Dhurandhar 2: ಬೇರೆ ಹೀರೋಗಳೆಲ್ಲ ಜೋಕರ್ಗಳು! ರಣವೀರ್ ಸಿಂಗ್ ಹೊಗಳಿ ಆರ್‌ಜಿವಿ ಹೇಳಿದ್ದೇನು?
Dhurandhar 2: ಧುರಂಧರ್ 2 ಚಿತ್ರ ಬಿಡುಗಡೆಯಾದ ಒಂದು ದಿನದ ನಂತರ , ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡರು. ಸಿನಿಮಾವನ್ನು ಶ್ಲಾಘಿಸಿದರು. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ತಿರುವು ಎಂದು ಕರೆದರು. ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಧುರಂಧರ್ 2 ಸಿನಿಮಾ -
ಧುರಂಧರ್ 2 ಚಿತ್ರ (Dhurandhar 2) ಬಿಡುಗಡೆಯಾದ ಒಂದು ದಿನದ ನಂತರ , ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ (Ram Gopal Varma ) ಸಾಮಾಜಿಕ ಮಾಧ್ಯಮದಲ್ಲಿ (Social Media) ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡರು. ಸಿನಿಮಾವನ್ನು ಶ್ಲಾಘಿಸಿದರು. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ತಿರುವು ಎಂದು ಕರೆದರು. ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದು ಭಯಾನಕ ಚಿತ್ರ
ಆರ್‌ಜಿವಿ ಪೋಸ್ಟ್ ಹೀಗಿದೆ. ಇದೊಂದು ಭಯಾನಕ ಚಿತ್ರ. ಮೂಕ, ಮೂರ್ಖ ಸಿನಿಮಾಗಳ ಮೇಲೆ ತಮ್ಮ ವೃತ್ತಿಜೀವನ ಮತ್ತು ಅದೃಷ್ಟವನ್ನು ನಿರ್ಮಿಸಿಕೊಂಡ ಎಲ್ಲಾ ಚಲನಚಿತ್ರ ನಿರ್ಮಾಪಕರಿಗೆ ಇದು ಭಯಾನಕ ಚಿತ್ರ. ಮೆದುಳನ್ನು ಮನೆಯಲ್ಲಿಯೇ ಬಿಡಲು ಒತ್ತಾಯಿಸಿದ ಸಿನಿಮಾ. ಮೆದುಳನ್ನು ಮನೆಯಲ್ಲೇ ಬಿಟ್ಟು ಸಿನಿಮಾ ನೋಡಲು ಪ್ರೇರೇಪಿಸುತ್ತಿದ್ದಂತಹ ಸಿನಿಮಾಗಳ ಕಾಲ ಮುಗಿಯಿತು. ಅಬ್ಬರದ ಮತ್ತು ಮಸಾಲಾ ಸಿನಿಮಾಗಳು ಈಗ ವೆಂಟಿಲೇಟರ್ ಮೇಲೆ ಉಸಿರಾಡಲು ಒದ್ದಾಡುತ್ತಿವೆ.
ಇದನ್ನೂ ಓದಿ: Amruthadhaare Serial: ಲಕ್ಷ್ಮೀಕಾಂತನಿಗೆ ಸಿಕ್ಕಿದ್ಯಾ ಕೇಡಿ ಕುತಂತ್ರದ ಸುಳಿವು?
ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ. ಈ ಹೊಸ ಹೀರೋನಲ್ಲೂ ದೋಷಗಳಿವೆ. ಈ ಹೊಸ ಮಾದರಿಯ ಹೀರೋಗೆ ಹೋಲಿಸಿದರೆ, ಹಳೆಯ ದೇವಮಾನವ ಹೀರೋಗಳು ಇದ್ದಕ್ಕಿದ್ದಂತೆ ಸರ್ಕಸ್‌ನ ಜೋಕರ್‌ಗಳಂತೆ ಹಾಸ್ಯಾಸ್ಪದವಾಗಿ ಕಾಣುತ್ತಾರೆ.
