ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nandamuri Balakrishna: ಅಬ್ಬಬ್ಬಾ! 65ನೇ ವಯಸ್ಸಿನಲ್ಲೂ ಬಾಲಯ್ಯ ಹವಾ ಹೇಗಿದೆ ನೋಡಿ; 'ಅಖಂಡ 2' ಪ್ರೀ-ರಿಲೀಸ್‌ ವ್ಯಾಪಾರ ಕಂಡು ಟಾಲಿವುಡ್‌ ದಂಗು!

Akhanda 2 Pre Release Business: ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಸಿನಿಮಾ 'ಅಖಂಡ 2' ಡಿಸೆಂಬರ್ 5 ರಂದು ತೆರೆಗೆ ಬರಲು ಸಿದ್ಧವಾಗಿದೆ. ಬಾಲಯ್ಯ ವೃತ್ತಿ ಬದುಕಿನ ಅತೀ ದುಬಾರಿ ಸಿನಿಮಾವಾದ ಈ ಚಿತ್ರಕ್ಕೆ ₹180 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಭಾರಿ ದಾಖಲೆ ಬರೆದಿದೆ.

Akhanda 2:ಟಾಲಿವುಡ್‌ ಬಾಕ್ಸ್‌ ಆಫೀಸ್‌ಗೆ ಮತ್ತೆ ಕಿಂಗ್‌ ಆಗ್ತಾರಾ ಬಾಲಯ್ಯ?

-

Avinash GR
Avinash GR Dec 2, 2025 8:21 PM

ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾ ʻಅಖಂಡ 2ʼ ಡಿಸೆಂಬರ್‌ 5ರಂದು ತೆರೆಗೆ ಬರಲು ಸಜ್ಜಾಗಿದೆ. ಈ ವರ್ಷ ತೆರೆಗೆ ಬರುತ್ತಿರುವ ಬಾಲಯ್ಯ ನಟನೆಯ ಎರಡನೇ ಸಿನಿಮಾ ಇದು. ವರ್ಷದ ಆರಂಭದಲ್ಲಿ ʻಡಾಕು ಮಹಾರಾಜ್‌ʼ ತೆರೆಕಂಡು ಬಾಕ್ಸ್‌ ಆಫೀಸ್‌ ಉಡೀಸ್‌ ಮಾಡಿತ್ತು. ಇದೀಗ ʻಅಖಂಡ 2ʼ ಮೂಲಕ ಮತ್ತೊಮ್ಮೆ ಅಬ್ಬರಿಸಲು ಬಾಲಯ್ಯ ರೆಡಿಯಾಗಿದ್ದಾರೆ. ಅಂದಹಾಗೆ, ಈ ಸಿನಿಮಾವು ಬಿಡುಗಡೆಗೂ ಮುನ್ನವೇ ದೊಡ್ಡ ದಾಖಲೆ ಬರೆಯುತ್ತಿದೆ.

ದುಬಾರಿ ಬಜೆಟ್‌ ಸಿನಿಮಾ ಇದು

2021ರಲ್ಲಿ ಬಾಲಯ್ಯ ಮತ್ತು ಬೊಯಪಟಿ ಶ್ರೀನು ಕಾಂಬಿನೇಷನ್‌ನಲ್ಲಿ ʻಅಖಂಡʼ ಸಿನಿಮಾ ತೆರೆಗೆ ಬಂದಿತ್ತು. ಆಗ ಕೋವಿಡ್‌ ಎಫೆಕ್ಟ್‌ ಇದ್ದರೂ ಕೂಡ ಅಖಂಡ ಸಿನಿಮಾವು ದೊಡ್ಡ ಗೆಲುವು ಕಂಡಿತ್ತು 100 ಕೋಟಿ ರೂ. ಕಮಾಯಿ ಮಾಡಿತ್ತು. ಆನಂತರ ಇದೇ ಕಾಂಬಿನೇಷನ್‌ನಲ್ಲಿ ಅಖಂಡ 2 ಚಿತ್ರವು ನಿರ್ಮಾಣಗೊಂಡಿದೆ. ಈ ಬಾರಿಯೂ ಕೂಡ ಕಳೆದ ಸಲದಂತೆ ಜಾದೂ ನಡೆಯಲಿದೆಯಾ ಎಂಬುದನ್ನು ಕಾದುನೋಡಬೇಕಿದೆ. ಅಂದಹಾಗೆ, ಅಖಂಡ 2 ಸಿನಿಮಾಕ್ಕೆ 180+ ಕೋಟಿ ರೂ. ಹಣವನ್ನು ಖರ್ಚು ಮಾಡಲಾಗಿದೆಯಂತೆ. ಇದು ಬಾಲಯ್ಯ ವೃತ್ತಿ ಬದುಕಿನ ಅತೀ ದುಬಾರಿ ಸಿನಿಮಾ ಎಂಬುದು ವಿಶೇಷ.

