Vijay Sethupathi: ಇಂಟರ್ನ್ಯಾಷನಲ್ ಆ್ಯಮಿ ಪ್ರಶಸ್ತಿ ಪ್ರದಾನ ಮಾಡಲಿರುವ ವಿಜಯ್ ಸೇತುಪತಿ
Vijay Sethupathi: ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathy) ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದ್ದಾರೆ. 2026ರ ನವೆಂಬರ್ 23ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ 54ನೇ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ (First Indian Presenter At International Emmy Awards) ಅವರು ಪ್ರಶಸ್ತಿ ಪ್ರದಾನ ಮಾಡುವ ನಿರೂಪಕರಲ್ಲಿ ಒಬ್ಬರಾಗಿ ಭಾಗವಹಿಸಲಿದ್ದಾರೆ.
ವಿಜಯ್ ಸೇತುಪತಿ -
ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathy) ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದ್ದಾರೆ. 2026ರ ನವೆಂಬರ್ 23ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ 54ನೇ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ (First Indian Presenter At International Emmy Awards) ಅವರು ಪ್ರಶಸ್ತಿ ಪ್ರದಾನ ಮಾಡುವ ನಿರೂಪಕರಲ್ಲಿ ಒಬ್ಬರಾಗಿ ಭಾಗವಹಿಸಲಿದ್ದಾರೆ.
ಈ ಮೂಲಕ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿರುವ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಸೇತುಪತಿ ಪಾತ್ರರಾಗಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಲಾವಿದರ ಪ್ರತಿಭೆಗೆ ಮತ್ತೊಂದು ಗೌರವ ದೊರೆತಂತಾಗಿದೆ.
ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಲಾವಿದರ ಸಾಧನೆ
ಈ ಹಿಂದೆ 2016ರಲ್ಲಿ ನಡೆದ 68ನೇ ಪ್ರೈಮ್ಟೈಮ್ ಆ್ಯಮಿ ಪ್ರಶಸ್ತಿ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ನಟ ಟಾಮ್ ಹಿಡಲ್ಸ್ಟನ್ ಜೊತೆಗೂಡಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಲಾಸ್ ಏಂಜಲೀಸ್ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇನ್ನು ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ವೇದಿಕೆಯಲ್ಲಿ ಭಾರತೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವಲ್ಲಿ ನಿರ್ಮಾಪಕಿ ಹಾಗೂ ಅಂತಾರಾಷ್ಟ್ರೀಯ ಟೆಲಿವಿಷನ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಅಕಾಡೆಮಿಯ ಮಂಡಳಿ ಸದಸ್ಯೆ ಕವಿತಾ ಗುಪ್ತಾ ಅವರ ಪಾತ್ರವೂ ಗಮನಾರ್ಹವಾಗಿದೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲೋದು ಯಾರು?
2023ರಲ್ಲಿ ತಮ್ಮ ಕಾಮಿಡಿ ಸ್ಪೆಷಲ್ 'ವೀರ್ ದಾಸ್: ಲ್ಯಾಂಡಿಂಗ್'ಗಾಗಿ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಪ್ರಶಸ್ತಿ ಗೆದ್ದಿದ್ದ ವೀರ್ ದಾಸ್ ಅವರಿಗೆ 2024ರ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭವನ್ನು ನಿರೂಪಿಸುವ ಅವಕಾಶ ದೊರಕಿಸಿಕೊಟ್ಟವರೂ ಕವಿತಾ ಗುಪ್ತಾ ಅವರೇ.
ವಿಜಯ್ ಸೇತುಪತಿಯ ಮುಂದಿನ ಸಿನಿಮಾಗಳೇನು?
ವಿಜಯ್ ಸೇತುಪತಿ ಕೊನೆಯದಾಗಿ 'ಬತ್ತಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.1986ರ ಮದ್ರಾಸ್ ಹಿನ್ನೆಲೆಯ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಭಯಾನಕ ಗ್ಯಾಂಗ್ಸ್ಟರ್ ಬತ್ತಾ ಪಾತ್ರದಲ್ಲಿ ನಟಿಸಿದ್ದಾರೆ. ಆಕಸ್ಮಿಕವಾಗಿ ಎಂಟು ವರ್ಷದ ಬಾಲಕನೊಬ್ಬ ಆತನನ್ನು ಖಾಲಿ ಶಾಲೆಯ ಶೌಚಾಲಯದೊಳಗೆ ಬಂಧಿಸುವ ಘಟನೆ ಕಥೆಗೆ ತಿರುವು ನೀಡುತ್ತದೆ.
ಆ ಬಾಲಕನೊಂದಿಗೆ ಕಾಲ ಕಳೆಯುವ ಸಂದರ್ಭದಲ್ಲಿ ಗ್ಯಾಂಗ್ಸ್ಟರ್ನ ಜೀವನದ ದೃಷ್ಟಿಕೋನ ಬದಲಾಗುತ್ತದೆ. ಬಾಲಕನೊಂದಿಗಿನ ಒಡನಾಟ ಆತನಲ್ಲಿರುವ ಮೃದು ಸ್ವಭಾವವನ್ನು ಹೊರತರುತ್ತದೆ.