'ಹಾರರ್' ಮೂವಿ
ರಾಮ್ ಗೋಪಾಲ್ ವರ್ಮಾ ಧುರಂಧರ್ 2 ಅನ್ನು ಹೊಚ್ಚ ಹೊಸ ವಿಮರ್ಶೆಯಲ್ಲಿ 'ಹಾರರ್' ಎಂದು ಕರೆದಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಆರ್‌ಜಿವಿ ಧುರಂಧರ್ 2 ಚಿತ್ರವನ್ನು ಜೋರಾಗಿ, ಉತ್ಪ್ರೇಕ್ಷಿತವಾಗಿ ಮತ್ತು ಸೂತ್ರ ಆಧಾರಿತ ಸಿನಿಮಾಗಳನ್ನು ಅವಲಂಬಿಸಿರುವ ಚಲನಚಿತ್ರ ನಿರ್ಮಾಪಕರಿಗೆ "ಭಯಾನಕ" ಎಂದು ಬಣ್ಣಿಸಿದ್ದಾರೆ.
"ಈ ಹೊಸ ರೀತಿಯ ನಾಯಕನಿಗೆ ಹೋಲಿಸಿದರೆ, ಕೆಲವು ನಾಯಕರು ಇದ್ದಕ್ಕಿದ್ದಂತೆ ಹಾಸ್ಯಾಸ್ಪದವಾಗಿ ಕಾಣುತ್ತಾರೆ, ಬಹುತೇಕ ಸರ್ಕಸ್‌ನಲ್ಲಿರುವ ಜೋಕರ್‌ಗಳಂತೆ. ವಾಸ್ತವಿಕತೆಯನ್ನು ಧಿಕ್ಕರಿಸುವ ಆಕ್ಷನ್ ಸನ್ನಿವೇಶಗಳನ್ನು ಸಹ ಚಲನಚಿತ್ರ ನಿರ್ಮಾಪಕರು ಟೀಕಿಸಿದರು, ಧುರಂಧರ್ 2 ನಂತರ ಅಂತಹ ಚಲನಚಿತ್ರಗಳು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಕಷ್ಟಪಡುತ್ತವೆ ಎಂದು ಹೇಳಿದರು .
The @Dhurandhar2 is a HORROR.
— Ram Gopal Varma (@RGVzoomin) March 20, 2026
It is a horror for all filmmakers who built their careers and their fortunes on dumbed down, over the top cinema.
The cinema that demanded the brain to be left at home .
The cinema that was rammed down our throats full of LOUDNESS and MASALA which…
ವರ್ಮಾ ಅವರ ಪ್ರಕಾರ, ಈ ಚಿತ್ರವು ನೈಜ, ನೋವಿನ ಮತ್ತು ಆಧಾರಭರಿತವಾದ ಕ್ರಿಯೆಯನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ನಿರೀಕ್ಷೆಗಳನ್ನು ಬದಲಾಯಿಸಿದೆ. "ಧುರಂಧರ್ 2 ಕೇವಲ ಚಿತ್ರವಲ್ಲ. ಇದು ಒಂದು ತೀರ್ಪು" ಎಂದು ಅವರು ಬರೆದಿದ್ದಾರೆ .
ನಿರ್ದೇಶಕ ಆದಿತ್ಯ ಧರ್ ಅವರ ದೃಷ್ಟಿಕೋನವನ್ನು ಶ್ಲಾಘಿಸುತ್ತಾ, ವರ್ಮಾ ಅವರು ಈ ಚಿತ್ರವು ಪ್ರೇಕ್ಷಕರನ್ನು ಕಡಿಮೆ ಅಂದಾಜು ಮಾಡಿದ ಯುಗದ ಅಂತ್ಯವನ್ನು ಸೂಚಿಸುತ್ತದೆ ಎಂದು ಹೇಳುವ ಮೂಲಕ ತಮ್ಮ ಮಾತುಗಳನ್ನು ಮುಗಿಸಿದರು.
ಇದನ್ನೂ ಓದಿ: Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ? ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ಅಲ್ವೇ ಅಲ್ಲ
ಈಗಾಗಲೇ ಚಿತ್ರೀಕರಣ ಹಂತದಲ್ಲಿರುವ ಅಂತಹ ಸಿನಿಮಾಗಳ ನಿರ್ಮಾಪಕರು ಈ ಕೂಡಲೇ ಧುರಂಧರ್ 2 ಚಿತ್ರವನ್ನು ಹಲವು ಬಾರಿ ನೋಡಿ ತಮ್ಮನ್ನು ತಾವು ತಿದ್ದಿಕೊಳ್ಳದಿದ್ದರೆ, ಅವರನ್ನು ಆ ದೇವರೂ ಕೂಡ ಉಳಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.