Maryade Ramanna: ಕಿರುತೆರೆಗೆ 'ಮರ್ಯಾದೆ ರಾಮಣ್ಣ' ಎಂಟ್ರಿ ಫಿಕ್ಸ್; ಈ ಸೀರಿಯಲ್ ಅಂತ್ಯ!
Maryade Ramanna: ರಾಮಣ್ಣ ಅವತಾರದಲ್ಲಿ ಮತ್ತೆ ಕಿರುತೆರೆ ವೀಕ್ಷಕರನ್ನು ಸೆಳೆಯುವುದಕ್ಕೆ ಬರುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ರಾಮಣ್ಣ ಅಮ್ಮನಾಗಿ ವೀಣಾಸುಂದರ್ ನಟಿಸುತ್ತಿದ್ದಾರೆ. ಇವರೊಂದಿಗೆ ಸುಂದರ್, ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್, ಸೌಮ್ಯಲತ, ವಿಠ್ಠಲ್ ಕಾಮತ್, ಯದು ಗಿರೀಶ್ ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ಬಳಗವೇ ಈ ಸೀರಿಯಲ್‌ನಲ್ಲಿ ನಟಿಸಿದ್ದಾರೆ.
ಮರ್ಯಾದೆ ರಾಮಣ್ಣ ಧಾರಾವಾಹಿ -
ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು (Star Suvarna) ವಿನೂತನ ರೀತಿಯ ಧಾರಾವಾಹಿಗಳನ್ನು ನೀಡುತ್ತಲೇ ಇದೆ. ಹೊಚ್ಚ ಹೊಸ ಸೀರಿಯಲ್ ಸೇರ್ಪಡೆಯಾಗುತ್ತಿದೆ. ಅದುವೇ 'ಮರ್ಯಾದೆ ರಾಮಣ್ಣ' (Maryade Ramanna). ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಧಾರಾವಾಹಿಗಳಲ್ಲಿ ನಟಿಸಿ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ಜೊತೆಗೆ ಚಂದನವನದಲ್ಲೂ ಮಿಂಚಿದ ನಟ ಚೇತನ್ ಚಂದ್ರ (Chetan Chandra) ಈ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
ಕುಸ್ತಿಗೆ ತನ್ನನ್ನ ತಾನು ಮುಡಿಪಾಗಿಟ್ಟಿರುವ ರಾಮಣ್ಣನಿಗೆ ತಾಯಿಯೇ ಸರ್ವಸ್ವ. ಅಮ್ಮ ಹಾಕಿದ ಗೆರೆ ದಾಟಲಾರ. ಅಪ್ಪಟ ಬ್ರಹ್ಮಚಾರಿ. ಇವನ ಬಾಳಿಗೆ ಸಿಟಿ ಹುಡುಗಿ ಎಂಟ್ರಿಯಾಗುತ್ತೆ. ಮುಂದೆ ರಾಮಣ್ಣನಿಗೆ ಒಂದುಕಡೆ ತಾಯಿ ಮತ್ತೊಂದುಕಡೆ ಆ ಹುಡುಗಿ ಎಂಬ ಪರಿಸ್ಥಿತಿ ಬರುತ್ತೆ. ಆಗ ಈ ‘ಮರ್ಯಾದೆ ರಾಮಣ್ಣ’ ಏನು ಮಾಡ್ತಾನೆ? ಎಂಬುವುದು ಕಥೆಯ ಎಳೆ.
ಇದನ್ನೂ ಓದಿ: Actor Darshan: ವಿವಾಹ ವಾರ್ಷಿಕೋತ್ಸವ; ವಿಜಯಲಕ್ಷ್ಮಿ ದರ್ಶನ್ ಭಾವುಕ!
ರಾಮಣ್ಣ ಅವತಾರದಲ್ಲಿ ಮತ್ತೆ ಕಿರುತೆರೆ ವೀಕ್ಷಕರನ್ನು ಸೆಳೆಯುವುದಕ್ಕೆ ಬರುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ರಾಮಣ್ಣ ಅಮ್ಮನಾಗಿ ವೀಣಾಸುಂದರ್ ನಟಿಸುತ್ತಿದ್ದಾರೆ. ಇವರೊಂದಿಗೆ ಸುಂದರ್, ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್, ಸೌಮ್ಯಲತ, ವಿಠ್ಠಲ್ ಕಾಮತ್, ಯದು ಗಿರೀಶ್ ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ಬಳಗವೇ ಈ ಸೀರಿಯಲ್‌ನಲ್ಲಿ ನಟಿಸಿದ್ದಾರೆ.
ಕನ್ನಡದ ಜನಪ್ರಿಯ ಧಾರಾವಾಹಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಮುಕ್ತಾಯದ ಹಂತ ತಲುಪಿದೆ. ಶ್ರೀರೇಣುಕಾ ಯಲ್ಲಮ ದೇವಿಯ ಮಹಿಮೆ, ಜೀವನ ಚರಿತ್ರೆ ಮತ್ತು ದೈವತ್ವದ ಕಥೆಯನ್ನ ಒಳಗೊಂಡಿದೆ. ಈ ಕುರಿತು ಕಥೆ ಹೆಣೆಯಲಾಗಿದ್ದ ಧಾರಾವಾಹಿಗೆ ಅಪಾರ ಅಭಿಮಾನಿಗಳಿದ್ದಾರೆ. ಸದ್ಯ ಧಾರಾವಾಹಿ ಮುಕ್ತಾಯವಾಗುತ್ತಿದೆ. ಇದೇ ಮೇ23ರಂದು ಕೊನೆಯ ಸಂಚಿಕೆ ಪ್ರಸಾರವಾಗಲಿದೆ.
ಇದನ್ನೂ ಓದಿ: Amruthadhaare Serial: ಗೌತಮ್ ಅಖಾಡಕ್ಕೆ ಜೈದೇವ್ ವೈಲ್ಡ್ ಕಾರ್ಡ್ ಎಂಟ್ರಿ! ಮಿಂಚು ಕಥೆ ಏನು?
'ಮರ್ಯಾದೆ ರಾಮಣ್ಣ' ಇದೇ ಮೇ 25 ರಿಂದ ಆರಂಭ ಆಗುತ್ತಿದೆ. ಈ ಧಾರಾವಾಹಿ ಪ್ರತಿ ದಿನ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.