ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karna Serial: ಅರ್ಜುನ ಎದುರು ನಿಧಿ; ಕರ್ಣನ ಮನದಲ್ಲಿ ಎನೋ ತಳಮಳ!

Karna Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ (Karna Serial Kannada) ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್​ ಮಾಡಿ ಇದಕ್ಕೆ ಒಪ್ಪಿದ್ದರು. ಆದರೆ ಈಗ ಆಗಿದ್ದೇ ಬೇರೆ.

ಅರ್ಜುನ ಎದುರು ನಿಧಿ; ಕರ್ಣನ ಮನದಲ್ಲಿ ಎನೋ ತಳಮಳ!

ಕರ್ಣ ಧಾರಾವಾಹಿ -

Yashaswi Devadiga
Yashaswi Devadiga Apr 16, 2026 8:41 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ (Karna Serial Kannada) ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ (Karna and Nidhi) ಪ್ಲ್ಯಾನ್​ ಮಾಡಿ ಇದಕ್ಕೆ ಒಪ್ಪಿದ್ದರು. ಆದರೆ ಈಗ ಆಗಿದ್ದೇ ಬೇರೆ.

ನಿಧಿ ಸೊಟ್ಟ ಮೂತಿ

ಅರ್ಜುನ ಒಬ್ಬ ಡಾಕ್ಟರ್​, ಹಾರ್ಟ್​ ಸರ್ಜನ್​. ಅರ್ಜುನ್ ಎಲ್ಲರಿಗೂ ಇಷ್ಟ ಆಗಿಬಿಟ್ಟಿದ್ದಾನೆ. ಅವನು ತನ್ನನ್ನು ಒಪ್ಪಿಕೊಳ್ಳಬಾರದು ಎಂದು ನಿಧಿ ಸೊಟ್ಟ ಮೂತಿ ಮಾಡಿ ಬಂದಿದ್ದಾಳೆ. ಆದರೂ ಅರ್ಜುನ್‌ ನಿಧಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾನೆ.

ಇದನ್ನೂ ಓದಿ: Alia Bhatt: ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಲಿಯಾ-ರಣಬೀರ್; ಕ್ಯೂಟ್‌ ಫೋಟೋಸ್‌ ವೈರಲ್‌

ನಿಧಿ ಮತ್ತು ಕರ್ಣ ಮಾತ್ರ ಈಗ ಶಾಕ್‌ ಆಗಿದ್ದಾರೆ. ತನ್ನ ಪ್ಲ್ಯಾನ್​ ಸಕ್ಸಸ್​ ಆಗಿರೋ ಖುಷಿಯಲ್ಲಿ ಇದ್ದಾನೆ ರಮೇಶ್​. ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್​ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಮುಂದೆ ಏನಾಗಲಿದೆ ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.

ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್​ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಅದಕ್ಕೆ ಅವಕಾಶ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ. ಇದಾಗಲೇ ಕರ್ಣ ರಮೇಶನ ಸ್ವಂತ ಮಗ ಎನ್ನುವುದು ನಯನತಾರಾ ಹೇಳಿದ್ದಾಳೆ.

ಆದರೆ ಅವರಿಬ್ಬರಿಗೂ ಇದು ಗೊತ್ತಿಲ್ಲ. ಇದೇ ಕಾರಣಕ್ಕೆ, ರಮೇಶ್​ ಮಗನ ಜೀವನ ಹಾಳು ಮಾಡಲು ಮುಂದಾಗಿದ್ದರೆ, ಅಪ್ಪನ ಕುತಂತ್ರಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಕರ್ಣ ಹೇಳುತ್ತಿದ್ದಾನೆ. ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದಾನೆ.

ಇದನ್ನೂ ಓದಿ: Peddi Postponed: ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ಮತ್ತೆ ʻಟಾಕ್ಸಿಕ್‌ʼ ಜೊತೆ ಕ್ಲ್ಯಾಶ್‌?

ಕರ್ಣ ತನಗೆ ಇಷ್ಟ ಇಲ್ಲದಿದ್ದರೂ ನಿತ್ಯಾಳ ಮದುವೆ ಆಗುವ ಪರಿಸ್ಥಿತಿ ಬಂತು. ನಂತರ ಆತ ಮದುವೆ ಆದ ಕೂಡ. ಆ ಬಳಿಕವೂ ರಮೇಶ್ ತೊಂದರೆ ಕೊಡೋದನ್ನು ಮುಂದುವರಿಸಿದ್ದಾರೆ. ನಿಧಿ ಕೂಡ ರಮೇಶ್ ಕೆಟ್ಟ ಬುದ್ದಿಯನ್ನು ಅರಿತುಕೊಂಡಿದ್ದಾಳೆ. ಆಕೆ ಕೂಡ ಅವನ ವಿರುದ್ಧ ತಿರುಗಿ ಬೀಳುವ ಕೆಲಸವನ್ನು ಮಾಡಿದ್ದಾಳೆ.