ ಮೂಡಿ ಬಂದಿದೆ ಎಂದಿದ್ದು, ಸ್ಯಾಂಡಲ್‌ವುಡ್‌ನಿಂದ ಮತ್ತೊಂದು ಬ್ಲಾಕ್‌ ಬಸ್ಟರ್‌ ಎಂದು ಭವಿಷ್ಯ ನುಡಿದಿದ್ದಾರೆ. ಚಿತ್ರದಲ್ಲಿನ ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಮತ್ತೊಂದು ಹೈಲೈಟ್‌ ಎನಿಸಿಕೊಂಡಿದೆ.