ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranji Trophy: ಮಧ್ಯಪ್ರದೇಶ ವಿರುದ್ಧ 9 ವಿಕೆಟ್ ಪಡೆದು 59 ವರ್ಷಗಳ ಹಳೆಯ ದಾಖಲೆ ಮುರಿದ ಹರ್ಷ್‌ ದುಬೆ!

ರಣಜಿ ಟ್ರೋಫಿ ಟೂರ್ನಿಯ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ವಿದರ್ಭ ತಂಡದ ಹರ್ಷ್‌ ದುಬೆ 53 ರನ್ ನೀಡಿ 9 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ವಿದರ್ಭ ಪರ ಇನಿಂಗ್ಸ್‌ವೊಂದರಲ್ಲಿ ಒಂಬತ್ತು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. 59 ವರ್ಷಗಳ ಹಿಂದಿನ ಅರುಣ್ ಒಗಿರಾಲ್ ಅವರ ದಾಖಲೆಯನ್ನೂ ಮುರಿದಿದ್ದಾರೆ.

9 ವಿಕೆಟ್ ಕಿತ್ತು 59 ವರ್ಷಗಳ ಹಳೆಯ ದಾಖಲೆ  ಮುರಿದ ಹರ್ಷ್‌ ದುಬೆ!

9 ವಿಕೆಟ್‌ ಕಿತ್ತು 59 ವರ್ಷಗಳ ಹಳೆಯ ದಾಖಲೆ ಮುರಿದ ಹರ್ಷ್‌ ದುಬೆ. -

Profile
Ramesh Kote Nov 2, 2026 9:35 PM

ನಾಗ್ಪುರ: ರಣಜಿ ಟ್ರೋಫಿ 2026-27ರ ಸಾಲಿನ (Ranji Trophy 2026-27) ಟೂರ್ನಿಯ ಮಧ್ಯ ಪ್ರದೇಶ ವಿರುದ್ಧದ ಪಂದ್ಯದಲ್ಲಿ ವಿದರ್ಭ ತಂಡದ ಎಡಗೈ ಸ್ಪಿನ್ನರ್ ಹರ್ಷ್ ದುಬೆ (Harsh Dubey) ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನಾಗ್ಪುರದಲ್ಲಿ ನಡೆಯುತ್ತಿರುವ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಒಂದೇ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಬಳಿಸುವ ಮೂಲಕ ಹರ್ಷ್‌, 59 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ನವೆಂಬರ್ 2ರಂದು ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮಧ್ಯಪ್ರದೇಶ ತಂಡವನ್ನು ಕೇವಲ 209 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಹರ್ಷ್ ದುಬೆ ಪ್ರಮುಖ ಪಾತ್ರ ವಹಿಸಿದರು. ಅವರು 23.1 ಓವರ್‌ಗಳಲ್ಲಿ 53 ರನ್ ನೀಡಿ 9 ವಿಕೆಟ್ ಪಡೆದರು. ಇದರಲ್ಲಿ ನಾಲ್ಕು ಮೇಡನ್ ಓವರ್‌ಗಳೂ ಸೇರಿವೆ.

ಶಿವಂ ದುಬೆ ಏನು ತಪ್ಪು ಮಾಡಿದ್ರು? ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಆಕಾಶ್‌ ಚೋಪ್ರಾ ಆಕ್ರೋಶ!

ವಿದರ್ಭ ಪರ ಹೊಸ ದಾಖಲೆ

ಈ ಪಂದ್ಯಕ್ಕೂ ಮುನ್ನ ರಣಜಿ ಟ್ರೋಫಿಯಲ್ಲಿ ವಿದರ್ಭ ಪರ ಅತ್ಯುತ್ತಮ ಬೌಲಿಂಗ್ ದಾಖಲೆ ಅರುಣ್ ಒಗಿರಾಲ್ ಅವರ ಹೆಸರಿನಲ್ಲಿತ್ತು. ಅವರು 1967-68ರ ಋತುವಿನಲ್ಲಿ ಮಧ್ಯಪ್ರದೇಶ ವಿರುದ್ಧವೇ 39 ರನ್ ನೀಡಿ 8 ವಿಕೆಟ್ ಪಡೆದಿದ್ದರು. ಇದೀಗ ಹರ್ಷ್ ದುಬೆ 9 ವಿಕೆಟ್ ಪಡೆಯುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.

