Lakshmi Nivasa Serial: ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ; ಅಂತ್ಯವಾಯ್ತಾ ಒಲವ ಸಾಕ್ಷಾತ್ಕಾರ?
Lakshmi Nivasa Serial: ಧಾರಾವಾಹಿಯ ಪ್ರತಿ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದ್ದು, ಅವ್ರದ್ದೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಈ ಸೀರಿಯಲ್ ಆರಂಭವಾದಾಗಿನಿಂದ ಒಂದು ರೀತಿಯಲ್ಲಿ ಸೈಕೋ ಗಂಡನ ರೀತಿಯಲ್ಲಿ ಜಯಂತ್ ಕಾಣಿಸುತ್ತಿದ್ದರು. ಅಷ್ಟೇ ಅಲ್ಲದೆ ಗಂಡ ಕೊಟ್ಟ ಎಲ್ಲಾ ನೋವನ್ನು ಸಹಿಸಿಕೊಂಡು ಬರುತ್ತಿದ್ದವಳು ಜಾನು. ಯಾರಿಗೂ ಹೇಳಲು ಆಗದೆ ತನ್ನಲ್ಲಿಯೇ ಎಲ್ಲಾ ನೋವುಗಳನ್ನು ಇಟ್ಟುಕೊಂಡು ನರಕಯಾತನೆಯನ್ನು ಅನುಭವಿಸುತ್ತಿದ್ದ ಜಾನು ಈಗ ಫುಲ್‌ಸ್ಟಾಪ್ ಇಟ್ಟಿದ್ದಾಳೆ.
ಲಕ್ಷ್ಮೀ ನಿವಾಸ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ‘ಲಕ್ಷ್ಮೀ ನಿವಾಸ’ ಧಾರಾವಾಹಿ (Lakshmi Nivasa Serial) ಜನಪ್ರಿಯತೆ ಪಡೆದುಕೊಂಡಿದೆ. ಧಾರಾವಾಹಿಯ ಪ್ರತಿ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದ್ದು, ಅವ್ರದ್ದೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಈ ಸೀರಿಯಲ್ ಆರಂಭವಾದಾಗಿನಿಂದ ಒಂದು ರೀತಿಯಲ್ಲಿ ಸೈಕೋ ಗಂಡನ ರೀತಿಯಲ್ಲಿ ಜಯಂತ್ (Jayanth) ಕಾಣಿಸುತ್ತಿದ್ದರು. ಅಷ್ಟೇ ಅಲ್ಲದೆ ಗಂಡ ಕೊಟ್ಟ ಎಲ್ಲಾ ನೋವನ್ನು ಸಹಿಸಿಕೊಂಡು ಬರುತ್ತಿದ್ದವಳು ಜಾನು. ಯಾರಿಗೂ ಹೇಳಲು ಆಗದೆ ತನ್ನಲ್ಲಿಯೇ ಎಲ್ಲಾ ನೋವುಗಳನ್ನು ಇಟ್ಟುಕೊಂಡು ನರಕಯಾತನೆಯನ್ನು ಅನುಭವಿಸುತ್ತಿದ್ದ ಜಾನು ಈಗ ಫುಲ್‌ಸ್ಟಾಪ್ ಇಟ್ಟಿದ್ದಾಳೆ.
ಪ್ರೀತಿಯಿಂದ ಬೇಸತ್ತ ಜಾಹ್ನವಿ
ಜಯಂತ್‌ನ ಸೈಕೋಪಾತ್ ಪ್ರೀತಿಯಿಂದ ಬೇಸತ್ತಿರುವ ಜಾಹ್ನವಿ, ನಿಜಬಣ್ಣವನ್ನು ಮನೆಯವರ ಮುಂದೆ ಬಯಲು ಮಾಡಿದ್ದಾಳೆ. ವೆಂಕಿ ಅಮ್ಮನಿಗೆ ನೀಡುತ್ತಿದ್ದ ಚಿತ್ರಹಿಂಸೆಯನ್ನು ಪತ್ತೆಹಚ್ಚಿ, ಅವನ ಕ್ರೌರ್ಯವನ್ನು ವಿರೋಧಿಸಿ ತನ್ನ ಮಂಗಳಸೂತ್ರವನ್ನೇ ತೆಗೆದು ಕೈಗೆ ಇಟ್ಟಿದ್ದಾಳೆ.