ಇದೀಗ ವಿಜಯ್ ಸೇತುಪತಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮಾ 'ಇಂಜಿ ವೆಳ್ಳಂ' ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಲಿವುಡ್ಗೆ ರಿಮೇಕ್ ಆಗಲಿದೆ ವಿಜಯ್ ಸೇತುಪತಿಯ 'ಮಹಾರಾಜ'!
ವಿಜಯ್ ಸೇತುಪತಿ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಇದೆ. 2024ರಲ್ಲಿ ಬಿಡುಗಡೆಯಾಗಿ ಭಾರಿ ಗಮನ ಸೆಳೆದಿದ್ದ ಅವರ 'ಮಹಾರಾಜ' ಸಿನಿಮಾ ಇದೀಗ ಹಾಲಿವುಡ್ನಲ್ಲಿ ರಿಮೇಕ್ ಆಗುವ ಸಾಧ್ಯತೆಯಿದೆ. ಚೀನಾದಲ್ಲಿ ಉತ್ತಮ ಪ್ರದರ್ಶನ ಕಂಡ ಬಳಿಕ ಈ ಚಿತ್ರದ ಮೇಲೆ ಹಾಲಿವುಡ್ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ. ಚಿತ್ರದ ರಿಮೇಕ್ ಹಕ್ಕುಗಳಿಗಾಗಿ ನಿರ್ಮಾಪಕರನ್ನು ಸಂಪರ್ಕಿಸಿದ್ದು, ಪ್ರಮುಖ ಹಾಲಿವುಡ್ ನಟರೊಬ್ಬರನ್ನು ಚಿತ್ರಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.
ನಿರ್ಮಾಪಕ ಸುಧನ್ ಸುಂದರಂ ಅವರು 'ದಿ ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.ಚೀನಾದಲ್ಲಿ 'ಮಹಾರಾಜ' ಚಿತ್ರ ಬಾಕ್ಸ್ ಆಫೀಸ್ ಹಾಗೂ ಒಟಿಟಿ ವೇದಿಕೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಚೀನಾದಲ್ಲಿ ಚಿತ್ರ ಸುಮಾರು ₹91.65 ಕೋಟಿ ಗಳಿಸಿದೆ. ಇದರ ಬೆನ್ನಲ್ಲೇ ಹಾಲಿವುಡ್ ಸಂಸ್ಥೆಯೊಂದು ರಿಮೇಕ್ ಹಕ್ಕುಗಳಿಗಾಗಿ ಸಂಪರ್ಕಿಸಿದೆ ಎಂದು ಸುಧನ್ ತಿಳಿಸಿದ್ದಾರೆ.
ಹಾಲಿವುಡ್ನ ಎ-ಲಿಸ್ಟ್ ನಟರೊಬ್ಬರನ್ನು ಈ ಯೋಜನೆಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷ ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಮ್ಯಾಥ್ಯೂ ಮೆಕನಾಘೆ ನಟಿಸಲಿದ್ದಾರಾ?
'ಮಹಾರಾಜ' ಹಾಲಿವುಡ್ ರಿಮೇಕ್ನಲ್ಲಿ ಖ್ಯಾತ ನಟ ಮ್ಯಾಥ್ಯೂ ಮೆಕನಾಘೆ ನಟಿಸಲಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಈ ಕುರಿತು ಪ್ರತಿಕ್ರಿಯಿಸಿರುವ ನಿರ್ಮಾಪಕ ಸುಧನ್ ಸುಂದರಂ, ಮ್ಯಾಥ್ಯೂ ಮೆಕನಾಘೆ ಅವರನ್ನು ಸಂಪರ್ಕಿಸುತ್ತಿರುವ ನಟರ ಪಟ್ಟಿಯಲ್ಲಿ ಇರಬಹುದು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲು ಸಂಬಂಧಪಟ್ಟ ಹಾಲಿವುಡ್ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಸದ್ಯ ಚಿತ್ರದ ಪಾತ್ರವರ್ಗ ಅಥವಾ ನಿರ್ಮಾಣ ಸಂಸ್ಥೆಯ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಯೋಜನೆಯ ರೂಪುರೇಷೆಗಳು ಇನ್ನೂ ಸಿದ್ಧವಾಗುತ್ತಿವೆ.
ಇದನ್ನೂ ಓದಿ: Ramayana box office: ‘ಆದಿಪುರುಷ್’ ದಾಖಲೆ ಹಿಂದಿಕ್ಕಲು ವಿಫಲ! ‘ರಾಮಾಯಣ’ ಕಲೆಕ್ಷನ್ ಎಷ್ಟು?
ಒಟ್ಟಿನಲ್ಲಿ, ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಅವಕಾಶ, ಮಣಿರತ್ನಂ ನಿರ್ದೇಶನದ ಹೊಸ ಸಿನಿಮಾ ಹಾಗೂ 'ಮಹಾರಾಜ' ಚಿತ್ರದ ಹಾಲಿವುಡ್ ರಿಮೇಕ್ ಬೆಳವಣಿಗೆಗಳು ವಿಜಯ್ ಸೇತುಪತಿ ಅವರ ವೃತ್ತಿಜೀವನಕ್ಕೆ ಮತ್ತಷ್ಟು ಗಮನ ಸೆಳೆಯುತ್ತಿವೆ.