ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shivarajkumar: ‘ಜೈಲರ್ 2’ ಟ್ರೇಲರ್ ನೋಡಿ ರಜನಿಕಾಂತ್‌ ಫ್ಯಾನ್ಸ್‌ ದಿಲ್‌ಖುಷ್‌; ಮತ್ತೆ ಅಖಾಡಕ್ಕಿಳಿದ ಟೈಗರ್ ಮುತ್ತುವೇಲ್ ಪಾಂಡಿಯನ್!

Jailer 2 Trailer: ‘ಜೈಲರ್ 2’ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ಮತ್ತೊಮ್ಮೆ ಖಡಕ್ ಅವತಾರವೆತ್ತಿದ್ದಾರೆ. ನೆಲ್ಸನ್ ಅವರ ನಿರ್ದೇಶನ, ಶಿವರಾಜ್‌‌ಕುಮಾರ್ ಹಾಗೂ ಮೋಹನ್‌ಲಾಲ್ ಅವರ ಪವರ್‌ಫುಲ್ ಸಾಥ್ ಚಿತ್ರದ ತೂಕ ಹೆಚ್ಚಿಸಿದೆ.

Jailer 2 Trailer: ಮತ್ತೊಮ್ಮೆ ರಜನಿಕಾಂತ್‌ಗೆ ಸಾಥ್‌ ನೀಡಿದ ಶಿವಣ್ಣ

-

Avinash GR
Avinash GR Oct 5, 2026 7:42 PM

‘ಸೂಪರ್‌ಸ್ಟಾರ್’ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ವಿಶಿಷ್ಟ ಮೇಕಿಂಗ್ ಶೈಲಿಯಲ್ಲಿ ಮೂಡಿಬಂದಿರುವ ಈ ಸೀಕ್ವೆಲ್, ಮೊದಲ ಭಾಗಕ್ಕಿಂತಲೂ ದುಪ್ಪಟ್ಟು ಆ್ಯಕ್ಷನ್, ಟ್ವಿಸ್ಟ್ & ಟರ್ನ್ಸ್ ಜೊತೆಗೆ ಹಳೆಯ-ಹೊಸ ಕಲಾವಿದರ ಸಮಾಗಮದೊಂದಿಗೆ ಮತ್ತೊಮ್ಮೆ ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಸಜ್ಜಾಗಿದೆ.

ರಜನಿಕಾಂತ್‌ ಖಡಕ್‌ ಡೈಲಾಗ್

ನೆಲ್ಸನ್ ಅವರ ಸಿಗ್ನೇಚರ್ ‘ಡೆಡ್‌ಪ್ಯಾನ್’ ಆ್ಯಕ್ಷನ್ ಹಾಗೂ ಡ್ರೈ ಹ್ಯೂಮರ್ ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿದೆ. "ಗೂಢಚರ್ಯೆ, ಬೆದರಿಕೆ, ಮೈಂಡ್‌ಗೇಮ್‌ಗಳೆಲ್ಲ ಹಳೆಯ ತಂತ್ರಗಳು; ಎಲ್ಲರನ್ನೂ ಒಂದೇ ಜಾಗದಲ್ಲಿ ಸೇರಿಸಿ ಬಾಂಬ್ ಇಟ್ಟು ಸ್ಫೋಟಿಸುವುದೇ ನನ್ನ ಶೈಲಿ" ಎಂದು ರಜನಿಕಾಂತ್‌ ಅಬ್ಬರಿಸಿದ್ದಾರೆ.

ದೊಡ್ಡ ತಾರಾಗಣದ ʻಜೈಲರ್‌ 2ʼ

ಈ ಚಿತ್ರದ ಬಹುದೊಡ್ಡ ಬಲವೇ ಅದರ ಅದ್ದೂರಿ ತಾರಾಗಣ. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ‘ನರಸಿಂಹ’ನಾಗಿ ಸ್ಲೋ-ಮೋಷನ್ ಶಾಟ್‌ನಲ್ಲಿ ಮಾಸ್ ಲುಕ್ ನೀಡಿದ್ದರೆ, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಭೂಗತ ದೊರೆ ‘ಮ್ಯಾಥ್ಯೂ’ ಆಗಿ ತಮ್ಮ ಟ್ರೇಡ್‌ಮಾರ್ಕ್ ವಿಂಟೇಜ್ ಕೂಲಿಂಗ್ ಗ್ಲಾಸ್ ಹಾಗೂ ಸ್ಟೈಲಿಶ್ ನಡಿಗೆಯಲ್ಲಿ ಮಿಂಚಿದ್ದಾರೆ. ಬಾಲಿವುಡ್‌ನ ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದಾರೆ.

Jailer 2 Movie: 'ಜೈಲರ್‌ 2' ಚಿತ್ರದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ರಜನಿಕಾಂತ್‌ ಮಗಳ ಪಾತ್ರಕ್ಕೆ ಕನ್ನಡತಿ ಆಯ್ಕೆ?

ಇನ್ನು ವಿದ್ಯಾ ಬಾಲನ್, ಎಸ್. ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜಾರಮೂಡು, ಅನ್ನಾ ರಾಜನ್ ಹಾಗೂ ಜತಿನ್ ಸರ್ನಾ ಈ ತಾರಾಗಣವನ್ನು ಸೇರಿಕೊಂಡಿದ್ದಾರೆ. ಮೊದಲ ಭಾಗದಲ್ಲಿದ್ದ ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ, ರಿತ್ವಿಕ್, ಜಾಫರ್ ಸಾದಿಕ್ ಮತ್ತು ವಿಟಿವಿ ಗಣೇಶ್ ತಮ್ಮ ಪಾತ್ರಗಳನ್ನು ಮುಂದುವರಿಸಿದ್ದಾರೆ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕೂಡ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ; ಆದರೆ ಟ್ರೇಲರ್‌ನಲ್ಲಿ ಸದ್ಯ ಆ ಬಗ್ಗೆ ಯಾವುದೇ ಸುಳಿವು ಇಲ್ಲ.

ಅಕ್ಟೋಬರ್‌ 15ರಂದು ಗ್ರ್ಯಾಂಡ್‌ ರಿಲೀಸ್

ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಸಖತ್ ಹೈಲೈಟ್ ಆಗಿದೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ, ಆರ್. ನಿರ್ಮಲ್ ಸಂಕಲನ, ಡಿಆರ್‌ಕೆ ಕಿರಣ್ ಕಲಾ ನಿರ್ದೇಶನ ಹಾಗೂ ಚೇತನ್ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗವು ವಿಶ್ವಾದ್ಯಂತ 600+ ಕೋಟಿ ರೂ. ಗಳಿಸಿ ದಾಖಲೆ ಬರೆದಿತ್ತು. ಈ ಮುಂದುವರಿದ ಭಾಗವು ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಕಾಲಿವುಡ್‌ನ ಮೊದಲ 1,000 ಕೋಟಿ ರೂ. ಕ್ಲಬ್ ಸೇರುವ ಚಿತ್ರ ಇದಾಗಲಿದೆಯಾ ಎಂಬ ಕುತೂಹಲ ಮೂಡಿಸಿದೆ.‌ ಈ ಚಿತ್ರವು ಅಕ್ಟೋಬರ್‌ 15ರಂದು ದಸರಾ ಹಬ್ಬದ ಕೊಡುಗೆಯಾಗಿ ತೆರೆಗೆ ಬರಲಿದೆ.