ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prashanth Neel: ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್

Prashanth Neel: ‘ಮೈತ್ರಿ ಮೂವೀ ಮೇಕರ್ಸ್’ ಮೊದಲ ಬಾರಿಗೆ ಈ ಸಂಸ್ಥೆ ಹಾರರ್ ಜಗತ್ತಿಗೆ ಕಾಲಿಟ್ಟಿದೆ. ಈ ಚಿತ್ರಕ್ಕೆ ‘418’ ಎಂದು ಹೆಸರಿಡಲಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ನಿರ್ಮಾಣ ಸಂಸ್ಥೆ 418 ಎಂಬ ಅದ್ಭುತ ಚಿತ್ರದೊಂದಿಗೆ ಹಾರರ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ. ಕೀರ್ತನ್ ನಾಡಗೌಡ (Kirtan Nadagouda)ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ -

Yashaswi Devadiga
Yashaswi Devadiga Apr 19, 2026 8:57 AM

ಮೈತ್ರಿ ಮೂವೀ ಮೇಕರ್ಸ್’ (Mythri Movie Makers) ಮೊದಲ ಬಾರಿಗೆ ಈ ಸಂಸ್ಥೆ ಹಾರರ್ ಜಗತ್ತಿಗೆ ಕಾಲಿಟ್ಟಿದೆ. ಈ ಚಿತ್ರಕ್ಕೆ ‘418’ ಎಂದು ಹೆಸರಿಡಲಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ನಿರ್ಮಾಣ ಸಂಸ್ಥೆ 418 ಎಂಬ ಅದ್ಭುತ ಚಿತ್ರದೊಂದಿಗೆ ಹಾರರ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ. ಕೀರ್ತನ್ ನಾಡಗೌಡ (Kirtan Nadagouda)ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಕಂಪ್ಲೀಟ್ ಭಯಾನಕ ಚಿತ್ರ

ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, ‘ಹಾರರ್ ಸಿನಿಮಾಗಳಲ್ಲಿ ನಗಿಸಿದ್ದು ಸಾಕು, ಈಗ ಹೆದರುವ ಸಮಯ’ ಎಂಬ ಪಂಚ್ ಲೈನ್ ನೀಡುವ ಮೂಲಕ ಇದೊಂದು ಕಂಪ್ಲೀಟ್ ಭಯಾನಕ ಚಿತ್ರ ಎಂದು ಸಾಬೀತುಪಡಿಸಿದೆ.

ಇದನ್ನೂ ಓದಿ: Varun Tej: ಮೊಣಕಾಲು ಸರ್ಜರಿ ಬಳಿಕ ವರುಣ್ ತೇಜ್‌ ಕೊಟ್ಟ ಅಪ್‌ಡೇಟ್‌ ಇದು!

ಮೈತ್ರಿ ಮೂವಿ ಮೇಕರ್ಸ್ ಬೆಳ್ಳಿ ಪರದೆಯ ಮೇಲೆ ಮಿತಿಗಳನ್ನು ಮೀರಿದ ಮತ್ತು ಅಪ್ರತಿಮ ಸಿನಿಮೀಯ ಭವ್ಯತೆಯನ್ನು ನೀಡುವಲ್ಲಿ ಪೌರಾಣಿಕ ಖ್ಯಾತಿಯನ್ನು ಹೊಂದಿದೆ. ಈ ಭಯಾನಕ ಜಗತ್ತನ್ನು ಜೀವಂತಗೊಳಿಸಲು, ಪ್ರತಿಷ್ಠಿತ ಬ್ಯಾನರ್ ಪ್ರಖ್ಯಾತ ಮತ್ತು ಅತ್ಯಂತ ಪ್ರತಿಭಾನ್ವಿತ ತಾಂತ್ರಿಕ ತಂಡವನ್ನು ಸೇರಿಸಿಕೊಂಡಿದೆ.

ತಂಡ ಮತ್ತು ಪ್ರಶಾಂತ್ ನೀಲ್ ಅವರ ಭವ್ಯ ಬೆಂಬಲದಿಂದ ನಡೆಸಲ್ಪಡುವ, 418, ಭೂಮಿಯನ್ನು ಕಂಪಿಸುವ ಸಿನಿಮೀಯ ಘಟನೆಯಾಗಿ ರೂಪುಗೊಳ್ಳುತ್ತಿದೆ, ಇದು ಕ್ರೆಡಿಟ್‌ಗಳು ಹೊರಬಂದ ನಂತರವೂ ಪ್ರೇಕ್ಷಕರನ್ನು ಕಾಡುತ್ತದೆ.



ನಿರ್ದೇಶಕ ಕೀರ್ತನ್ ಅವರು ‘ಕೆಜಿಎಫ್’ ಫ್ರಾಂಚೈಸಿ ಮತ್ತು ‘ಸಲಾರ್’ ಚಿತ್ರಗಳಲ್ಲಿ ಸೆಕೆಂಡ್ ಯೂನಿಟ್ ಡೈರೆಕ್ಟರ್ ಹಾಗೂ ಸಹಾಯಕ ನಿರ್ದೇಶಕರಾಗಿ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಸೂರ್ಯ ರಾಜ್, ಚರಣ್ ಲಕ್ಕರಾಜು ಮತ್ತು ಪ್ರೀತಿ ಪಗಡಾಲ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸದ್ದು ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: Kannada New Movie: 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್; ಮುಖ್ಯಮಂತ್ರಿ ಸಾಥ್‌

‘ಕೆಜಿಎಫ್’ ಯಶಸ್ಸಿನ ನಂತರ ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡಿದ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದರು. ಈಗ ಅವರು ‘418’ ಸಿನಿಮಾವನ್ನು ಪ್ರಸೆಂಟ್ ಮಾಡುವ ಸಲುವಾಗಿ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ್ದಾರೆ. ಪ್ರಶಾಂತ್ ನೀಲ್ ಅವರ ಬ್ರ್ಯಾಂಡ್ ಮೌಲ್ಯ ಈ ಚಿತ್ರಕ್ಕೆ ದೊಡ್ಡ ಬಲ ತಂದುಕೊಟ್ಟಿದೆ.