ಇದನ್ನೂ ಓದಿ: Kantara Chapter 1: ಹೊಸ ದಾಖಲೆ ಸೃಷ್ಟಿಸಿದ ʼಕಾಂತಾರ 'ಬ್ರಹ್ಮಕಲಶ' ಹಾಡು
ಜಾಹ್ನವಿ ಮತ್ತು ಜಯಂತ್ ಬಾಳಲ್ಲಿ ಬಿರುಗಾಳಿ ಬಂದಿದೆ. ತಾನು ಪ್ರೀತಿಸಿದವರನ್ನು ಬೇರೆ ಯಾರೂ ಪ್ರೀತಿಸಬಾರದು ಎನ್ನುವ ಮನೋ ಕಾಯಿಲೆ ಇದು. ಅದಕ್ಕಾಗಿಯೇ ವೆಂಕಿಯನ್ನು ತನಗಿಂತ ಅವನ ಅಮ್ಮ ಹೆಚ್ಚಾಗಿ ಪ್ರೀತಿಸ್ತಾಳೆ ಎನ್ನುವ ಕಾರಣಕ್ಕೆ, ಅವಳನ್ನು ಕಿಡ್ನ್ಯಾಪ್ ಮಾಡಿಸಿ ಹಿಂಸೆ ಕೊಡುತ್ತಿದ್ದಾನೆ.
ಜಾಹ್ನವಿ, ಮಾರುವೇಷದಲ್ಲಿ ಹೋಗಿ ವೆಂಕಿ ಅಮ್ಮನನ್ನು ಬಿಡಿಸಿದ್ದಾಳೆ. ಅಲ್ಲಿಗೆ ಬಂದಿರುವ ಜಯಂತ್ಗೆ ಸತ್ಯ ಹೇಳಿದ್ದಾಳೆ. ಮನೆಯಲ್ಲಿ ಇರುವ ಎಲ್ಲರಿಗೂ ಜಯಂತ್‌ನ ನಿಜ ಗುಣವನ್ನು ಬಯಲು ಮಾಡಿದ್ದಾಳೆ. ತಾನು ಇನ್ನು ಇವರ ಜೊತೆ ಬಾಳಲ್ಲ ಎಂದು ಮಂಗಳಸೂತ್ರವನ್ನು ಜಯಂತ್ ಕೈಗೆ ಇಟ್ಟಿದ್ದಾಳೆ.
ಇದೀಗ ಪ್ರೋಮೋ ಕಂಡು ಸೀರಿಯಲ್ ಅಂತ್ಯ ಆಗುತ್ತಾ? ಅಂತ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು. ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ... ಮುರಿದು ಬಿತ್ತಾ ಏಳು ಜನ್ಮಗಳ ಜಯಂತ್- ಜಾಹ್ನವಿಯ ಬಂಧ?
ಅಂತ್ಯವಾಯ್ತಾ ಒಲವ ಸಾಕ್ಷಾತ್ಕಾರ! ಎಂದು ಪ್ರೋಮೋ ಕ್ಯಾಪ್ಷನ್ ಕೂಡ ಇದೆ. ಹೀಗಾಗಿ ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.
ಬಡ ಕುಟುಂಬದ ಹೆಣ್ಣು ಮಕ್ಕಳ ಜೀವನ ಹೇಗಿರುತ್ತದೆ ಎನ್ನುವ ಸಾರಾಂಶ ಹೊಂದಿರುವ ಈ ಧಾರಾವಾಹಿ ಸಾಕಷ್ಟು ಮಿಡಲ್‌ಕ್ಲಾಸ್ ಹೆಣ್ಣು ಮಕ್ಕಳ ಜೀವನಕ್ಕೆ ಸಂಬಂಧಿಸಿದೆ. ಈ ಧಾರಾವಾಹಿಯಲ್ಲಿ ಅನೇಕ ಹಿರಿ ಕಲಾವಿದರು ಇದ್ದಾರೆ.
ಇದನ್ನೂ ಓದಿ: Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ; ಭೂಮಿ ಮನದ ಭಾರ ಇಳಿಸೋ ಪ್ರಯತ್ನದಲ್ಲಿ ಗೌತಮ್
ಸುಬ್ರಮಣ್ಯಲಕ್ಷ್ಮೀ ಹೆಗಡೆ, ಮಧು ಹೆಗಡೆ, ಚಂದನಾ ಅನಂತಕೃಷ್ಣ ಮೊದಲಾದವರು ಇದ್ದಾರೆ. ಲಕ್ಷ್ಮೀ ನಿವಾಸ ಸೋಮ-ಶುಕ್ರ ರಾತ್ರಿ 8.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.