ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Love Insurance Kompany: ತಮ್ಮ ಭಾಷಣವನ್ನು AI ಬಳಸಿ ಅನುವಾದ ಮಾಡಿದ ತಮಿಳು ನಟ; ಹುಬ್ಬೇರಿಸಿದ ಫ್ಯಾನ್ಸ್‌!

pradeep ranganathan: AI ನಿಂದ ಉಂಟಾಗುವ ಅಪಾಯಗಳ ಕುರಿತು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಯೇ ಸತ್ಯ ಎಂದು ಹಲವರು ನಂಬುತ್ತಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಫೋಟೋಗಳನ್ನು ಮಾರ್ಫಿಂಗ್ ಆಗತ್ತಿದೆ. ಇನ್ನೂ ಕೆಲವರು ಈಗಾಗಲೇ AI ಬಳಸಿ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಪ್ರದೀಪ್ ರಂಗನಾಥನ್ ವೇದಿಕೆಯಲ್ಲಿ ತಮ್ಮ ಭಾಷಣವನ್ನು chatgpt ಸಹಾಯದಿಂದ ಅನುವಾದ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ತಮ್ಮ ಭಾಷಣವನ್ನು AI ಬಳಸಿ ಅನುವಾದ ಮಾಡಿದ ತಮಿಳು ನಟ!

ಪ್ರದೀಪ್ ರಂಗನಾಥನ್ -

Yashaswi Devadiga
Yashaswi Devadiga Apr 6, 2026 9:53 AM

AI ನಿಂದ ಉಂಟಾಗುವ ಅಪಾಯಗಳ ಕುರಿತು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ (Social Media) ಚರ್ಚೆಗಳು ಆಗುತ್ತಲೇ ಇರುತ್ತವೆ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಯೇ ಸತ್ಯ ಎಂದು ಹಲವರು ನಂಬುತ್ತಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಫೋಟೋಗಳನ್ನು ಮಾರ್ಫಿಂಗ್ ಆಗತ್ತಿದೆ. ಇನ್ನೂ ಕೆಲವರು ಈಗಾಗಲೇ AI ಬಳಸಿ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಮಿಳು ನಟ (love insurance kompany) ಪ್ರದೀಪ್ ರಂಗನಾಥನ್ (pradeep ranganathan) ವೇದಿಕೆಯಲ್ಲಿ ತಮ್ಮ ಭಾಷಣವನ್ನು chatgpt ಸಹಾಯದಿಂದ ಅನುವಾದ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: Amruthadhaare Serial: ಇಂದು ಅಮೃತಧಾರೆ ಮಹಾಸಂಚಿಕೆ; ಜೋಡಿ ಜೀವಗಳ ರೊಮ್ಯಾಂಟಿಕ್ ಎಪಿಸೋಡ್‌

'ಲವ್ ಇನ್ಸೂರೆನ್ಸ್ ಕಂಪನಿ' ಈ ವಾರ ತೆರೆಗೆ

ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ನಟಿಸಿರುವ ಈ ಬಹು ನಿರೀಕ್ಷಿತ 'ಲವ್ ಇನ್ಸೂರೆನ್ಸ್ ಕಂಪನಿ' ಎಂಬ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ನಟಿ-ನಿರ್ಮಾಪಕಿ ನಯನತಾರಾ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾ ಪ್ರಚಾರ ಶುರುವಾಗಿದೆ. ಈ ಹಿಂದೆ 'ಡ್ಯೂಡ್' ಎಂಬ ಚಿತ್ರದಲ್ಲಿ ಪ್ರದೀಪ್ ನಟಿಸಿದ್ದರು. ದೀಪ್ ನಟನೆಯ 3 ಸಿನಿಮಾಗಳು ಹಿಟ್ ಆಗಿದೆ. ಹಾಗಾಗಿ ಆತನ ಸಿನಿಮಾಗಳ ಬಗ್ಗೆ ಕ್ರೇಜ್ ಹೆಚ್ಚಿದೆ.

ಅನುವಾದ ಮಾಡಿಕೊಳ್ಳಲು AI

ಇದೀಗ ಸಿನಿಮಾ ಪ್ರಚಾರ ವೇಳೆ ನಟ ತಮ್ಮ ಭಾಷಣವನ್ನು ಅನುವಾದ ಮಾಡಿಕೊಳ್ಳಲು AI ಬಳಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದು ಚರ್ಚೆಗಳು ಆಗುತ್ತಿವೆ. ಪ್ರದೀಪ್ ತಾವು ಇಂಗ್ಲೀಷ್‌ನಲ್ಲಿ chatgpt ಜೊತೆ ಮಾತನಾಡಿ, ಅದು ಎಲ್ಲರಿಗೂ ಅರ್ಥವಾಗುವಂತೆ ತೆಲುಗಿನಲ್ಲಿ ಅನುವಾದಿಸಿದ್ದಾರೆ. AI ಸಹಾಯದಿಂದ ವೇದಿಕೆಯಲ್ಲಿ ಭಾಷಾ ಅನುವಾದ ಮಾಡಿದ್ದಾರೆ.



2040ರ ಲವ್ ಸ್ಟೋರಿ ಹೇಗಿರಬಹುದು ಎನ್ನುವುದನ್ನು 'ಲವ್ ಇನ್ಸೂರೆನ್ಸ್ ಕಂಪನಿ' ಚಿತ್ರದಲ್ಲಿ ಹೇಳಲಾಗ್ತಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ನಿರ್ಮಿಸಿ ನಿರ್ದೇಶನ ಮಾಡುತ್ತಿರುವ ಸಿನಿಮಾ 'ಲವ್ ಇನ್ಸೂರೆನ್ಸ್ ಕಂಪನಿ'.

ಇದನ್ನೂ ಓದಿ: Shadow Play OTT: ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌, ರೋಚಕ ಕ್ರೈಮ್ ಡ್ರಾಮಾ ಸಿರೀಸ್‌ ಈ ಒಟಿಟಿಯಲ್ಲಿ!

ಕರಾವಳಿ ಮೂಲದ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಎಸ್‌. ಜೆ ಸೂರ್ಯ, ಯೋಗಿ ಬಾಬು, ಮಾಳವಿಕಾ, ಆನಂದ್ ರಾಜ್, ಸುನಿಲ್ ರೆಡ್ಡಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ’ಡ್ರ್ಯಾಗನ್’ ಮೂಲಕ ಸಕ್ಸಸ್ ಕಂಡಿರುವ ಪ್ರದೀಪ್‌ಗೆ ಕೃತಿ ಜೊತೆಯಾಗಿರೋದ್ರಿಂದ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಹೊಸ ಜೋಡಿಯನ್ನು ಸಿನಿಮಾದಲ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.