ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೂರೇ ದಿನಕ್ಕೆ‌ ವಿಶ್ವಾದ್ಯಂತ 2 ಸಾವಿರ ಕೋಟಿ ರೂ. ಬಾಚಿದ ʻಮೈಕೆಲ್‌ʼ ಸಿನಿಮಾ; ಭಾರತದಲ್ಲಿ ಎಷ್ಟಾಯ್ತು ಗಳಿಕೆ?

ಮೈಕೆಲ್ ಜಾಕ್ಸನ್ ಜೀವನವನ್ನಾಧರಿಸಿದ ʻಮೈಕೆಲ್ʼ ಸಿನಿಮಾ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಜಾಗತಿಕವಾಗಿ 2 ಸಾವಿರ ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಈ ಮೂಲಕ ʻಓಪನ್ ಹೈಮರ್ʼ ನಂತಹ ಚಿತ್ರಗಳ ದಾಖಲೆಯನ್ನೂ ಇದು ಹಿಂದಿಕ್ಕಿದೆ. ಭಾರತದಲ್ಲಿಯೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮೂರು ದಿನಗಳಲ್ಲಿ 19.20 ಕೋಟಿ ರೂ. ಕಲೆಕ್ಷನ್ ಮಾಡಿದೆ.

3 ದಿನಕ್ಕೆ 2 ಸಾವಿರ ಕೋಟಿ ಬಾಚಿದ ʻಮೈಕೆಲ್ʼ; ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ

-

Avinash GR
Avinash GR Apr 27, 2026 8:13 PM

ಮೈಕೆಲ್‌ ಜಾಕ್ಸನ್‌ ಜೀವನವನ್ನು ಆಧರಿಸಿ ನಿರ್ಮಾಣವಾದ 'ಮೈಕೆಲ್' (Michael) ಚಿತ್ರವು ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಮೊದಲ ಮೂರು ದಿನಗಳಲ್ಲಿ ಚಿತ್ರದ ಗಳಿಕೆ ಸ್ಥಿರವಾಗಿ ಏರಿಕೆಯಾಗಿದ್ದು, ಭಾನುವಾರ ಚಿತ್ರಮಂದಿರಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಈ ಚಿತ್ರದ ಮೊದಲ ಮೂರು ದಿನಗಳ ಗಳಿಕೆ $217.4 ಮಿಲಿಯನ್ (ಸುಮಾರು ₹2,000 ಕೋಟಿ ರೂಪಾಯಿ) ತಲುಪಿದ್ದು, ಇದು ಬಯೋಪಿಕ್ ಸಿನಿಮಾಗಳ ಇತಿಹಾಸದಲ್ಲೇ ಅತೀ ಹೆಚ್ಚಿನ ಕಲೆಕ್ಷನ್‌ ಆಗಿದೆ.

ದಾಖಲೆ ಬರೆದ ʻಮೈಕೆಲ್‌ʼ ಸಿನಿಮಾ

ಈ ಹಿಂದೆ ತೆರೆಕಂಡಿದ್ದ ಬಯೋಪಿಕ್‌ ಸಿನಿಮಾಗಳಾದ 'ಓಪನ್ ಹೈಮರ್' ($180.4 ಮಿಲಿಯನ್) ಮತ್ತು 'ಬೋಹೀಮಿಯನ್ ರಾಪ್ಸೋಡಿ' ($141.7 ಮಿಲಿಯನ್) ಸಿನಿಮಾಗಳ ಮೊದಲ ಮೂರು ದಿನಗಳ ಗಳಿಕೆಯನ್ನು ʻಜಾಕ್ಸನ್‌ʼ ಸಿನಿಮಾವು ಸರಿಗಟ್ಟಿದೆ. ಸುಮಾರು $200 ಮಿಲಿಯನ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು, 2026ರ ಅತಿದೊಡ್ಡ ಥಿಯೇಟ್ರಿಕಲ್ ಬಿಡುಗಡೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.‌

ಮೈಕೆಲ್ ಜಾಕ್ಸನ್ ಅವರ ಪರಂಪರೆಗೆ ಜಾಗತಿಕವಾಗಿ ಇರುವ ಕ್ರೇಜ್ ಅನ್ನು ಈ ಯಶಸ್ಸು ಎತ್ತಿ ತೋರಿಸುತ್ತದೆ. ಈ ಮೂಲಕ ಸಿನಿಮಾವು ಮ್ಯೂಸಿಕ್ ಬಯೋಪಿಕ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಮೈಕೆಲ್‌ ಸಿನಿಮಾವನ್ನು ಸುಮಾರು 1,600 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಏಪ್ರಿಲ್ 24 ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಿದೆ.

