ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

BAN vs PAK: ಬಾಬರ್‌ ಆಝಮ್‌ ಕ್ರಿಕೆಟ್‌ ಭವಿಷ್ಯ ಅಂತ್ಯ? ಸ್ಪಷ್ಟನೆ ನೀಡಿದ ನಾಯಕ ಶಾಹೀನ್‌ ಅಫ್ರಿದಿ!

BAN vs PAK: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಪಾಕಿಸ್ತಾನ ತಂಡದಿಂದ ಸ್ಟಾರ್‌ ಬ್ಯಾಟ್ಸ್‌ಮನ್‌ ಬಾಬರ್‌ ಆಝಮ್‌ ಅವರನ್ನು ಕೈ ಬಿಡಲಾಗಿತ್ತು. ಇದೀಗ ಮೊದಲನೇ ಏಕದಿನ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ನಾಯಕ ಶಾಹೀನ್‌ ಅಫ್ರಿದಿ, ಬಾಬರ್‌ ಆಝಮ್‌ ಅವರನ್ನು ಕೈ ಬಿಡಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಬಾಬರ್‌ ಆಝಮ್‌ರನ್ನು ಕೈ ಬಿಟ್ಟಿದ್ದೇಕೆಂದು ತಿಳಿಸಿದ ಶಾಹೀನ್‌ ಅಫ್ರಿದಿ!

ಬಾಬರ್‌ ಆಝಮ್‌ ಕೈಬಿಟ್ಟಿದ್ದಕ್ಕೆ ಕಾರಣ ತಿಳಿಸಿದ ಶಾಹೀನ್‌ ಅಫ್ರಿದಿ. -

Profile
Ramesh Kote Mar 10, 2026 11:16 PM

ನವದೆಹಲಿ: ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ(BAN vs PAK) ಯುವ ಆಟಗಾರರಿಗೆ ಸಮಾನ ಅವಕಾಶ ನೀಡಲು ಪಾಕಿಸ್ತಾನ ತಂಡ ಬಾಬರ್ ಆಝಮ್ (Babar Azam) ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಶಾಹೀನ್ ಶಾ (Shaheen Afridi) ಆಫ್ರಿದಿ ಹೇಳಿದ್ದಾರೆ. 2027ರ ಏಕದಿನ ವಿಶ್ವಕಪ್ ಅನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸರಣಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಬಾಬರ್ ಆಝಮ್, ಸೈಮ್ ಆಯುಬ್ ಮತ್ತು ನಸೀಮ್ ಶಾ ಅವರನ್ನು ತಂಡದಿಂದ ಹೊರಗಿಟ್ಟು, ಆರು ಮಂದಿ ಯುವ ಆಟಗಾರರನ್ನು ಆಯ್ಕೆ ಮಾಡಿದೆ.

ಸೋಮವಾರ ಮುಖ್ಯ ಕೋಚ್ ಮೈಕ್ ಹೇಸನ್ ಕೂಡ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದು, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದರು. ನಾಯಕ ಶಾಹೀನ್‌ ಆಫ್ರಿದಿ ಕೂಡ ಹೇಸನ್ ಅವರ ಮಾತುಗಳಿಗೆ ಬೆಂಬಲ ಸೂಚಿಸಿ, ಈ ಸರಣಿ ಹೊಸ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ ಟ್ರೋಫಿ ಕೇವಲ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಎಂದ ಕೀರ್ತಿ ಆಜಾದ್‌ಗೆ ಹರ್ಭಜನ್‌ ಸಿಂಗ್‌ ತಿರುಗೇಟು!

