ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ? ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ಅಲ್ವೇ ಅಲ್ಲ

Dhurandhar 2: ಕಥೆ, ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಜೊತೆಗೆ, ಸ್ಪೈ ಥ್ರಿಲ್ಲರ್ ಧುರಂಧರ್ ತನ್ನ ತಾರಾಬಳಗಕ್ಕಾಗಿ ಪ್ರಶಂಸೆಯನ್ನು ಪಡೆಯಿತು. ಹಮ್ಜಾ ಪಾತ್ರದಲ್ಲಿ ರಣವೀರ್ ಸಿಂಗ್ ಆಗಿರಲಿ ಅಥವಾ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಆಗಿರಲಿ ಆದಿತ್ಯ ಧರ್ ಅವರ ಚಿತ್ರಕ್ಕೆ ಇಡೀ ತಾರಾಬಳಗವೇ ಸಿನಿಮಾಗೆ ಜೀವ ತುಂಬಿದೆ. ಕೆಲವರು ಸಲ್ಮಾನ್ ಖಾನ್ ಹೆಸರನ್ನು ತೇಲಿ ಬಿಟ್ಟರೆ, ಇನ್ನೂ ಕೆಲವರು ''ಧುರಂಧರ್ 2'' ನಲ್ಲಿ ಬಡೇ ಸಾಬ್ ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಿದ್ದಾರೆ ಎಂದು ಕಮೆಂಟ್‌ ಮಾಡಿದ್ದರು. ಹಾಗಾದ್ರೆ ಈ ಪಾತ್ರ ನಿರ್ವಹಿಸಿರೋದು ಯಾರು?

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ?

ಧುರಂಧರ್ 2 ಸಿನಿಮಾ -

Yashaswi Devadiga
Yashaswi Devadiga Mar 20, 2026 7:27 PM

ಕಥೆ, ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಜೊತೆಗೆ, ಸ್ಪೈ ಥ್ರಿಲ್ಲರ್ ಧುರಂಧರ್ (Dhurandhar 2 Movie ) ತನ್ನ ತಾರಾಬಳಗಕ್ಕಾಗಿ ಪ್ರಶಂಸೆಯನ್ನು ಪಡೆಯಿತು. ಹಮ್ಜಾ ಪಾತ್ರದಲ್ಲಿ ರಣವೀರ್ ಸಿಂಗ್ ಆಗಿರಲಿ ಅಥವಾ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ (arjun rampal) ಆಗಿರಲಿ ಆದಿತ್ಯ ಧರ್ ಅವರ ಚಿತ್ರಕ್ಕೆ ಇಡೀ ತಾರಾಬಳಗವೇ ಸಿನಿಮಾಗೆ ಜೀವ ತುಂಬಿದೆ. ಕೆಲವರು ಸಲ್ಮಾನ್ ಖಾನ್ ಹೆಸರನ್ನು ತೇಲಿ ಬಿಟ್ಟರೆ, ಇನ್ನೂ ಕೆಲವರು ''ಧುರಂಧರ್ 2'' ನಲ್ಲಿ ಬಡೇ ಸಾಬ್ (bade sahab) ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಿದ್ದಾರೆ ಎಂದು ಕಮೆಂಟ್‌ ಮಾಡಿದ್ದರು. ಹಾಗಾದ್ರೆ ಈ ಪಾತ್ರ ನಿರ್ವಹಿಸಿರೋದು ಯಾರು?

ಇದನ್ನೂ ಓದಿ: Rishab Shetty: ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್? ತಮ್ಮ ಬ್ಯಾನರ್‌ನಲ್ಲೇ ಈ ಹೊಸ ಸಿನಿಮಾ!

ಮೊದಲ ಭಾಗವಾದ ಧುರಂಧರ್ ನಲ್ಲಿ ಬಡೇ ಸಾಹೇಬ್ ಎಂಬ ಪಾತ್ರವನ್ನು ಉಲ್ಲೇಖಿಸಲಾಗಿದೆ. ಎರಡನೇ ಭಾಗಕ್ಕಾಗಿ ಜನರು ಈ ಪಾತ್ರ ಯಾರು ನಿಭಾಯಿಸುತ್ತಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದರು

ಕೆಲವರು ಧುರಂಧರ್ 2 ರಲ್ಲಿ ಸಲ್ಮಾನ್ ಖಾನ್ ಬಡೇ ಸಾಹೇಬ್ ಪಾತ್ರವನ್ನು ನಿರ್ವಹಿಸಬಹುದು ಎಂದು ಊಹಿಸಿದರೆ, ಇನ್ನು ಕೆಲವರು ಧುರಂಧರ್ 2 ರಲ್ಲಿ ಇಮ್ರಾನ್ ಹಶ್ಮಿ ನಟಿಸಲಿದ್ದಾರೆ ಎಂದು ಊಹಿಸಿದರು. ಆದಾಗ್ಯೂ, ಧುರಂಧರ್ 2 ರಲ್ಲಿ ಇಮ್ರಾನ್ ಅಥವಾ ಸಲ್ಮಾನ್ ಇಬ್ಬರೂ ಬಡೇ ಸಾಹೇಬ್ ಪಾತ್ರವನ್ನು ನಿರ್ವಹಿಸಲಿಲ್ಲ.

