ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mahesh Babu: ಟಾಲಿವುಡ್ ಮಂದಿ ಖುಷಿ ಪಡೋ ಸುದ್ದಿ ನೀಡಿದ್ರು ಮಹೇಶ್‌ ಬಾಬು! ಏನದು?

Mahesh Babu: ಇತ್ತೀಚಿನ ಅಧಿಕೃತ ಪ್ರಕಟಣೆಯ ಪ್ರಕಾರ, ಐಮ್ಯಾಕ್ಸ್ ಸಂಸ್ಥೆಯು ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ಏಷ್ಯನ್ ಸಿನಿಮಾಸ್ ಜೊತೆ ಕೈಜೋಡಿಸುವ ಮೂಲಕ ಹೈದರಾಬಾದ್‌ಗೆ ಭರ್ಜರಿ ಕೊಡುಗೆ ನೀಡುತ್ತಿದೆ. ರಾಜಮೌಳಿ ಬಯಸಿದಂತೆ ನಗರದಲ್ಲಿ ಐಮ್ಯಾಕ್ಸ್ ಸ್ಕ್ರೀನ್ ಆರಂಭ ಆಗುತ್ತಿದೆ.

ಟಾಲಿವುಡ್ ಮಂದಿ ಖುಷಿ ಪಡೋ ಸುದ್ದಿ ನೀಡಿದ್ರು ಮಹೇಶ್‌ ಬಾಬು! ಏನದು?

ಮಹೇಶ್‌ ಬಾಬು -

Yashaswi Devadiga
Yashaswi Devadiga Jun 1, 2026 8:26 PM

ಈಗ ‘ವಾರಣಾಸಿ’(varanasi) ಚಿತ್ರದ ಬಿಡುಗಡೆಗೂ ಮುನ್ನವೇ ರಾಜಮೌಳಿ (Rajamouli) ಅವರ ಈ ಕನಸು ನನಸಾಗುತ್ತಿದೆ. ಇತ್ತೀಚಿನ ಅಧಿಕೃತ ಪ್ರಕಟಣೆಯ ಪ್ರಕಾರ, ಐಮ್ಯಾಕ್ಸ್ ಸಂಸ್ಥೆಯು ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ಏಷ್ಯನ್ ಸಿನಿಮಾಸ್ ಜೊತೆ ಕೈಜೋಡಿಸುವ ಮೂಲಕ ಹೈದರಾಬಾದ್‌ಗೆ ಭರ್ಜರಿ ಕೊಡುಗೆ ನೀಡುತ್ತಿದೆ. ರಾಜಮೌಳಿ ಬಯಸಿದಂತೆ ನಗರದಲ್ಲಿ ಐಮ್ಯಾಕ್ಸ್ ಸ್ಕ್ರೀನ್ ಆರಂಭ ಆಗುತ್ತಿದೆ.

ಸೋಮವಾರ, AMB ಸಿನಿಮಾಸ್ (ಏಷ್ಯನ್ ಮಹೇಶ್ ಬಾಬು ಸಿನಿಮಾಸ್) ಹೈದರಾಬಾದ್‌ಗೆ IMAX ಅನ್ನು ಮತ್ತೆ ತರುತ್ತಿರುವುದಾಗಿ ಘೋಷಿಸಿತು. IMAX. ಶೀಘ್ರದಲ್ಲೇ ಹೈದರಾಬಾದ್‌ನ AMB ಕ್ಲಾಸಿಕ್ ವಿಕ್ಟರಿಯಲ್ಲಿ ಮಾತ್ರ ಬರಲಿದೆ.” ಎಂದು ಬರೆದುಕೊಂಡಿದೆ

ಏಷ್ಯನ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಜ್ಯೇಷ್ಠ್ ನಾರಂಗ್ ಕೂಡ ಈ ಸುದ್ದಿಯನ್ನು ದೃಢಪಡಿಸಿದರು, ಎಕ್ಸ್ ನಲ್ಲಿ ಬರೆಯುತ್ತಾ, "ಇದನ್ನು ಘೋಷಿಸಲು ನಿಜವಾಗಿಯೂ ಸಂತೋಷವಾಗಿದೆ. ಐಮ್ಯಾಕ್ಸ್ ಹೈದರಾಬಾದ್‌ಗೆ ಹಿಂತಿರುಗುತ್ತಿದೆ! ಹೈದರಾಬಾದ್‌ನಲ್ಲಿ ನಮಗೆ ಅಂತಿಮವಾಗಿ ಐಮ್ಯಾಕ್ಸ್ ಹಿಂತಿರುಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Taapsee Pannu : ಮಹಿಳೆಯರೇ ಈ ತಪ್ಪು ಮಾಡಬೇಡಿ! ನಟಿ ತಾಪ್ಸಿ ಪನ್ನು ಮನವಿ ಏನು?

