Neena Gupta: 66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ವದಂತಿ ಬಗ್ಗೆ ನಟಿ ಹೇಳಿದ್ದೇನು?
Neena Gupta: ಬಾಲಿವುಡ್ನ ಹಿರಿಯ ನಟಿ ನೀನಾ ಗುಪ್ತಾ 66ನೇ ವಯಸ್ಸಿನಲ್ಲಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹೈದರಾಬಾದ್‌ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಗುಪ್ತಾ ಭಾಗವಹಿಸಿದ ನಂತರ, ಫೋಟೋಗಳು ಮತ್ತು ವೀಡಿಯೊಗಳಲ್ಲಿ ನಟಿಗೆ ಬೇಬಿ ಬಂಪ್ ಬಂದಿದೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಯ್ತು. ಈ ಎಲ್ಲಾ ಮಾತುಗಳಿಗೆ ಇದೀಗ ನಟಿ ಸತ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನೀನಾ ಗುಪ್ತ -
ಬಾಲಿವುಡ್ನ ಹಿರಿಯ ನಟಿ (Bollywood) ನೀನಾ ಗುಪ್ತಾ (Neena Gupta) 66ನೇ ವಯಸ್ಸಿನಲ್ಲಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹೈದರಾಬಾದ್‌ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹ ಆರತಕ್ಷತೆಯಲ್ಲಿ ಗುಪ್ತಾ ಭಾಗವಹಿಸಿದ ನಂತರ, ಫೋಟೋಗಳು ಮತ್ತು ವೀಡಿಯೊಗಳಲ್ಲಿ ನಟಿಗೆ ಬೇಬಿ ಬಂಪ್ (Baby Bump) ಬಂದಿದೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಯ್ತು. ಈ ಎಲ್ಲಾ ಮಾತುಗಳಿಗೆ ಇದೀಗ ನಟಿ ಸತ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸಮಾಜ ಅಭಿವೃದ್ಧಿಯಾಗುತ್ತಿದೆ
“ಇದು ಯಾವ ‘ಬಧಾಯಿ ಹೋ’ ಅಲ್ಲ. ನಾನು ಪ್ರೆಗ್ನೆಂಟ್ ಅಲ್ಲ. ಆ ದಿನ ನಾನು ಹಾಕಿದ್ದ ಸೀರೆಯ ಮೆಟೀರಿಯಲ್ ತುಂಬಾ ದಪ್ಪವಾಗಿತ್ತು. ಅದರಿಂದ ನಾನು ಸ್ವಲ್ಪ ದಪ್ಪಾಗಿ ಕಾಣಿಸಿಕೊಂಡೆ’ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಅವರು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿ, “ನನ್ನ ಈ ವಯಸ್ಸಿನಲ್ಲಿ ಪ್ರೆಗ್ನೆನ್ಸಿ ಬಗ್ಗೆ ನಡೆಯುತ್ತಿರುವ ಎಲ್ಲಾ ಊಹಾಪೋಹಗಳು ಇಷ್ಟವೇ ಆಗಿದೆ. ಇದು ನಮ್ಮ ಸಮಾಜ ಅಭಿವೃದ್ಧಿಯಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದು ತಿವಿದಿದ್ದಾರೆ.
ಇದನ್ನೂ ಓದಿ: Amruthadhaare Serial: ಮಲ್ಲಿ ಸಪೋರ್ಟ್‌ಗೆ ನಿಂತ ಗೌತಮ್ ದಿವಾನ್! ಜೈದೇವ್ ಕಥೆ ಏನು?
ವದಂತಿ ಹಬ್ಬಿದ್ದೇಗೆ?
ಆರತಕ್ಷತೆಯ ತುಣುಕುಗಳು ಮತ್ತು ಛಾಯಾಚಿತ್ರಗಳು ವೈರಲ್ ಆದ ನಂತರ ಈ ಊಹಾಪೋಹ ಮೊದಲು ಹೊರಹೊಮ್ಮಿತು. ಹಲವಾರು ಪೋಸ್ಟ್‌ಗಳಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿ ಗರ್ಭಿಣಿಯಾಗಿ ಕಾಣುತ್ತಿದ್ದಾರೆಯೇ ಎಂದು ಚರ್ಚಿಸಿದರು.
66-Year-Old Neena Gupta: Pregnant?! Her SHOCKING Response Revealed!
