ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Padma Awards 2026: ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

Padma Awards 2026: ಈ ವರ್ಷ ಭಾರತ ಸರ್ಕಾರ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಐದು ಪದ್ಮವಿಭೂಷಣ ಗೌರವಗಳು, 13 ಪದ್ಮಭೂಷಣ ಪ್ರಶಸ್ತಿಗಳು ಮತ್ತು 113 ಪದ್ಮಶ್ರೀ ಗೌರವಗಳು ಸೇರಿವೆ. ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಈ ಗೌರವಗಳನ್ನು ನೀಡಲಾಗುತ್ತದೆ.

ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ; ಇಲ್ಲಿದೆ ಲಿಸ್ಟ್‌

ಪದ್ಮ ಪ್ರಶಸ್ತಿ ಪ್ರದಾನ -

Yashaswi Devadiga
Yashaswi Devadiga May 25, 2026 3:48 PM

ಸಿನಿಮಾ (Cinema), ಸಂಗೀತ ಮತ್ತು ರಂಗಭೂಮಿ ಜಗತ್ತಿನ ಹಲವಾರು ಪ್ರಸಿದ್ಧ ಹೆಸರುಗಳು ಇಂದು ನವದೆಹಲಿಯಲ್ಲಿ 2026 ರ ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಲು ಸಜ್ಜಾಗಿವೆ. 2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಇಂದು (ಮೇ 25) ಪ್ರದಾನ ಮಾಡಲಾಗುತ್ತದೆ. ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (droupadi murmu) ಅವರು ಗೌರವಗಳನ್ನು ಪ್ರದಾನ ಮಾಡಲಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರವು ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಇದರಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಹಾಗೂ 113 ಪದ್ಮಶ್ರೀ (Padmashree) ಪ್ರಶಸ್ತಿಗಳು ಸೇರಿವೆ.

ಇಂದು ಸಂಜೆ 5 ಗಂಟೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶ್ರೀಮತಿ ದ್ರೌಪದಿ ಮುರ್ಮು ಅವರು 2026 ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ನೀವು ಆಕಾಶವಾಣಿ ಗೋಲ್ಡ್, ಇಂದ್ರಪ್ರಸ್ಥ, AIR ಲೈವ್ ನ್ಯೂಸ್ 24x7 ಮತ್ತು ಆಕಾಶವಾಣಿ AIR ನ YouTube ಚಾನೆಲ್‌ನಲ್ಲಿ ಸಮಾರಂಭವನ್ನು ನೇರಪ್ರಸಾರದಲ್ಲಿ ಕೇಳಬಹುದು.

ಈ ವರ್ಷ ಭಾರತ ಸರ್ಕಾರ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಐದು ಪದ್ಮವಿಭೂಷಣ ಗೌರವಗಳು, 13 ಪದ್ಮಭೂಷಣ ಪ್ರಶಸ್ತಿಗಳು ಮತ್ತು 113 ಪದ್ಮಶ್ರೀ ಗೌರವಗಳು ಸೇರಿವೆ. ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಈ ಗೌರವಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Amruthadhaare Serial: ಅನಿರೀಕ್ಷಿತವಾಗಿ ಬಂದಿರೋ ಸವಾಲನ್ನು ಹೇಗೆ ಎದುರಿಸ್ತಾರೆ ಗೌತಮ್ - ಭೂಮಿಕಾ ?

ಹಿರಿಯ ನಟ ಧರ್ಮೇಂದ್ರ ಅವರಿಗೆ ಪದ್ಮವಿಭೂಷಣ: ಹಿಂದಿ ಚಿತ್ರರಂಗದ ದಶಕಗಳ ಇತಿಹಾಸದಲ್ಲಿ ‘ಶೋಲೆ’ ರೀತಿಯ ಗಮನಾರ್ಹ ಸಿನಿಮಾಗಳ ಮೂಲಕ ಕೋಟ್ಯಂತರ ಪ್ರೇಕ್ಷಕರನ್ನು ರಂಜಿಸಿದ ಎವರ್‌ಗ್ರೀನ್ ಸೂಪರ್‌ಸ್ಟಾರ್ ನಟ ಧರ್ಮೇಂದ್ರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ. ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿ ಈ ಗೌರವ ಸಲ್ಲಿಕೆ ಆಗುತ್ತಿದೆ.ಆರ್. ಮಾಧವನ್ ಹಾಗೂ ಸತೀಶ್ ಶಾ ಅವರಿಗೆ ಪದ್ಮಶ್ರೀ ದಿವಂಗತ ನಟ ಸತೀಶ್ ಶಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ಸಮರ್ಪಿಸಲಾಗುತ್ತಿದೆ.