ಮಹೇಶ್ ಅವರ ಮುಂಬರುವ ಚಿತ್ರ ಎಸ್.ಎಸ್. ರಾಜಮೌಳಿ ಅವರ ವಾರಣಾಸಿಯ ಅಧಿಕೃತ ಖಾತೆಯಲ್ಲಿ , "ಏಪ್ರಿಲ್ 7, 2027 ರಂದು ಹೈದರಾಬಾದ್‌ನಲ್ಲಿ ಮತ್ತು ಪ್ರಪಂಚದಾದ್ಯಂತ ಐಮ್ಯಾಕ್ಸ್‌ನಲ್ಲಿ ವಾರಣಾಸಿಯನ್ನು ಅನುಭವಿಸಿ" ಎಂದು ಬರೆಯಲಾಗಿದೆ.

ಈ ಸಿನಿಮಾಗಳಿಗೂ ಅನುಕೂಲ

ದೊಡ್ಡ ಬಜೆಟ್​ನ ಮತ್ತು ದೃಶ್ಯ ವೈಭವದ ಸಿನಿಮಾಗಳನ್ನು ನೀಡುವ ಟಾಲಿವುಡ್‌ನಲ್ಲೇ ಒಂದು ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಥಿಯೇಟರ್ ಇಲ್ಲದಿರುವುದು ಆಶ್ಚರ್ಯ ತಂದಿದೆ ಎಂದು ಅವರು ಹೇಳಿದ್ದರು.

ಆದರೆ ಆ ಕೊರತೆಯನ್ನು ಮಹೇಶ್ ಬಾಬು ನೀಗಿಸಿದ್ದಾರೆ. ಈ ಚಿತ್ರದ ಬಿಡುಗಡೆಯ ಸರಿಯಾದ ಸಮಯದಲ್ಲೇ ಹೈದರಾಬಾದ್‌ಗೆ ಐಮ್ಯಾಕ್ಸ್ ಪರದೆ ಬರುತ್ತಿರುವುದು ಚಿತ್ರಪ್ರೇಮಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ನಿ ಈ ಐಮ್ಯಾಕ್ಸ್ ಸ್ಕ್ರೀನ್ ಬರೀ ‘ವಾರಣಾಸಿ’ ಚಿತ್ರಕ್ಕಷ್ಟೇ ಸೀಮಿತವಾಗಿಲ್ಲ. ಮುಂಬರುವ ದಿನಗಳಲ್ಲಿ ತೆರೆಕಾಣಲಿರುವ ದೊಡ್ಡ ಬಹುನಿರೀಕ್ಷಿತ ಚಿತ್ರಗಳಾದ ‘ರಾಕಾ’, ‘ಕಲ್ಕಿ 2’, ಯಶ್ ನಟನೆಯ ‘ಟಾಕ್ಸಿಕ್’ ಮತ್ತು ಜೂನಿಯರ್ ಎನ್‌ಟಿಆರ್ ಅವರ ‘ಡ್ರ್ಯಾಗನ್’ ಸಿನಿಮಾಗಳಿಗೂ ಅನುಕೂಲ.



"ಹೈದರಾಬಾದ್‌ನ ಸಿನಿಮಾ ಮೇಲಿನ ಹಸಿವು ಮತ್ತು ಪ್ರೀತಿ ಅಪ್ರತಿಮವಾಗಿದೆ, ಮತ್ತು ಪ್ರತಿಷ್ಠಿತ ಐಮ್ಯಾಕ್ಸ್ ಸ್ವರೂಪವನ್ನು ಹೈದರಾಬಾದ್‌ಗೆ ಮರಳಿ ತರುವುದು ಎಎಂಬಿ ಸಿನಿಮಾಸ್‌ಗೆ ಅತ್ಯಂತ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ" ಎಂದು ಎಎಂಬಿ ಸಿನಿಮಾಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸುನೀಲ್ ನಾರಂಗ್ ಮತ್ತು ಭರತ್ ನಾರಂಗ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ವಾರಣಾಸಿ' ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಹೇಶ್ ಬಾಬು ರುದ್ರ ಎಂಬ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನ ಅವತಾರದಲ್ಲಿ ಕೂಡ ತೆರೆಮೇಲೆ ದರ್ಶನ ಕೊಡಲಿದ್ದಾರೆ. ಕುಂಭ ಎಂಬ ಖಳನಾಗಿ ಪೃಥ್ವಿರಾಜ್ ಅಬ್ಬರಿಸಲಿದ್ದಾರೆ.

ಇದನ್ನೂ ಓದಿ: CM Vijay : MGR ಕೂಡ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆಯಲಿಲ್ಲ! ಸಿಎಂ ವಿಜಯ್ ನೇರ ಹೇಳಿಕೆ

ಮಂದಾಕಿನಿಯಾಗಿ ಪ್ರಿಯಾಂಕಾ ಕಮಾಲ್ ಮಾಡಲಿದ್ದಾರೆ. ಪ್ರಕಾಶ್ ರಾಜ್ ಕೂಡ ತಂಡ ಸೇರಿಕೊಂಡಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ರಾಜಮೌಳಿ ಘೋಷಿಸಿದ್ದಾರೆ.