ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada: ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ

Bigg Boss Kannada: ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ. ಇನ್ನು 3 ದಿನ ಮಾತ್ರ ಬಾಕಿ ಇದೆ. ಆದ್ದರಿಂದ ಬೇಗ ಆಡಿಷನ್​ ಕೊಡುವಂತೆ ವಾಹಿನಿ ಹೇಳಿದೆ.

ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jun 18, 2026 9:20 PM

ಬಿಗ್​ಬಾಸ್​ 12ರ (Bigg Boss Kannada 12) ಹವಾ ಸ್ವಲ್ಪ ತಣ್ಣಗಾಗುತ್ತಾ ಬರುವಾಗಲೇ ಕಲರ್ಸ್ ವಾಹಿನಿ ಬಿಗ್​ಬಾಸ್​ 13ರನ್ನು ಘೋಷಣೆ ಮಾಡಿದೆ. ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ (Social Media) ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ (Colors Kannada) ಸ್ಪಷ್ಟಪಡಿಸಿದೆ. ಇನ್ನು 3 ದಿನ ಮಾತ್ರ ಬಾಕಿ ಇದೆ. ಆದ್ದರಿಂದ ಬೇಗ ಆಡಿಷನ್​ ಕೊಡುವಂತೆ ವಾಹಿನಿ ಹೇಳಿದೆ.

ಬಿಗ್ ಬಾಸ್ ಆಡಿಷನ್‌ಗೆ ವೀಡಿಯೋ ಕಳುಹಿಸಲು ಜೂನ್ 21 ಕೊನೆಯ ದಿನ! ಭಾಗವಹಿಸುವ ವಿಧಾನ ಇಲ್ಲಿದೆ

ಇದನ್ನೂ ಓದಿ: Suhasini Mulay: ಫೇಸ್‌ಬುಕ್‌ನಲ್ಲಿ ಪರಿಚಯ; 60ನೇ ವಯಸ್ಸಿನಲ್ಲಿ ಮದುವೆಯಾದ ʻಲಗಾನ್‌ʼ ನಟಿ

ಬಿಗ್ ಬಾಸ್ ಆಡಿಷನ್‌ನಲ್ಲಿ ಭಾಗವಹಿಸಲು colorskannada.jiostar.com ಗೆ ಭೇಟಿ ನೀಡಿ

  1. ಮೊಬೈಲ್ ನಂಬರ್ ನಮೂದಿಸಿ OTP ಮೂಲಕ ವೆರಿಫೈ ಮಾಡಿ
  2. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, 50 MB ಒಳಗಿನ ಮತ್ತು 3 ನಿಮಿಷಗಳಿಗಿಂತ ಕಡಿಮೆ ಅವಧಿಯ ವೀಡಿಯೋ ಅಪ್‌ಲೋಡ್ ಮಾಡಿ.
  3. Consent Form ಭರ್ತಿ ಮಾಡಿ, Submit Your Audition ಕ್ಲಿಕ್ ಮಾಡಿ.

‘ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?’ ಎಂದು ‘ಕಲರ್ಸ್ ಕನ್ನಡ’ ವಾಹಿನಿ ಕೇಳುತ್ತಿದೆ. ‘ನಮಸ್ತೆ ಕರ್ನಾಟಕ.. ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶವನ್ನು ನೀಡುತ್ತಿದ್ದಾರೆ ಬಿಗ್ ಬಾಸ್. ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋದಕ್ಕೆ ಸಿದ್ಧರಾಗಿದ್ದೀರಾ? ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ’ ಎಂದು ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ.

ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬೇಕು ಅಂತ ಬಯಸುವವರು ಇನ್‌ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡಿದರೆ ಮಾತ್ರ ಸಾಲದು. ಅದಕ್ಕೆ ಸೂಕ್ತವಾದ ಅಧಿಕೃತ ಮಾರ್ಗವನ್ನು ಅನುಸರಿಸಬೇಕು. ಈ ಸುವರ್ಣಾವಕಾಶ ಕೈತಪ್ಪಬಾರದು ಎಂದರೆ ಆಡಿಷನ್ ಪ್ರಕ್ರಿಯೆಯನ್ನು ಅಧಿಕೃತ ಚಾನೆಲ್ ಮೂಲಕವೇ ಪೂರ್ಣಗೊಳಿಸಬೇಕು.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ವಾಹಿನಿಯಿಂದ ವಿಶೇಷ ಸೂಚನೆ!

ಕೇವಲ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ಟ್ಯಾಗ್ ಮಾಡುವುದರಿಂದ ನಿಮ್ಮ ಅಪ್ಲಿಕೇಶನ್ ಅನ್ನು ಆಯ್ಕೆ ಸಮಿತಿ ಪರಿಶೀಲಿಸುವುದಿಲ್ಲ ಎಂದು ಕಲರ್ಸ್ ಕನ್ನಡ ಹೇಳಿಕೊಂಡಿದೆ.