— Dekhna Zaroori Hai (@BollyMirch) March 12, 2026
Dekhna Zaroori Hai
Visit: https://t.co/aB0W03A5yd
Watch: https://t.co/ch3Py9Hudk#NeenaGupta #DekhnaZarooriHai #Neena_Gupta #Bollywood_actress #celebrity_controversy #pregnancy_rumors #DZH #Badhaai_Ho pic.twitter.com/Cmp6t8kxfc
ವಿಶೇಷವೆಂದರೆ, ನೀನಾ ಗುಪ್ತಾ ಹಿಂದೆ ನಟಿಸಿದ್ದ ಜನಪ್ರಿಯ ಹಿಂದಿ ಸಿನಿಮಾ ಬದಾಯಿ ಹೊನಲ್ಲಿ ಮಧ್ಯವಯಸ್ಸಿನ ಮಹಿಳೆ ಗರ್ಭಿಣಿಯಾಗುವ ಪಾತ್ರದಲ್ಲಿ ನಟಿಸಿದ್ದರು. ಇದೇ ಕಾರಣದಿಂದ ಈಗಿನ ವದಂತಿಗಳನ್ನು ಕೆಲವರು ‘ರಿಯಲ್ ಲೈಫ್ ಬಧಾಯಿ ಹೋ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು.
ಗುಪ್ತಾ ತಮ್ಮ ವೈಯಕ್ತಿಕ ಪ್ರಯಾಣದ ಬಗ್ಗೆ ಮುಕ್ತವಾಗಿ ಮಾತನಾಡುವುದಕ್ಕೆ ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದ್ದಾರೆ. 1980 ರ ದಶಕದಲ್ಲಿ, ಮಾಜಿ ಕ್ರಿಕೆಟಿಗ ವಿವ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧ ಮತ್ತು ಅವರ ಮಗಳು ಮಸಾಬಾ ಗುಪ್ತಾಳನ್ನು ಒಂಟಿ ತಾಯಿಯಾಗಿ ಬೆಳೆಸಿದ್ದಕ್ಕಾಗಿ ಅವರು ಸುದ್ದಿಯಾಗಿದ್ದರು.
ವರ್ಷಗಳ ನಂತರ, ಅವರು 2008 ರಲ್ಲಿ ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು . ಜೀವನದ ಆಯ್ಕೆಗಳು, ವೃತ್ತಿ ಹೋರಾಟಗಳು ಮತ್ತು ತಾಯ್ತನದ ಬಗ್ಗೆ ಚರ್ಚಿಸುವ ಅವರ ವಿಧಾನವು ಇಂದಿಗೂ ಚರ್ಚೆಯಾಗುತ್ತದೆ.
ಇದನ್ನೂ ಓದಿ: Varalaxmi Sarathkumar: ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ; ನಟಿ ವರಲಕ್ಷ್ಮಿ ಶರತ್‌ಕುಮಾರ್
ನೆಗೆಟಿವ್ ರೋಲ್‌ಗಳಲ್ಲಿ ಆರಂಭದಲ್ಲಿ ನೀನಾ ಮಿಂಚಿದ್ದರು. ಮುಂದೆ ಅದಕ್ಕೆ ಬ್ರ್ಯಾಂಡ್ ಆಗಿಬಿಟ್ಟಿದ್ದರು. 1982ರಲ್ಲಿ ಬಂದಿದ್ದ 'ಸಾಥ್ ಸಾಥ್' ಆಕೆ ನಟಿಸಿದ ಮೊದಲ ಸಿನಿಮಾ. ಮುಂದೆ 'ಜಾನೆ ಭಿ ದೋ ಯಾರೋ', 'ಗಾಂಧಿ', 'ಉತ್ಸವ್', 'ಲೈಲಾ', 'ಸ್ವರ್ಗ್', 'ಬಲ್ವಾನ್', 'ಖಳ್‌ನಾಯಕ್' ಹೀಗೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕಿರುತೆರೆ ಕಾರ್ಯಕ್ರಮಗಳು ಮಾತ್ರವಲ್ಲ ಇತ್ತೀಚೆಗೆ ವೆಬ್ ಸೀರಿಸ್‌ನಲ್ಲಿ ಕೂಡ ನೀನಾ ಗುಪ್ತಾ ನಟಿಸುತ್ತಿದ್ದಾರೆ.