ರಾಷ್ಟ್ರೀಯ ಪ್ರಶಸ್ತಿ

ಧುರಂಧರ್ 2 ರಲ್ಲಿ ಬಡೇ ಸಾಹೇಬ್ ಅಕಾ ದಾವೂದ್ ಇಬ್ರಾಹಿಂ ಪಾತ್ರದಲ್ಲಿ ನಟಿಸಿರುವ ನಟ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದು, ಹಾಲಿವುಡ್‌ನಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಈ ನಟ "ದಿ ಹಂಟ್: ದಿ ರಾಜೀವ್ ಗಾಂಧಿ ಅಸಾಸಿನೇಷನ್ ಕೇಸ್" ಖ್ಯಾತಿಯ ಡ್ಯಾನಿಶ್ ಇಕ್ಬಾಲ್.

ಧುರಂಧರ 2 ಡ್ಯಾನಿಶ್ ಇಕ್ಬಾಲ್ ಯಾರು?

ಡ್ಯಾನಿಶ್ ಇಕ್ಬಾಲ್ ಒಬ್ಬ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ, ನಟನೆಯ ಜೊತೆಗೆ, ನಿರ್ದೇಶಕ, ತರಬೇತುದಾರ ಮತ್ತು ಗೀತರಚನೆಕಾರರೂ ಆಗಿದ್ದಾರೆ. ಅವರು ಹುಮಾ ಖುರೇಷಿ ಅವರ ಮಹಾರಾಣಿ 2 ಸರಣಿಯಿಂದ ಜನಪ್ರಿಯತೆಯನ್ನು ಗಳಿಸಿದರು. ಇನ್ನು ''ಆರಣ್ಯಕ್''.. ''ಫರಾಜ್''.. ''ಭಕ್ಷಕ್'' ಹೀಗೆ ಹಲವು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾನಾ ಪಾಟೇಕರ್ ಜೊತೆ ಇವರು ಅಭಿನಯಿಸಿರುವ ''ಸಂಕಲ್ಪ'' ಇತ್ತೀಚೆಗಷ್ಟೇ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ.



ಬಡೇ ಸಾಬ್ ಪಾತ್ರವನ್ನೇನೋ ದಾನಿಶ್ ಇಕ್ಬಾಲ್ ಮಾಡುತ್ತಿದ್ದರು. ಆದರೆ ತಾನು ಮಾಡುತ್ತಿರುವ ಪಾತ್ರದ ಹೆಸರು ಬಡೇ ಸಾಬ್ ಎನ್ನುವ ವಿಚಾರ ದಾನಿಶ್ ಇಕ್ಬಾಲ್‌ಗೆ ಕೊನೆವರೆಗೆ ಗೊತ್ತೇ ಇರಲಿಲ್ಲ. ತನ್ನ ಪಾತ್ರಕ್ಕಿರುವ ಪ್ರಾಮುಖ್ಯತೆಯ ಅರಿವು ಇರಲಿಲ್ಲ. ದಾವೂದ್ ಇಬ್ರಾಹಿಂ ನೆರಳಿನಂತೆ ಇರುವ ಪಾತ್ರ ಇದು ಎಂದಷ್ಟೇ ದಾನಿಶ್ ಇಕ್ಬಾಲ್‌ಗೆ ಆದಿತ್ಯ ಧರ್ ಹೇಳಿದ್ದರು.

ಇದನ್ನೂ ಓದಿ: Ranveer Singh: ʻಧುರಂಧರ್ 2 ಭಾರಿ ನಿರಾಶೆ ಮೂಡಿಸಿದೆ..ʼ ಎಂದ ನಟಿ ರಮ್ಯಾ; ಅದಕ್ಕೆ ನೀಡಿದ ಕಾರಣಗಳು ಇಲ್ಲಿವೆ!

ರಣವೀರ್‌ ಸಿಂಗ್‌, ಸಾರಾ ಅರ್ಜುನ್‌ ಅಭಿನಯದ ʻಧುರಂಧರ್‌: ದಿ ರಿವೆಂಜ್ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿಯಂತೆ ಅಬ್ಬರಿಸುತ್ತಿದೆ. ಸಾಕಷ್ಟು ಮಂದಿ ಈ ಸಿನಿಮಾವನ್ನು ಮನಸಾರೆ ಹೊಗಳುತ್ತಿದ್ದಾರೆ. ಜೊತೆಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. . ಮುಂಬೈ, ದೆಹಲಿ ಸೇರಿದಂತೆ ಬೆಂಗಳೂರಿನಲ್ಲೂ ಸಿನಿಮಾ ಅದ್ಭುತವಾಗಿ ಪ್ರದರ್ಶನ ಕಾಣುತ್ತಾ ಇದೆ. ಈ ಸಿನಿಮಾ ನೋಡಿದ ಬೆಂಗಳೂರು ಪ್ರೇಕ್ಷಕರು ಕೂಡ ಖುಷಿಯಾಗಿದ್ದಾರೆ. ‘