ರಣಜಿ ಟ್ರೋಫಿ ಇತಿಹಾಸದಲ್ಲಿ ವಿದರ್ಭ ಪರ ಏಕೈಕ ಇನಿಂಗ್ಸ್‌ನಲ್ಲಿ 9 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಒಟ್ಟಾರೆ ರಣಜಿ ಟ್ರೋಫಿ ಇತಿಹಾಸದಲ್ಲಿ ಇನಿಂಗ್ಸ್‌ವೊಂದರಲ್ಲಿ ಒಂಬತ್ತು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ 30ನೇ ಬೌಲರ್ ಎನಿಸಿಕೊಂಡಿದ್ದಾರೆ.

IND vs NZ: ರೋಹಿತ್‌-ಗಿಲ್‌ ಓಪನರ್ಸ್‌, ಮೊದಲನೇ ಒಡಿಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಮಧ್ಯಪ್ರದೇಶದ ಬ್ಯಾಟಿಂಗ್‌ಗೆ ದುಬೆ ಬ್ರೇಕ್

ಮಧ್ಯಪ್ರದೇಶ ತಂಡದ ಪರ ಅಥರ್ವ ಮಹಾಜನ್ ಮಾತ್ರ ಉತ್ತಮ ಪ್ರತಿರೋಧ ತೋರಿದರು. ಅವರು 123 ಎಸೆತಗಳಲ್ಲಿ 85 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸಾರಾಂಶ್ ಜೈನ್ 34 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ಹರ್ಷ್ ದುಬೆ ಸ್ಪಿನ್ ದಾಳಿಯನ್ನು ಎದುರಿಸಲು ವಿಫಲರಾದರು.

ಮಧ್ಯಪ್ರದೇಶದ ನಾಯಕ ರಜತ್ ಪಾಟೀದಾರ್ ಕೇವಲ 2 ರನ್ ಗಳಿಸಿ ದುಬೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಶಾರ್ದೂಲ್, ಶುಭಂ ಶರ್ಮಾ, ಅರ್ಷದ್ ಖಾನ್ ಸೇರಿದಂತೆ ಪ್ರಮುಖ ಆಟಗಾರರೂ ಅವರ ಬೌಲಿಂಗ್‌ಗೆ ಬಲಿಯಾದರು. ನಚಿಕೇತ್ ಭೂತೆ ಮಧ್ಯಪ್ರದೇಶದ ಮೊದಲ ವಿಕೆಟ್ ಪಡೆದರೆ, ಉಳಿದ ಒಂಬತ್ತು ವಿಕೆಟ್‌ಗಳನ್ನು ದುಬೆ ತಮ್ಮ ಖಾತೆಗೆ ಸೇರಿಸಿಕೊಂಡರು.

ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಗೆ ಭಾರತ ಎ ತಂಡ ಪ್ರಕಟ, ತಿಲಕ್‌ ವರ್ಮಾಗೆ ನಾಯಕತ್ವ!

ಭಾರತ ತಂಡದ ಆಯ್ಕೆಗಾರರ ಗಮನ ಸೆಳೆದ ಹರ್ಷ್ ದುಬೆ

2024-25ರ ರಣಜಿ ಟ್ರೋಫಿ ಋತುವಿನಲ್ಲಿ ಹರ್ಷ್ ದುಬೆ ಅದ್ಭುತ ಪ್ರದರ್ಶನ ನೀಡಿದ್ದರು. ವಿದರ್ಭ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಒಂದೇ ಋತುವಿನಲ್ಲಿ 69 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಇದರ ಜೊತೆಗೆ 476 ರನ್ ಗಳಿಸಿ ಆಲ್‌ರೌಂಡರ್ ಆಗಿಯೂ ತಮ್ಮ ಸಾಮರ್ಥ್ಯ ತೋರಿಸಿದ್ದರು.

2026ರಲ್ಲಿ ಭಾರತ ತಂಡದ ಪರ ಅಫ್ಘಾನಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ದುಬೆ, ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು. ಇದೀಗ ದೇಶಿ ಕ್ರಿಕೆಟ್‌ನಲ್ಲಿ ಮತ್ತೊಂದು ಅಮೋಘ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ತಂಡದಲ್ಲಿಯೂ ಅವಕಾಶ ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.

ಈ ಪಂದ್ಯದಲ್ಲಿ ವಿದರ್ಭ ತಂಡದ ಮೊದಲ ಇನಿಂಗ್ಸ್ ಕೂಡ ಆರಂಭವಾಗಿದ್ದು, ದಿನದಾಟದ ಅಂತ್ಯಕ್ಕೆ 23 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 56 ರನ್ ಗಳಿಸಿತ್ತು. ಹೀಗಾಗಿ ಮಧ್ಯಪ್ರದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ ಇನ್ನೂ 153 ರನ್‌ಗಳ ಮುನ್ನಡೆ ಹೊಂದಿತ್ತು.