ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter -1: ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವಾ? ರಿಷಬ್‌ ಪತ್ನಿ ಪ್ರಗತಿ ಹೇಳಿದ್ದೇನು?

Kantara: Chapter -1: ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಕಾಂತಾರ ಸಿನಿಮಾ ಸಂಚಲನ ಉಂಟುಮಾಡುತ್ತಿದೆ. ರಿಷಭ್ ನಿರ್ದೇಶನ ಅಭಿಯನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಹಲವು ಸೆಲೆಬ್ರಿಟಿಗಳು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.‌ ಆದರೆ 'ಕಾಂತರ ‌ಚಾಪ್ಟರ್ 1’ ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ‌ ಎನ್ನುವ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದೆ.‌ ಈ ಬಗ್ಗೆ ಇದೀಗ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಸ್ಪಷ್ಟನೆ ನೀಡಿದ್ದಾರೆ.

ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ 'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವ?

-

Profile Pushpa Kumari Oct 24, 2025 8:44 PM

ನವದೆಹಲಿ: 'ಕಾಂತಾರ: ಚಾಪ್ಟರ್ 1’ (Kantara: Chapter -1) ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಕಾಂತಾರ ಸಿನಿಮಾ ಸಂಚಲನ ಉಂಟುಮಾಡುತ್ತಿದೆ. ರಿಷಬ್‌ ಶೆಟ್ಟಿ ನಿರ್ದೇಶನ ಅಭಿಯನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಹಲವು ಸೆಲೆಬ್ರಿಟಿಗಳು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.‌ ಆದರೆ 'ಕಾಂತರ ‌ಚಾಪ್ಟರ್ 1’ ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ‌ ಎನ್ನುವ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದೆ.‌ ಈ ಬಗ್ಗೆ ಇದೀಗ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಚಿತ್ರರಂಗದ 'RRR' ಎಂದೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಖ್ಯಾತಿ ಪಡೆದಿದ್ದಾರೆ. ಈ ಮೂವರ ಸಿನಿಮಾಕ್ಕೂ ಬಹಳಷ್ಟು ಪ್ರೇಕ್ಷಕ ವರ್ಗ ಇದ್ದು ಉತ್ತಮ ಭಾಂಧವ್ಯ ಕೂಡ ಅವರು ಹೊಂದಿದ್ದಾರೆ.‌ ಸಿನಿಮಾ ಕೆಲಸಗಳಲ್ಲಿ ಕೂಡ ಒಬ್ಬರಿಗೊಬ್ಬರು ಸಲಹೆ ಸೂಚನೆ ನೀಡುತ್ತಾರೆ. ಹಾಗಿದ್ರೆ ಕಾಂತರ ಚಾಪ್ಟರ್ -1 ಬಗ್ಗೆ ಯಾಕೆ ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಪ್ರತಿಕ್ರಿಯೆ ನೀಡಿಲ್ಲ ಇದಕ್ಕೆ ಕಾರಣವೇನು?

ಮೂರು ವರ್ಷಗಳ ಹಿಂದೆ 'ಕಾಂತಾರ' ಚಿತ್ರದ ಪ್ರೀಮಿಯರ್ ಶೋ ನೋಡಿ ರಕ್ಷಿತ್ ಶೆಟ್ಟಿ ಎಕ್ಸೈಟ್ ಆಗಿದ್ದರು. ಅದ್ಭುತ ಸಿನಿಮಾ ಮಾಡಿದ್ದೀಯಾ ಮಗಾ ಎಂದು ರಿಷಬ್‌ ಶೆಟ್ಟಿ ಅವರನ್ನು ಅಭಿನಂದಿಸಿದ್ದರು. 'ಕಾಂತಾರ' ಚಿತ್ರದ ಕೋಲ ಸನ್ನಿವೇಶದ ಶೂಟಿಂಗ್ ಗೆ ರಾಜ್‌ ಬಿ ಶೆಟ್ಟಿ ಕೂಡ ಸಲಹೆ ನೀಡಿದ್ದರು. ಆದರೆ ಪ್ರೀಕ್ವೆಲ್ ಸಿನಿಮಾ ಬಗ್ಗೆ ಇಬ್ಬರೂ ಈವರೆಗೆ ಪ್ರತಿಕ್ರಿಯಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಯಾವುದೇ ಪೋಸ್ಟ್ ಮಾಡಿಲ್ಲ..ಈ ಬಗ್ಗೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ:Vrusshabha Movie: ಕೊನೆಗೂ ವೃಷಭ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ನಟ ಮೋಹನ್ ಲಾಲ್!

ರಾಜ್‌ ಹಾಗೂ ರಕ್ಷಿತ್ ಸಿನಿಮಾ ನೋಡಿ ಏನು ಹೇಳಿದ್ರು‌ ಎನ್ನುವ ಪ್ರಶ್ನೆಗೆ "ರಾಜಣ್ಣ ಇನ್ನು ಸಿನಿಮಾ ವೀಕ್ಷಣೆ ಮಾಡಿಲ್ಲ ಅನ್ನಿಸುತ್ತದೆ".. ನೋಡಿದ್ರೆ ರಿಯಾಕ್ಟ್ ಮಾಡ್ತಾ ಇದ್ರೂ.. ಮೂವರಲ್ಲಿ ಯಾರೇ ಸಿನಿಮಾ ಮಾಡಿದ್ರು ಅವರು ಬೆಂಬಲ ಸೂಚಿಸುತ್ತಾರೆ. 'ಸು ಫ್ರಂ ಸೋ' ಚಿತ್ರವನ್ನು ನಾನು, ರಿಷಬ್ ಹೋಗಿ ನೋಡಿದ್ವಿ.. ಖಂಡಿತ ರಾಜಣ್ಣ ಸಿನಿಮಾ ನೋಡಿದ್ದರೆ ಇಷ್ಟೊತ್ತಿಗೆ ಕಾಲ್ ಮಾಡ್ತಿದ್ರು, ಅವ್ರು ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ಎಂದು ಹೇಳಿದರು.

ರಕ್ಷಿತ್ ಶೆಟ್ಟಿ ಬಗ್ಗೆ ಅವರು ಯೂಎಸ್‌ನಲ್ಲಿ ಇದ್ದಾರೆ. 'ರಿಚರ್ಡ್ ಆಂಟನಿ' ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಇದ್ದಾರೆ.‌ ಹಾಗಾಗಿ ನಾವು ಡಿಸ್ಟರ್ಬ್ ಮಾಡ್ಲಿಲ್ಲ. ಸಿನಿಮಾ ನೋಡಿದ್ದರೆ ಅವ್ರು ಇಷ್ಟೊತ್ತಿಗೆ ಕಾಲ್ ಮಾಡಿ ಹೇಳ್ತಾ ಇದ್ರು ಎಂದು ಹೇಳಿದ್ದಾರೆ. ಸದ್ಯ ಕಾಂತಾರ ಚಾಪ್ಟರ್ -1 ಸಿನಿಮಾ ಬರೋಬ್ಬರಿ 800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಇದು ಹೆಮ್ಮೆಯ ವಿಚಾರ ಕೂಡ ಆಗಿದೆ.