ಧರ್ಮೇಂದಾ, ಅಲ್ಕಾ ಯಾಜ್ಞಿಕ್, ಸತೀಶ್ ಶಾ ಅವರಿಂದ ಹಿಡಿದು ಮಮ್ಮುಟ್ಟಿವರೆಗೆ, ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಈ ಕೆಳಗಿನ ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ:

ಧರ್ಮೇಂದ್ರ - ಪದ್ಮವಿಭೂಷಣ (ಮರಣೋತ್ತರ)

ಸತೀಶ್ ಶಾ - ಪದ್ಮಶ್ರೀ (ಮರಣೋತ್ತರ)

ಅಲ್ಕಾ ಯಾಜ್ಞಿಕ್ - ಪದ್ಮಭೂಷಣ

ಮಮ್ಮುಟ್ಟಿ - ಪದ್ಮಭೂಷಣ

ಪ್ರೊಸೆನ್ಜಿತ್ ಚಟರ್ಜಿ - ಪದ್ಮಶ್ರೀ

ಮಾಧವನ್ ರಂಗನಾಥನ್ - ಪದ್ಮಶ್ರೀ

ಪಿಯೂಷ್ ಪಾಂಡೆ - ಪದ್ಮಭೂಷಣ (ಮರಣೋತ್ತರ)

ಈ ಪಟ್ಟಿಯಲ್ಲಿ ಕಲಾ ಕ್ಷೇತ್ರದ ಗಾಯಕರು, ನಟರು ಮತ್ತು ಕಲಾವಿದರು ಕೂಡ ಇದ್ದಾರೆ

ಎನ್ ರಾಜಮ್

ಶತಾವಧಾನಿ ಆರ್ ಗಣೇಶ್

ಅನಿಲ್ ಕುಮಾರ್ ರಸ್ತೋಗಿ

ಅರವಿಂದ್ ವೈದ್ಯ

ಭರತ್ ಸಿಂಗ್ ಭಾರ್ತಿ

ಭಿಕ್ಲ್ಯಾ ಲಡಾಕ್ಯ ಧಿಂಡಾ

ಬಿಶ್ವ ಬಂಧು (ಮರಣೋತ್ತರ)

ಚಿರಂಜಿ ಲಾಲ್ ಯಾದವ್

ದೀಪಿಕಾ ರೆಡ್ಡಿ

ಧಾರ್ಮಿಕಲಾಲ್ ಚುನಿಲಾಲ್ ಪಾಂಡ್ಯ

ಗಡ್ಡೆ ಬಾಬು ರಾಜೇಂದ್ರ ಪ್ರಸಾದ್

ಗಫ್ರುದ್ದೀನ್ ಮೇವಾತಿ ಜೋಗಿ

ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ)

ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ಶ್ರೀಮತಿ ರಂಜನಿ ಬಾಲಸುಬ್ರಮಣಿಯನ್ (ದ್ವಯ)

ಹರಿ ಮಾಧಬ್ ಮುಖೋಪಾಧ್ಯಾಯ (ಮರಣೋತ್ತರ)

ಹರಿಚರಣ್ ಸೈಕಿಯಾ

ಜ್ಯೋತಿಷ್ ದೇಬನಾಥ್

ಕಲಾಮಂಡಲಂ ವಿಮಲಾ

ಮೆನನ್

ಖೇಮ್ ರಾಜ್ ಸುಂದ್ರಿಯಲ್

ಕುಮಾರ್ ಬೋಸ್

ಪ್ರೊ (ಡಾ) ಲಾರ್ಸ್-ಕ್ರಿಶ್ಚಿಯನ್ ಕೋಚ್

ಮಗಂತಿ ಮುರಳಿ ಮೋಹನ್

ಮೀರ್ ಹಾಜಿಭಾಯಿ ಕಸಂಬಾಯಿ

ನೂರುದ್ದೀನ್ ಅಹ್ಮದ್

ಓತುವಾರ್ ತಿರುಥಣಿ

ಸ್ವಾಮಿನಾಥನ್

ಪೋಖಿಲಾ ಲೆಕ್ತೇಪಿ

ಆರ್. ಕೃಷ್ಣನ್ (ಮರಣೋತ್ತರ)

ರಘುವೀರ್ ತುಕಾರಾಂ ಖೇಡ್ಕರ್

ರಾಜಸ್ತಪತಿ ಕಲಿಯಪ್ಪ

ಗೌಂಡರ್

ಸಾಂಗ್ಯುಸಾಂಗ್ ಎಸ್ ಪೊಂಗೆನರ್

ಇದನ್ನೂ ಓದಿ: Jagapathi Babu: ಖಿನ್ನತೆಯಿಂದ ಹೊರಬರಲು ಪ್ರಭಾಸ್‌ ಸಹಾಯ! ಜಗಪತಿ ಬಾಬು ಮುಕ್ತ ಮಾತು

ಶರತ್ ಕುಮಾರ್ ಪಾತ್ರ

ಸಿಮಾಂಚಲ್ ಪಾತ್ರೋ

ತಗಾ ರಾಮ್ ಭೀಲ್

ತರುಣ್ ಭಟ್ಟಾಚಾರ್ಯ

ತಿರುವಾರೂರು ಭಕ್ತವತ್ಸಲಂ

ತ್ರಿಪ್ತಿ ಮುಖರ್ಜಿ

ಯುಮ್ನಮ್ ಜತ್ರಾ ಸಿಂಗ್ (ಮರಣೋತ್ತರ)