ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nagarjuna: ರಣವೀರ್ ಸಿನಿಮಾ ನೋಡಿ ನಟ ನಾಗಾರ್ಜುನ ಫುಲ್‌ ಫಿದಾ! ಹೇಳಿದ್ದೇನು?

Dhurandhar The Revenge: ಧುರಂಧರ್: ದಿ ರಿವೆಂಜ್ ಸಿನಿಮಾ ಎಲ್ಲೆಲ್ಲಿಯೂ ಅದರದ್ದೇ ಸುದ್ದಿಯಾಗಿದೆ. ಜನಸಮಾನ್ಯರಿಂದ ಹಿಡಿದು ಅನೇಕ ತಾರೆಯರು ಸಿನಿಮಾ ಬಗ್ಗೆ ಹೊಗಳುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ನಿಂದ ಹಿಡಿದು ಎಸ್.ಎಸ್. ರಾಜಮೌಳಿಯವರೆಗೆ ಹಲವಾರು ತಾರೆಯರು ಆದಿತ್ಯ ಅವರ ಪ್ರತಿಭೆ ಮತ್ತು ರಣವೀರ್ ಸಿಂಗ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಈ ಪಟ್ಟಿಗೆ ನಾಗಾರ್ಜುನ ಸೇರ್ಪಡಯಾಗಿದ್ದಾರೆ. ಸ್ಫೂರ್ತಿ ನೀಡುವ ಕೆಲವೇ ಕೆಲವು ಚಿತ್ರಗಳಲ್ಲಿ ಇದೂ ಒಂದು ಎಂದು ಬರೆದುಕೊಂಡಿದ್ದಾರೆ.

ರಣವೀರ್ ಸಿನಿಮಾ ನೋಡಿ ನಟ ನಾಗಾರ್ಜುನ ಫುಲ್‌ ಫಿದಾ! ಹೇಳಿದ್ದೇನು?

ಧುರಂಧರ್ 2 ಸಿನಿಮಾ -

Yashaswi Devadiga
Yashaswi Devadiga Mar 23, 2026 8:25 PM

ಧುರಂಧರ್: ದಿ ರಿವೆಂಜ್ ಸಿನಿಮಾ (Dhurandhar The Revenge) ಎಲ್ಲೆಲ್ಲಿಯೂ ಅದರದ್ದೇ ಸುದ್ದಿಯಾಗಿದೆ. ಜನಸಮಾನ್ಯರಿಂದ ಹಿಡಿದು ಅನೇಕ ತಾರೆಯರು ಸಿನಿಮಾ ಬಗ್ಗೆ ಹೊಗಳುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ನಿಂದ ಹಿಡಿದು ಎಸ್.ಎಸ್. ರಾಜಮೌಳಿಯವರೆಗೆ (SS Rajamouli) ಹಲವಾರು ತಾರೆಯರು ಆದಿತ್ಯ ಅವರ ಪ್ರತಿಭೆ ಮತ್ತು ರಣವೀರ್ ಸಿಂಗ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಈ ಪಟ್ಟಿಗೆ ನಾಗಾರ್ಜುನ (Nagarjuna) ಸೇರ್ಪಡಯಾಗಿದ್ದಾರೆ. ಸ್ಫೂರ್ತಿ ನೀಡುವ ಕೆಲವೇ ಕೆಲವು ಚಿತ್ರಗಳಲ್ಲಿ ಇದೂ ಒಂದು ಎಂದು ಬರೆದುಕೊಂಡಿದ್ದಾರೆ.

ನಾಗಾರ್ಜುನ ಪೋಸ್ಟ್‌ ಏನು?

ಧುರಂಧರ್: ದಿ ರಿವೆಂಜ್ ಚಿತ್ರದ ವಿಮರ್ಶೆಯನ್ನು ಹಂಚಿಕೊಂಡರು. "#DhurandharTheRevenge ಎಂಬ ಅದ್ಭುತ ಚಿತ್ರವನ್ನು ನೋಡಿದೆ!!! ಇದು ನನ್ನ ತಲೆಯನ್ನು ಕೆಡಿಸಿಬಿಟ್ಟಿದೆ, ಇದರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: Netflix: ಹಳೆಯ ಸ್ಮಾರ್ಟ್ ಟಿವಿಗಳಲ್ಲಿ ನೆಟ್‌ಫ್ಲಿಕ್ಸ್ ಬಂದ್! ಏಕೆ ಈ ಬದಲಾವಣೆ?