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರುಕ್ಮಿಣಿ ವಸಂತ್‌ ನಟಿಸ್ತಾರಾ? ಸಾಯಿ ಪಲ್ಲವಿಗೆ ಕೋಕ್‌ ನೀಡಿತೇ ಚಿತ್ರತಂಡ?

ಭಾರತದಲ್ಲಿ ಎಷ್ಟಾಗಿದೆ ಗಳಿಕೆ?

ಸ್ಯಾಕ್ನಿಲ್ಕ್ (Sacnilk) ವರದಿಯ ಪ್ರಕಾರ, 3ನೇ ದಿನದಂದು 5.50 ಕೋಟಿ ರೂಪಾಯಿ ಗಳಿಸುವ ಮೂಲಕ, ಭಾರತದಲ್ಲಿನ ಮೊದಲ ವಾರಾಂತ್ಯದ ಒಟ್ಟು ಕಲೆಕ್ಷನ್ ಸುಮಾರು 19.20 ಕೋಟಿ ರೂಪಾಯಿ ತಲುಪಿದೆ. ಇದರೊಂದಿಗೆ, ಭಾರತದಲ್ಲಿ ಮ್ಯೂಸಿಕಲ್ ಬಯೋಪಿಕ್ ವಿಭಾಗದಲ್ಲಿ 'ಮೈಕೆಲ್' ಅತಿ ದೊಡ್ಡ ಓಪನಿಂಗ್ ಪಡೆದ ದಾಖಲೆ ಬರೆದಿದೆ. ಅಷ್ಟೇ ಅಲ್ಲದೆ, ಬಾಲಿವುಡ್‌ನ ಹೊಸ ಚಿತ್ರ 'ಗಿನ್ನಿ ವೆಡ್ಸ್ ಸನ್ನಿ 2' (1.20 ಕೋಟಿ ರೂ. ಗಳಿಕೆ) ಗಿಂತಲೂ ಉತ್ತಮ ಪ್ರದರ್ಶನ ನೀಡಿದೆ.

ಆಂಟೊನಿ ಫುವಾ ನಿರ್ದೇಶನದ ಈ ಸಂಗೀತಮಯ ಬಯೋಪಿಕ್ 'ಮೈಕೆಲ್' ಸಿನಿಮಾದಲ್ಲಿ ಮೈಕೆಲ್ ಜಾಕ್ಸನ್ ಅವರ ಸೋದರಸಂಬಂಧಿ ಜಾಫರ್ ಜಾಕ್ಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮೈಕೆಲ್ ಜಾಕ್ಸನ್‌ ಅವರ ಜೀವನವನ್ನು ತೋರಿಸಲಾಗಿದೆ. ಜಾಕ್ಸನ್ ಫ್ಯಾಮಿಲಿಯ 'ಜಾಕ್ಸನ್ 5' ಬ್ಯಾಂಡ್‌ನಲ್ಲಿ ಪ್ರತಿಭಾವಂತ ಬಾಲ ನಟನಾಗಿ ಆರಂಭವಾಗಿ, ನಂತರ ಜಾಗತಿಕ ಐಕಾನ್ ಆಗಿ ಬೆಳೆದು ಪಾಪ್ ಸಂಗೀತವನ್ನೇ ಮರು ವ್ಯಾಖ್ಯಾನಿಸಿದ ಅವರ ಪಯಣವನ್ನು ಈ ಸಿನಿಮಾ ತೆರೆದಿಡುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯ.

ಜಾಫರ್ ಜಾಕ್ಸನ್ ಅವರೊಂದಿಗೆ ವಕೀಲ ಜಾನ್ ಬ್ರಾಂಕಾ ಪಾತ್ರದಲ್ಲಿ ಮೈಲ್ಸ್ ಟೆಲ್ಲರ್, ಜೋ ಜಾಕ್ಸನ್ ಪಾತ್ರದಲ್ಲಿ ಕೋಲ್ಮನ್ ಡೊಮಿಂಗೊ, ಡಯಾನಾ ರೋಸ್ ಪಾತ್ರದಲ್ಲಿ ಕ್ಯಾಟ್ ಗ್ರಹಾಂ ಮತ್ತು ಕ್ಯಾಥರಿನ್ ಜಾಕ್ಸನ್ ಪಾತ್ರದಲ್ಲಿ ನಿಯಾ ಲಾಂಗ್ ನಟಿಸಿದ್ದಾರೆ. ಲಾರಾ ಹ್ಯಾರಿಯರ್, ಕೆಂಡ್ರಿಕ್ ಸ್ಯಾಂಪ್ಸನ್ ಮತ್ತು ಜೂಲಿಯಾನೊ ಕ್ರೂ ವಾಲ್ಡಿ ಕೂಡ ʻಮೈಕಲ್‌ʼ ಚಿತ್ರದಲ್ಲಿ ನಟಿಸಿದ್ದಾರೆ.