Padma Awards 2025: ನಂದಮೂರಿ ಬಾಲಕೃಷ್ಣ, ಅಜಿತ್ ಕುಮಾರ್ ಸೇರಿದಂತೆ 71 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಧಾನ

ಅಖಂಡ 2 ಪ್ರೀ-ರಿಲೀಸ್‌ ಬ್ಯುಸಿನೆಸ್‌ ಎಷ್ಟು?

ಇನ್ನು, ಅಖಂಡ 2 ಸಿನಿಮಾದ ವಿತರಣಾ ಹಕ್ಕುಗಳು ಬಿಸಿ ಬಿಸಿ ದೋಸೆಯಂತೆ ಖಾಲಿಯಾಗಿವೆ. ತೆಲುಗು ರಾಜ್ಯಗಳಲ್ಲಿಯೇ ಈ ಚಿತ್ರದ ವಿತರಣಾ ಹಕ್ಕುಗಳನ್ನು 100 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆಯಂತೆ. ಕರ್ನಾಟಕದ ಹಕ್ಕುಗಳು 3-4 ಕೋಟಿ ರೂ.ಗಳಿಗೆ ಸೇಲ್‌ ಆಗಿರುವ ಬಗ್ಗೆ ಮಾಹಿತಿ ಇದೆ. ಇನ್ನು, ಒಟ್ಟಾರೆ, ಥಿಯೇಟರಿಕಲ್‌ ರೈಟ್ಸ್‌ನಿಂದಲೇ 120 ಕೋಟಿ ರೂ. ಹಣ ಕಮಾಯಿ ಆಗಿದೆ ಎಂಬ ಮಾಹಿತಿ ಇದೆ. ಇಷ್ಟು ದೊಡ್ಡ ಮೊತ್ತದ ಹೂಡಿಕೆ ವಾಪಸ್‌ ಬರಬೇಕೆಂದರೆ, ಅಖಂಡ 2 ಸಿನಿಮಾವು 250 ಕೋಟಿ ರೂ. ಗಳಿಕೆ ಮಾಡಬೇಕಿದೆ.

ಇನ್ನು, ಈ ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಪ್ಲಿಕ್ಸ್‌ ಪಡೆದುಕೊಂಡಿದ್ದು, ಅದಕ್ಕಾಗಿ ಸುಮಾರು 80 ಕೋಟಿ ರೂ. ಹಣವನ್ನು ನೀಡಿದೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ನಿರ್ಮಾಪಕರಿಗೆ ಹಾಕಿದ ಬಂಡವಾಳದಲ್ಲಿ ಬಹುತೇಕ ಹಣ ರಿಲೀಸ್‌ಗೂ ಮುನ್ನವೇ ವಾಪಸ್‌ ಬಂದಿದೆ ಎಂಬುದು ವಿಶೇಷ. ಬಾಲಯ್ಯ ಕರಿಯರ್‌ನಲ್ಲೇ ಇಷ್ಟು ದೊಡ್ಡಮಟ್ಟದ ವ್ಯವಹಾರ ಆಗಿರುವುದು ಇದೇ ಮೊದಲು.

ಅಖಂಡ 2 ಹೇಗಿದೆ?

ಬಾಲಯ್ಯ ಜೊತೆಗೆ ಸಂಯಕ್ತಾ ಮೆನನ್‌, ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ, ಕಬೀರ್‌ ದುಹಾನ್‌ ಸಿಂಗ್‌, ಅಚ್ಯುತ್‌ ಕುಮಾರ್‌, ಸಾಯಿ ಕುಮಾರ್‌, ವಿಕ್ರಮ್‌ಜಿತ್‌ ವಿರ್ಕ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಥಮನ್‌ ಸಂಗೀತ ನೀಡಿದ್ದು, ರಾಮ್‌ ಅಚಂಡ, ಗೋಪಿ ಅಚಂಟ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಡಬಲ್‌ ಮಾಡಿದೆ.