ಸಿನಿಮಾ ಮೇಕಿಂಗ್ ಅನ್ನೇ ಬದಲಿಸುವ ಮತ್ತು ಸ್ಫೂರ್ತಿ ನೀಡುವ ಕೆಲವೇ ಕೆಲವು ಚಿತ್ರಗಳಲ್ಲಿ ಇದೂ ಒಂದು!" ಎಂದು ಬರೆದುಕೊಂಡಿದ್ದಾರೆ. ಅವರು ನಿರ್ದೇಶಕ ಆದಿತ್ಯ ಧರ್ ಮತ್ತು ಇಡೀ ತಂಡವನ್ನು ಶ್ಲಾಘಿಸಿದ್ದಾರೆ. ಇದು ಚಲನಚಿತ್ರ ನಿರ್ಮಾಣವನ್ನು ಪ್ರೇರೇಪಿಸುವ ಮತ್ತು ಬದಲಾಯಿಸುವ ಚಿತ್ರಗಳಲ್ಲಿ ಒಂದಾಗಿದೆ!! ಈ ಸ್ಪೂರ್ತಿದಾಯಕ ನಿರ್ದೇಶಕ ಮತ್ತು ಕ್ಯಾಮೆರಾ, ಸಂಗೀತ, ಧ್ವನಿ ವಿನ್ಯಾಸ, ಆಕ್ಷನ್, ಕಲೆ ಸೇರಿದಂತೆ ಇಡೀ ತಾಂತ್ರಿಕ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು... ಎಲ್ಲಾ ನಟರಿಗೂ ಅಭಿನಂದನೆಗಳು - ನೀವೆಲ್ಲರೂ ತುಂಬಾ ಅದ್ಭುತರು.



ಅವರಲ್ಲದೆ, ಎಸ್.ಎಸ್. ರಾಜಮೌಳಿ ಕೂಡ ಚಿತ್ರವನ್ನು ಶ್ಲಾಘಿಸಿದರು. ಧುರಂಧರ್: ದಿ ರಿವೆಂಜ್ ಅನ್ನು ಅದರ ಹಿಂದಿನ ಚಿತ್ರಕ್ಕಿಂತ ಅಪ್‌ಗ್ರೇಡ್ ಎಂದು ಕರೆದಿದ್ದಾರೆ.

ಭಾರಿ ಕಲೆಕ್ಷನ್‌

ಸಾಮಾನ್ಯವಾಗಿ ಯಾವುದೇ ಪ್ಯಾನ್‌ ಇಂಡಿಯಾ ಸಿನಿಮಾ ತೆರೆಕಂಡರೂ, ಮೊದಲ ದಿನದಿಂದಲೇ ಅಧಿಕೃತ ಗಳಿಕೆಯನ್ನು ಚಿತ್ರತಂಡ ಹಂಚಿಕೊಳ್ಳುತ್ತಿರುತ್ತದೆ. ಆದರೆ ಧುರಂಧರ್‌ 2 ತೆರೆಕಂಡು ಐದು ದಿನಗಳಾದರೂ ನಿರ್ಮಾಪಕರು ಮಾತ್ರ ಕಲೆಕ್ಷನ್‌ ಬಗ್ಗೆ ಗಪ್‌ ಚುಪ್‌ ಆಗಿದ್ದರು. ಆದರೆ ಇದೀಗ ನಾಲ್ಕು ದಿನಗಳಿಗೆ ಆಗಿರುವ ಒಟ್ಟಾರೆ ಗಳಿಕೆಯ ಇಂಚಿಂಚೂ ಮಾಹಿತಿಯನ್ನು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾವು 761 ಕೋಟಿ ರೂ. ಹಣವನ್ನು ಬಾಚಿಕೊಂಡಿದೆ ಎಂದು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ. ಈ ಪ್ರಮಾಣದ ಗಳಿಕೆಯನ್ನು ಈ ಹಿಂದೆ ಭಾರತದ ಯಾವ ಸಿನಿಮಾವೂ ಮಾಡಿರಲಿಲ್ಲ ಎಂಬುದು ವಿಶೇಷ.

ಈವರೆಗೂ ಭಾರತದಲ್ಲಿ 550 ಕೋಟಿ ರೂ. ಗಳಿಕೆಯಾಗಿದ್ದರೆ, ವಿದೇಶದಿಂದ 211 ಕೋಟಿ ರೂ. ಹರಿದು ಬಂದಿದೆ. ಭಾರತದಲ್ಲಿ ಈ ಚಿತ್ರವು ಮೊದಲ ದಿನ ಪೇಯ್ಡ್ ಪ್ರಿವ್ಯೂಗಳ ಗಳಿಕೆಯೂ ಸೇರಿದಂತೆ 145 ಕೋಟಿ ರೂ. ಬಾಚಿಕೊಂಡಿದೆ.

ಇದನ್ನೂ ಓದಿ: Radha Bhagavati Raanav: ಜೈದೇವ್ ಮೇಲೆ ಮಲ್ಲಿಗೆ ಪ್ರೀತಿ ಆಗಿದ್ದೇಗೆ? ಲವ್‌ ಸೀಕ್ರೆಟ್‌ ರಿವೀಲ್‌ ಮಾಡಿದ ನಟಿ ರಾಧಾ

ಎರಡನೇ ದಿನ 83 ಕೋಟಿ ರೂ. ಬಂದರೆ, ಮೂರನೇ ದಿನ 117 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ. ನಾಲ್ಕನೇ ದಿನ 121 ಕೋಟಿ ರೂ. ಗಳಿಕೆ ಆಗಿದೆ. 4 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರ ಎಂಬ ಖ್ಯಾತಿಗೆ ಧುರಂಧರ್‌ 2 ಪಾತ್ರವಾಗಿದೆ.