“ನೋಡಿ, ಈ ಸರಣಿಗಾಗಿ ಯಾರನ್ನೂ ತಂಡದಿಂದ ಕೈಬಿಟ್ಟಿಲ್ಲ. ನಾವು ಕೇವಲ ಕೆಲ ಯುವ ಆಟಗಾರರಿಗೆ ಅವಕಾಶ ನೀಡಲು ಬಯಸಿದ್ದೇವೆ, ಏಕೆಂದರೆ ಅವರು ಕೂಡ ತಂಡದ ಭವಿಷ್ಯವಾಗಿದ್ದಾರೆ,” ಎಂದು ಶಾಹೀನ್ ಅಫ್ರಿದಿ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

“ವಿಶೇಷವಾಗಿ ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅವರಿಗೆ (ಯು ಆಟಗಾರರಿಗೆ) ಅವಕಾಶ ನೀಡಲು ನಾವು ಬಯಸುತ್ತೇವೆ. ಸಮಯ ಬಂದಾಗ ಅವರು ತಮ್ಮ ಪಾತ್ರವನ್ನು ಮತ್ತು ಮುಂದಿರುವ ಸವಾಲುಗಳನ್ನು ಅರಿತುಕೊಳ್ಳುತ್ತಾರೆ," ಎಂದು ತಿಳಿಸಿದ್ದಾರೆ.

T20 World Cup: ವಿಧಿವಶರಾದ ತಮ್ಮ ತಂದೆಗೆ ಭಾವನಾತ್ಮಕ ಸಂದೇಶ ರವಾನಿಸಿದ ರಿಂಕು ಸಿಂಗ್‌!

“ಈಗ ನಮ್ಮ ತಂಡವನ್ನು ಏಕದಿನ ವಿಶ್ವಕಪ್‌ ಟೂರ್ನಿಗೆ ಸಿದ್ಧಪಡಿಸುವುದು ಮುಖ್ಯ. ಯುವ ಆಟಗಾರರು ಮೈದಾನಕ್ಕೆ ತೆರಳಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಉತ್ತಮ ಅವಕಾಶ,” ಎಂದು ನಾಯಕ ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ.

ಮೂರು ಮಂದಿಗೆ ಪದಾರ್ಪಣೆಗೆ ಅವಕಾಶ

ಆರು ಮಂದಿ ಅನ್‌ಕ್ಯಾಪ್ಡ್‌ ಆಟಗಾರರಲ್ಲಿ ಸಾಹಿಬ್‌ಜಾದಾ ಫರ್ಹಾನ್, ಮಾಜ್ ಸದಾಕತ್ ಮತ್ತು ಶಮಿಲ್ ಹುಸೇನ್ ಮಾರ್ಚ್ 11 ರಂದು ಬುಧವಾರ ಮಿರ್ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ತಮ್ಮ ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಾಹೀನ್‌ ಅಫ್ರಿದಿ ಸ್ಪಷ್ಟಪಡಿಸಿದ್ದಾರೆ.

T20 World Cup: ಡ್ಯಾರಿಲ್‌ ಮಿಚೆಲ್‌ಗೆ ಚೆಂಡಿನಿಂದ ಥ್ರೋ ಹೊಡೆದ ಅರ್ಷದೀಪ್‌ ಸಿಂಗ್‌ಗೆ ದಂಡ!

ಸಾಹಿಬ್‌ಜಾದಾ ಫರ್ಹಾನ್ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರು ಇನಿಂಗ್ಸ್‌ಗಳಲ್ಲಿ ಅವರು 76.60ರ ಸರಾಸರಿಯಲ್ಲಿ ಹಾಗೂ 160.25ರ ಸ್ಟ್ರೈಕ್‌ರೇಟ್‌ನೊಂದಿಗೆ ಒಟ್ಟು 383 ರನ್‌ಗಳನ್ನು ಗಳಿಸಿದರು. ಈ ವೇಳೆ ನಮೀಬಿಯಾ ಮತ್ತು ಶ್ರೀಲಂಕಾ ವಿರುದ್ಧ ಶತಕಗಳನ್ನು ಸಿಡಿಸಿ, ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್‌ಗಳ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದರು. ಐಸಿಸಿ ಟಿ20ಐ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ಅವರು ಎರಡನೇ ಸ್ಥಾನವನ್ನು ಪಡೆದರು.